ಏಷ್ಯಾ ಕಪ್ U-19: ವೈಭವ್ ಬ್ಯಾಟಿಂಗ್ ಅಬ್ಬರಕ್ಕೆ ವಿಶ್ವ ಕ್ರಿಕೆಟ್ ಸಲಾಮ್.! ಒಂದೇ ಪಂದ್ಯದಲ್ಲಿ 14 ಸಿಕ್ಸರ್ ಬಾರಿಸಿ ದಾಖಲೆ ಬ್ರೇಕ್ ಮಾಡಿದ ಸೂರ್ಯವಂಶಿ.!
news.ashwasurya.in

ಅಶ್ವಸೂರ್ಯ/ದುಬೈ : 2025ರ ಅಂಡರ್-19 ಏಷ್ಯಾ ಕಪ್ನಲ್ಲಿ ಭಾರತದ ಯಂಗ್ ಬ್ಯಾಟರ್ ವೈಭವ್ ಸೂರ್ಯವಂಶಿ ಎರಡು ದೊಡ್ಡ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ವೈಭವ್ ಸೂರ್ಯವಂಶಿ
ದುಬೈನಲ್ಲಿ ನಡೆಯುತ್ತಿರುವ 2025ರ ಅಂಡರ್-19 ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತದ ವೈಭವ್ ಸೂರ್ಯವಂಶಿ ಮೊದಲ ಪಂದ್ಯದಲ್ಲೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ.! ಅಂಡರ್-19 ಏಷ್ಯಾ ಕಪ್ನ ಮೊದಲ ಲೀಗ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ವಿಶ್ವ ಕ್ರಿಕೆಟ್ ದಿಗ್ಗಜರು ಅಭಿಮಾನಿಗಳನ್ನು ತನ್ನತ್ತ ನೋಡುವಂತೆ ಮಾಡಿದ್ದಾರೆ.14 ವರ್ಷದ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಪ್ರದರ್ಶನಕ್ಕೆ ಇಡೀ ಕ್ರಿಕೆಟ್ (Cricket) ಜಗತ್ತು ಎದ್ದು ನಿಂತು ಚಪ್ಪಾಳೆ ತಟ್ಟಿದೆ. ಯುಎಇ (UAE) ಅಂಡರ್-19 ತಂಡದ ವಿರುದ್ಧದ ಪಂದ್ಯದಲ್ಲಿ ವೈಭವ್ ತಮ್ಮ ಬ್ಯಾಟಿಂಗ್ ಪರಾಕ್ರಮ ತೋರಿಸಿದ್ದಾರೆ.
ಯುಎಇ ವಿರುದ್ಧ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ ಯುವ ಬ್ಯಾಟರ್ ವೈಭವ್ ದ್ವಿಶತಕವನ್ನು ತಪ್ಪಿಸಿಕೊಂಡಿದ್ದಾರೆ. ಆದರೆ ಅವರು ತಮ್ಮ ಅಂಡರ್ 19 ಏಕದಿನ ಪಂದ್ಯದಲ್ಲಿ ವೃತ್ತಿಜೀವನದ ಅತಿದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿದ್ದಾರೆ.
ಮನಮೋಹಕ ಇನ್ನಿಂಗ್ಸ್ ಆಡಿದ
ವೈಭವ್ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ಮುಂದಿನ 16 ಎಸೆತಗಳಲ್ಲಿ ಶತಕ ಪೂರೈಸಿದರು. ವೈಭವ್ ಒಟ್ಟು 56 ಎಸೆತಗಳಲ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಈ ಪಂದ್ಯದಲ್ಲಿ ವೈಭವ್ 95 ಎಸೆತಗಳಲ್ಲಿ 180.00 ಸ್ಟ್ರೈಕ್ ರೇಟ್ನೊಂದಿಗೆ 171 ರನ್ ಗಳಿಸಿದರು. ತಮ್ಮ ಮನಮೋಹಕ ಇನ್ನಿಂಗ್ಸ್ನಲ್ಲಿ 14 ಸಿಕ್ಸರ್ಸ್ ಮತ್ತು 9 ಬೌಂಡರಿ ಬಾರಿಸಿದರು. ಈ 14 ಸಿಕ್ಸರ್ಗಳೊಂದಿಗೆ, ವೈಭವ್ ಎರಡು ಪ್ರಮುಖ ದಾಖಲೆಗಳನ್ನು ಸೃಷ್ಟಿಸಿದರು. ಈ ಇನ್ನಿಂಗ್ಸ್ ಭಾರತ ತಂಡವು ಅಂಡರ್-19 ಏಷ್ಯಾ ಕಪ್ನಲ್ಲಿ ಅತ್ಯಧಿಕ ಮೊತ್ತವನ್ನು ಗಳಿಸಲು ಸಹಾಯ ಮಾಡಿತು.
ಅಂಡರ್-19 ಏಷ್ಯಾ ಕಪ್ನಲ್ಲಿ ವೈಭವ್ ಸೂರ್ಯವಂಶಿ ತಮ್ಮ ಇನ್ನಿಂಗ್ಸ್ನಲ್ಲಿ 14 ಸಿಕ್ಸರ್ ಬಾರಿಸುವ ಮೂಲಕ ಎರಡು ಏಷ್ಯನ್ ದಾಖಲೆಗಳನ್ನು ಮುರಿದರು. ವೈಭವ್ಗಿಂತ ಮೊದಲು, ಅಫ್ಘಾನಿಸ್ತಾನದ ದರ್ವಿಶ್ ರಸೂಲಿ 2017 ರಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಪಂದ್ಯದಲ್ಲಿ ಯುಎಇ ವಿರುದ್ಧದ ಇನ್ನಿಂಗ್ಸ್ನಲ್ಲಿ 10 ಸಿಕ್ಸರ್ಗಳನ್ನು ಬಾರಿಸಿದ್ದರು. ಆದರೆ ಈಗ ಸೂರ್ಯವಂಶಿ ಅಂಡರ್-19 ಏಷ್ಯಾ ಕಪ್ನಲ್ಲಿ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆಯನ್ನು ಮಾಡಿದ್ದಾರೆ. ವೈಭವ್ 14 ಸಿಕ್ಸರ್ಗಳನ್ನು ಬಾರಿಸುವ ಮೂಲಕ ರಸೂಲಿ ದಾಖಲೆಯನ್ನು ಮುರಿದಿದ್ದಾರೆ.

ಅತಿಹೆಚ್ಚು ಸಿಕ್ಸರ್ಸ್ ರೆಕಾರ್ಡ್
ವೈಭವ್ ಸೂರ್ಯವಂಶಿ ತಮ್ಮ ಹೆಸರಿಗೆ ಕರೆದುಕೊಂಡಿದ್ದಾರೆ. ಇನ್ನಿಂಗ್ಸ್ನಲ್ಲಿ 14 ಸಿಕ್ಸರ್ ಬಾರಿಸುವ ಮೂಲಕ ಮತ್ತೊಂದು ದಾಖಲೆಯನ್ನು ಮಾಡಿದರು. ಅಂಡರ್-19 ಏಷ್ಯಾ ಕಪ್ನಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದಾರೆ.
ವೈಭವ್ಗಿಂತ ಮೊದಲು, ಈ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ಸ್ ಬಾರಿಸಿದ ದಾಖಲೆಯನ್ನು ರಸೂಲಿ ಹೊಂದಿದ್ದರು.

ರಸೂಲಿ 22 ಸಿಕ್ಸರ್ಗಳನ್ನು ಬಾರಿಸಿದ್ದರು. ಈಗ, ವೈಭವ್ ಒಟ್ಟು 26 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ವೈಭವ್ ಎರಡನೇ ವಿಕೆಟ್ಗೆ ಆರನ್ ಜಾರ್ಜ್ ಅವರೊಂದಿಗೆ 212 ರನ್ಗಳ ಸೊಗಸಾದ ಜೊತೆಯಾಟವಾಡಿದರು.


