ಸಿ ಟಿ ರವಿ ಹೇಳಿಕೆಯನ್ನು ಖಂಡಿಸಿದ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಪುಷ್ಪಲತಾ ರವೀಂದ್ರ
ASHWASURYA/SHIVAMOGGA
ಅಶ್ವಸೂರ್ಯ/ಶಿವಮೊಗ್ಗ: ನಿನ್ನೆ ವಿಧಾನ ಪರಿಷತ್ತಿನ ಅಧಿವೇಶನದ ಸಂಧರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿಯವರು ಬಳಸಿದ ಪದ ಅತ್ಯಂತ ಖಂಡನೀಯವಾಗಿದ್ದು ಕೂಡಲೇ ಅವರನ್ನು ಸಭಾಪತಿಗಳು ವಿಧಾನ ಪರಿಷತ್ತಿನಿಂದ ವಜಾ ಮಾಡಬೇಕು ಹಾಗೂ ಅವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕಾಗಿದೆ. ಭಾರತಮಾತೆಗೆ ಜೈಕಾರ ಹಾಕುವಂತಹ ಗುತ್ತಿಗೆಯನ್ನು ಇವರೇ ಪಡೆದಿರುವ ರೀತಿಯಲ್ಲಿ ಮನಬಂದಂತೆ ಆಡುವ ಬಿಜೆಪಿಗರು ಹೆಣ್ಣುಮಕ್ಕಳಿಗೆ ನೀಡುವ ಗೌರವ ಇದೇನಾ.? ಈ ರೀತಿಯಾಗಿ ಹೆಣ್ಣುಮಕ್ಕಳನ್ನು ಯಾವುದೇ ಪಕ್ಷದ ನಾಯಕರು ಮಾತಾಡಿದರು ಅಂತರವನ್ನು ಉಗ್ರಶಿಕ್ಷೆಗೆ ಗುರಿಪಡಿಸುವ ಕಾನೂನು ತರಬೇಕಿದೆ. ಅದು ರಾಜಕಾರಣಿಗಳೇ ಆಗಿರಲಿ ಸಾಮಾನ್ಯರೇ ಆಗಿರಲಿ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕಿದೆ.ಹೆಣ್ಣುಮಕ್ಕಳನ್ನು ತುಚ್ಚವಾಗಿ ಮಾತಾನಾಡುವ ಅಂತಹ ನೀಚ ನಾಲಿಗೆಯ ಮನಸ್ಥಿತಿಯವರಿಂದ ಜನಸಾಮಾನ್ಯರು ಕೂಡ ದೂರ ಉಳಿಯ ಬೇಕಾಗಿದೆ.ಅಂತವರನ್ನು ಸುಮ್ಮನೆ ಬಿಟ್ಟರೆ ಇವರ ಪರ ನಿಲ್ಲುವ ಜನರಿಂದಾನೇ ಅವರು ಹೆಣ್ಣು ಮಕ್ಕಳ ಮೇಲೆ ದರ್ಪ ತೋರಿಸುತ್ತಾ ಮೆರೆದಾಡುತ್ತಾರೆ.ಅಂತಹವರನ್ನು ರಾಜಕೀಯದಲ್ಲಿ ಮೂಲೆಗುಂಪು ಮಾಡಿ ಮನೆಗೆ ಕಳುಹಿಸಬೇಕಿದೆ.
ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಹಾಗೂ ಮಾನಸಿಕ ಕಿರುಕುಳಗಳನ್ನು ನೋಡುತ್ತಿದ್ದೇವೆ.ಕೆಲವರು ಅಧಿಕಾರ ಹಾಗೂ ಹಣದ ಮದದಲ್ಲಿ ಹೆಣ್ಣುಮಕ್ಕಳಿಗೆ ಹೀನಾಮಾನ ಬೈಯೋದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ..ಹೆಣ್ಣುಮಕ್ಕಳು ಮನಸು ಮಾಡಿದ್ದೆ ಆದರೆ ಅವರನ್ನು ಅಂತವರ ದರ್ಪವನ್ನು ಮಣ್ಣು ಪಾಲು ಮಾಡಲು ಶಕ್ತರಾಗಿರುತ್ತಾರೆ ಅನ್ನೋದನ್ನ ಮರೆಯಬಾರದು.
ಯಾವುದೇ ಪಕ್ಷದ ನಾಯಕರಾಗಿದ್ದರು ಮೊದಲು ತನ್ನ ನಾಲಿಗೆಯನ್ನು ಶುದ್ದವಾಗಿಟ್ಟುಕೊಂಡು ಹೆಣ್ಣುಮಕ್ಕಳಿಗೆ ಗೌರವ ಕೊಡುವುದನ್ನ ಕಲಿಯಬೇಕಿದೆ…ಅವರ ಹೆತ್ತವಳು ಕೂಡ ಹೆಣ್ಣು ಎಂಬುದನ್ನು ಆ ದುರಾಹಂಕಾರಿಗಳು ಮರೆಯಬಾರದು. ಹಣ, ಅಧಿಕಾರ ಶಾಶ್ವತವಲ್ಲ ಎಂಬುದನ್ನು ಮರೆಯಬಾರದು ದುರಾಹಂಕಾರಿಗಳು.
- ಪುಷ್ಪಲತಾರವೀಂದ್ರ
- ರಾಜ್ಯ ಮಹಿಳಾ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ
- ಶಿವಮೊಗ್ಗ