ಕೆ.ಎಂ.ಎಫ್ ನೇಮಕಾತಿ : ಸಹಕಾರಿ ಹಾಲು ಉತ್ಪಾದಕರ ಸಂಘದಲ್ಲಿ 194 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ.
news.ashwasurya.in

ಅಶ್ವಸೂರ್ಯ/ಬೆಂಗಳೂರು : ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (KMF) ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಮೂಲಕ ಕೆಎಂಎಫ್ ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ 194 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ
ಕೆಎಂಎಫ್ ಶಿಮುಲ್ ನೇಮಕಾತಿ
ಕೆಎಂಎಫ್ –
ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ(KMF) ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ವಿವಿಧ ಗ್ರೂಪ್ ಎ, ಬಿ, ಸಿ ಹುದ್ದೆಗಳ(Jobs) ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೆಎಂಎಫ್ ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ(KMF ಖಾಲಿ ಇರುವ ಒಟ್ಟು 194 ಟೆಕ್ನಿಷಿಯನ್, ಕೆಮಿಸ್ಟ್, ಅಕೌಂಟೆಂಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲಿಸಬಹುದು.
KMF SHIMUL ನೇಮಕಾತಿ ಅಧಿಸೂಚನೆ ಪ್ರಕಾರ ಡಿಸೆಂಬರ್ 14, 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು (Last Date), ಅರ್ಜಿ ಸಲ್ಲಿಕೆಗೆ ಬೇಕಾದ ಹುದ್ದೆಯ ಕುರಿತಾದ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಎಂಬಿತ್ಯಾದಿ ಕುರಿತಾದ ಮಾಹಿತಿ ಇಲ್ಲಿದೆ.

ಖಾಲಿ ಇರುವ ಹುದ್ದೆಗಳ ವಿವರ ಹುದ್ದೆ ವಿವರ:
ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ)- 17
ಸಹಾಯಕ ವ್ಯವಸ್ಥಾಪಕರು (ಆಡಳಿತ) – 1
ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) – 3
ಎಂಐಎಸ್/ ಸಿಸ್ಟಂ ಆಫೀಸರ್- 1
ಮಾರುಕಟ್ಟೆ ಅಧಿಕಾರಿ – 2
ತಾಂತ್ರಿಕ ಅಧಿಕಾರಿ – 18
ಕೆಮಿಸ್ಟ್ ದರ್ಜೆ -1- 21
ಆಡಳಿತ ಸಹಾಯಕ ದರ್ಜೆ – 17
ಲೆಕ್ಕ ಸಹಾಯಕ ದರ್ಜೆ 12
ಮಾರುಕಟ್ಟೆ ಸಹಾಯಕ ದರ್ಜೆ-2 – 10
ಕೆಮಿಸ್ಟ್ ದರ್ಜೆ-2 – 28
ಕಿರಿಯ ಸಿಸ್ಟಂ ಆಪರೇಟರ್ -13
ಶೀಘ್ರಲಿಪಿಗಾರರು ದರ್ಜೆ2 -1
ಕಿರಿಯ ತಾಂತ್ರಿಕರು – 50
- ವಿದ್ಯಾರ್ಹತೆ:
- ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಬಿಇ, ಎಂಬಿಎ, ಬಿಕಾಂ ಪದವಿಯನ್ನು ಪೂರ್ಣಗೊಳಿಸಿರಬೇಕು.
- ವಯೋಮಿತಿ:
ನೇಮಕಾತಿ ಅಧಿಸೂಚನೆ ಪ್ರಕಾರ
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರವರ್ಗ-2ಎ, 2ಬಿ, 3ಎ, 3ಬಿ & ಒಬಿಸಿ ಅಭ್ಯರ್ಥಿಗಳಿಗೆ- 3 ವರ್ಷ ಹಾಗೂ
SC/ST ಅಭ್ಯರ್ಥಿಗಳಿಗೆ- 5 ವರ್ಷ ಮತ್ತು PWD/ ವಿಧವಾ ಅಭ್ಯರ್ಥಿಗಳಿಗೆ- 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
• ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ SC/ST/ಪ್ರವರ್ಗ-1 ಹಾಗೂ PWD ಅಭ್ಯರ್ಥಿಗಳು- 500 ರೂ. Arji ಶುಲ್ಕ ಹಾಗೂ ಉಳಿದ ಎಲ್ಲಾ ಅಭ್ಯರ್ಥಿಗಳು- 1,000 ರೂ. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು ಎಂದು ನೇಮಕಾತಿ ಅಧಿಸೂಚನೆಯಲ್ಲಿ ನಮೂದಿಸಲಾಗಿದೆ.
- ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಡಿಸೆಂಬರ್ 14 ಆಗಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು shimul.coop ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಕೆಎಂಎಫ್ (KMF – ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ) ನಲ್ಲಿ ಉದ್ಯೋಗಾವಕಾಶಗಳು ಲಭ್ಯವಿವೆ, ವಿಶೇಷವಾಗಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಒಕ್ಕೂಟದಲ್ಲಿ (SHIMUL) 194 ಹುದ್ದೆಗಳಿಗೆ (ಟೆಕ್ನಿಷಿಯನ್, ಕೆಮಿಸ್ಟ್, ಅಕೌಂಟೆಂಟ್, ಸಹಾಯಕ ವ್ಯವಸ್ಥಾಪಕರು ಇತ್ಯಾದಿ) ಡಿಸೆಂಬರ್ 14, 2025 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ, ಇದಕ್ಕೆ ಪದವಿ, ಡಿಪ್ಲೊಮಾ ಮುಂತಾದ ವಿದ್ಯಾರ್ಹತೆ ಮತ್ತು ನಿಗದಿತ ವಯೋಮಿತಿ ಅಗತ್ಯವಿದೆ. ಹೆಚ್ಚಿನ ವಿವರಗಳು ಕೆಎಂಎಫ್‌ನ ಅಧಿಕೃತ ವೆಬ್‌ಸೈಟ್ ಅಥವಾ ಸಂಬಂಧಪಟ್ಟ ಒಕ್ಕೂಟದ ವೆಬ್‌ಸೈಟ್‌ನಲ್ಲಿ (www.shimul.coop) ಲಭ್ಯವಿವೆ.

ಪ್ರಸ್ತುತ ನೇಮಕಾತಿ (SHIMUL – 2025):
- ಸಂಸ್ಥೆ: ಕೆಎಂಎಫ್ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (SHIMUL).
- ಹುದ್ದೆಗಳು: ಟೆಕ್ನಿಷಿಯನ್, ಕೆಮಿಸ್ಟ್, ಅಕೌಂಟೆಂಟ್, ಸಹಾಯಕ ವ್ಯವಸ್ಥಾಪಕರು, ವಿಸ್ತರಣಾಧಿಕಾರಿ ದರ್ಜೆ-3 ಇತ್ಯಾದಿ.
- ಒಟ್ಟು ಹುದ್ದೆಗಳು: 194.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 14, 2025.
- ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ.
ಅರ್ಜಿ ಸಲ್ಲಿಸಲು ಅಗತ್ಯವಿರುವ ಮಾಹಿತಿ:
- ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ಡಿಪ್ಲೊಮಾ, ಬಿಇ, ಎಂಬಿಎ, ಬಿಕಾಂ, ಬಿಎಸ್ಸಿ (ಕೃಷಿ/ಕೆಮಿಸ್ಟ್ರಿ) ಮುಂತಾದ ಪದವಿಗಳು.
- ವಯೋಮಿತಿ: ಕನಿಷ್ಠ 18, ಗರಿಷ್ಠ 40 ವರ್ಷ (ವರ್ಗಾನುಸಾರ ಸಡಿಲಿಕೆ ಇದೆ).
- ಅರ್ಜಿ ಶುಲ್ಕ: ಸಾಮಾನ್ಯ/ಓಬಿಸಿ ರೂ. 1000, ಎಸ್‌ಸಿ/ಎಸ್‌ಟಿ ರೂ. 500 (SHIMUL ನೇಮಕಾತಿ ಪ್ರಕಾರ).
- ವೇತನ: ಹುದ್ದೆಗಳ ಪ್ರಕಾರ ವೇತನ ಶ್ರೇಣಿ (ಉದಾ. ಸಹಾಯಕ ವ್ಯವಸ್ಥಾಪಕರಿಗೆ ರೂ. 83,700 – 1,55,200).
ಅರ್ಜಿ ಸಲ್ಲಿಸಲು ಕ್ರಮ:
- ಕೆಎಂಎಫ್ ಶಿಮುಲ್ ವೆಬ್‌ಸೈಟ್ ಅಥವಾ ಸಂಬಂಧಿತ ಒಕ್ಕೂಟದ ವೆಬ್ಸೈಟ್ಗೆ ಭೇಟಿ ನೀಡಿ.
- ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
- ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಗಮನಿಸಿ: ಕೆಎಂಎಫ್‌ನ ವಿವಿಧ ಜಿಲ್ಲಾ ಒಕ್ಕೂಟಗಳು ನಿಯಮಿತವಾಗಿ ನೇಮಕಾತಿಗಳನ್ನು ಪ್ರಕಟಿಸುತ್ತವೆ, ಆದ್ದರಿಂದ ನಿರಂತರವಾಗಿ ಅಧಿಕೃತ ಅಧಿಸೂಚನೆಗಳನ್ನು ಪರಿಶೀಲಿಸುವುದು ಮುಖ್ಯ.


