ಆ ಪತ್ರದ ಕೊನೆಯಲ್ಲಿ ಸಾವಿತ್ತು..!! 💔
ಆ ಪತ್ರದ ಕೊನೆಯಲ್ಲಿ ಸಾವಿತ್ತು…! 💔 ಅಶ್ವಸೂರ್ಯ/ಶಿವಮೊಗ್ಗ ನಾನು ಯಾರನ್ನು ಪ್ರೀತಿಸಿಲ್ಲ ,ಆದರೆ ನಾನು ಅಪ್ಪ,ಅಮ್ಮ ನೋಡಿದ ಹುಡುಗನನ್ನು ಇಷ್ಟಪಟ್ಟಿದ್ದೇನೆ. ಅವನೇ ಈಗ ನನ್ನ ಬದುಕು, ಬವಣೆ, ಕನಸು ಅಂತ ಕನವರಿಸುತ್ತಿದ್ದೇನೆ. ಆತನ ಹೆಸರು ಮನೋಜ್. ನನ್ನ ಹೃದಯದಲ್ಲಿ ಅರಳಿದ ಮೊದಲ ಮಿಡಿತ.ಮದುವೆಗೂ ಮುನ್ನ ವಧು ಪರೀಕ್ಷೆಗೆಂದು ಅಂದು ಆತ ನನ್ನನ್ನು ನೋಡಲು ನಮ್ಮ ಮನೆಗೆ ಬಂದಿದ್ದ.ಆತನ ಕಣ್ಣುಗಳಲ್ಲಿ ಹೊಳಪಿತ್ತು. ಕೆನ್ನೆಯ ಮೇಲೆ ಹೆಮ್ಮೆಯಿಂದ ಬೀಗುತ್ತಿದ್ದ ಗುಳಿಯಿತ್ತು. ಆತ ನನ್ನನ್ನು ಎವೆಯಿಕ್ಕದೆ ಕಣ್ಣರಳಿಸಿ ನೋಡುತ್ತಿದ್ದ. ಸ್ವಲ್ಪ ಸಮಯದ…