ಪ್ರೀತಿಸಿದವನ ಜೊತೆಗೆ ಹೋಗವ ಮುನ್ನ ಎಚ್ಚರ.! ಯುವತಿಯರೇ ಪ್ರೀತಿಸಿದವನು ನಿಮ್ಮನ್ನು ಎಕ್ಸ್‌ಚೆಂಜ್‌ ಮಾಡಿ ಬಿಡಬಹುದು.!!

ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನಲ್ಲಿ ಕಾಮುಕರ ಗ್ಯಾಂಗ್ ಒಂದು ಫುಲ್ ಆ್ಯಕ್ಟೀವ್ ಆಗಿದೆ. ಪ್ರೀತಿ ಅನ್ನೋ ಪವಿತ್ರವಾದ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಭಲೇಗೆ ಕೆಡವಿಕೊಂಡು ಎನು ಅರಿಯದ ಹೆಣ್ಣುಮಕ್ಕಳ ಬಾಳಲ್ಲಿ ಚೆಲ್ಲಾಟವಾಡುತ್ತಿದ್ದಾರೆ.!.ಇಂದು ಗರ್ಲ್ ಫ್ರೆಂಡ್ ಶೇರಿಂಗ್ ಅನ್ನೊ ಕೆಟ್ಟ ಕರಾಳ ದಂಧೆಯಿಂದ ಯುವತಿಯರಿಗೆ ರಕ್ಷಣೆ ಇಲ್ಲದಂತಾಗಿದೆ.ಇದೀಗ ಈ ನಿಚ ಕೆಲಸ ಮಾಡಿದ ಮಾನಗೇಡಿ ಕಲಿಯುಗದ ಕೀಚಕರನ್ನು ಪೊಲೀಸರು ಆರೇಸ್ಟ್ ಮಾಡಿದ್ದಾರೆ‌. 

ವೈಫ್ ಸ್ವ್ಯಾಪಿಂಗ್ ಬಗ್ಗೆ ನಾವುಗಳು ಕೇಳಿದ್ದೇವು ಆದರೆ ಈಗ ಗರ್ಲ್ ಫ್ರೆಂಡ್ ಸ್ವ್ಯಾಪಿಂಗ್ ಅಂತೆ.!! ಈ ವಿಷಯ ಕೇಳೋದಕ್ಕೆ ಅಸಹ್ಯ ಅನ್ಸೋತ್ತೆ. ಆದರೆ ಈ ನಾಚಿಕೆಗೇಡಿನ ಕೆಲಸ ಮಾಡುತ್ತಿದ್ದ ಇಬ್ಬರು ಕಾಮುಕ ಯುವಕರು ಪೊಲೀಸರ ಅತಿಥಿಗಳಾಗಿದ್ದಾರೆ. ಹೌದು.. ಪಾರ್ಟಿಗೆ ಬನ್ನಿ ಅಂತಾ ಕರೆದು ಪರಸ್ಪರ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ಮಾಡುತ್ತಿದ್ದ ಕಾಮುಕರ ಗ್ಯಾಂಗೊಂದು ಸಿಸಿಬಿ ಖೆಡ್ಡಾಗೆ ಬಿದ್ದಿದೆ. ಈ ಫೋಟೋದಲ್ಲಿರುವ ವಿಕೃತರೆ ಬಂಧಿತ ಆರೋಪಿಗಳು. ಈ ಕಾಮಾಂದರ ಹೆಸರು ಹರೀಶ್ ಮತ್ತು ಹೇಮಂತ್ , ನೋಡೋದಕ್ಕೆ ಅಮಾಯಕರಂತೆ‌ ಕಂಡರು ಇವರು ಮಾಡಿರೋದು ಮಾತ್ರ ಪಾಪದ ಕೆಲಸ.

ಹೆಣ್ಣುಮಕ್ಕಳ ಜೋತೆಗೆ ಪ್ರೀತಿಸಿದ ನಾಟಕವಾಡಿ ಅವರ ಜೀವನದಲ್ಲಿ ಚೆಲ್ಲಾಟವಾಡುವ ಕೆಲಸ ಮಾಡಿದ್ದಾರೆ.!
ಹೌದು.. ʼಸ್ವಿಂಗರ್ಸ್’ ಅನ್ನೋ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದ  ಹರೀಶ್, ಹೇಮಂತ್ ಪರಿಚಯಸ್ಥ ಯುವತಿಯರನ್ನು ಸ್ನೇಹಿತನ ಜೊತೆ ಬೆಡ್ ಶೇರ್ ಮಾಡುವಂತೆ ಬಲವಂತ ಮಾಡುತ್ತಿದ್ದರಂತೆ.! ಇದಕ್ಕೆ ಒಪ್ಪದಿದ್ದ ಕಾರಣಕ್ಕೆ ಸ್ನೇಹಿತರ ಜೊತೆಗೆ ಸೇರಿ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಸದ್ಯ ನೊಂದ ಸಂತ್ರಸ್ಥೆ ನೀಡಿದ  ದೂರಿನ ಆಧಾರದ ಮೇಲೆ  ತನಿಖೆ ನಡೆಸಿದ ಸಿಸಿಬಿ ಪೊಲೀಸರು ಕರಾಳ ದಂಧೆ ನಡೆಸುತ್ತಿದ್ದ ಕಾಮುಕರನ್ನು ಬಲೆಗೆ ಕೆಡವಿದ್ದಾರೆ. ಇನ್ನೂ ಹರೀಶ್ ಎಂಬಾತ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ, ಪ್ರೀತಿ ಪ್ರೇಮ ಅಂತ ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದ. ಜೋಡಿ ಹಕ್ಕಿಯಂತೆ ಎಲ್ಲಾ ಕಡೆ ಸುತ್ತಾಡಿದ್ದಾರೆ.ನಂತರ ಇತ್ತೀಚೆಗೆ ಆರೋಪಿ ಹರೀಶ್ ಪ್ರೀತಿಸಿದವಳ‌ ಮುಂದೆ ತನ್ನ ಅಸಲಿ ಮುಖ ತೋರಿಸಿದ್ದಾನೆ.
ಬೆಂಗಳೂರು ಹೊರ ವಲಯದಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು. ಆ ಪಾರ್ಟಿಗೆ ಕಪಲ್ಸ್ ಜೊತೆಗೆ ಬರ್ತಿದ್ದ ಆಸಾಮಿಗಳು, ಪಾರ್ಟಿಯಲ್ಲಿ ಪರಸ್ಪರ ಪ್ರಿಯತಮೆಯರ ಎಕ್ಸ್ ಚೇಂಜ್ ಮಾಡಿಕೊಳ್ತಿದ್ರು. ಒಬ್ಬನ ಗರ್ಲ್ ಫ್ರೆಂಡ್ ಜೊತೆಗೆ ಮತ್ತೊಬ್ಬ ಬೆಡ್ ಶೇರ್ ಮಾಡಬೇಕಿತ್ತು. ಇದೇ ರೀತಿ ಸಂತ್ರಸ್ತೆ ಯುವತಿಯನ್ನು ಹರೀಶ್ ತನ್ನ ನೀಚ ಕೃತ್ಯಕ್ಕೆ ದೂಡಿದ್ದ‌. ಆದರೆ ಯುವತಿ ಇದಕ್ಕೆ ಒಪ್ಪದಿದ್ದಾಗ ಸ್ನೇಹಿತರ ಜೊತೆಗೆ ಸೇರಿ ಅತ್ಯಾಚಾರ ಮಾಡಿದ್ದಾರಂತೆ.!? ಇನ್ನೂ ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ಮತ್ತಷ್ಟು ಭಯಾನಕ‌ ಸತ್ಯ ಬಯಲಾಗಿದ್ದು, ಮೊಬೈಲ್ ನಲ್ಲಿ ಹತ್ತಾರು ಯುವತಿಯರ ಬೆತ್ತಲೆ ಫೋಟೊ ಪತ್ತೆಯಾಗಿದೆ. ಏಕಾಂತದಲ್ಲಿದ್ದ ವೇಳೆ ಖಾಸಗಿ ವಿಡಿಯೋವನ್ನ ಆರೋಪಿಗಳು  ಮಾಡಿಟ್ಟುಕೊಂಡಿದ್ದಾರೆ. ಅಲ್ಲದೆ ಅದೇ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿರೋದು ಸಹ ಬೆಳಕಿಗೆ ಬಂದಿದೆ.

ಒಟ್ಟಿನಲ್ಲಿ ಪ್ರೀತಿ ಪ್ರೇಮ ಅನ್ನೋ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಮಂಕುಬೂದಿ ಎರಚಿ ಮತ್ತೊಬ್ಬನ ಜೊತೆ ಹಾಸಿಗೆ ಹಂಚಿಕೊಳ್ಳುವಂತೆ ಮಾಡಿ ವಿಕೃತ ಆನಂದಪಡುವ ಕಾಮುಕರ ಇದ್ದಾರೆ ಎಂಬುದು ಈಗ ಕರ್ನಾಟಕದಲ್ಲಿ ಬಟಬಯಲಾಗಿದೆ‌. ಇನ್ನಾದರು ಯುವತಿಯರು ಇಂತಹ ವಿಕೃತ ಕಾಮಿಗಳ ಬಲೆಗೆ ಬೀಳದಂತೆ ಎಚ್ಚರ ವಹಿಸಬೇಕಿದೆ. 

Leave a Reply

Your email address will not be published. Required fields are marked *

Optimized by Optimole
error: Content is protected !!