ಹಾವೇರಿ: ಸ್ವಾತಿ ಹತ್ಯೆಗೆ ಮೊದಲೆ ಸ್ಕೆಚ್ ಹಾಕಿದ್ನಾ ಆರೋಪಿ ನಯಾಜ್.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಹಾವೇರಿ: ಹಿಂದೂ ಯುವತಿ ಸ್ವಾತಿಯನ್ನು ಮರ್ಡರ್ ಮಾಡಲು ಆರೋಪಿ ನಯಾಜ್ ಮೊದಲೇ ಪ್ಲಾನ್ ಮಾಡಿದ್ದ ಎಂಬ ವಿಚಾರ ಈಗ ಪೊಲೀಸರ ತನಿಖೆಯಿಂದ ಬಯಲಿಗೆ ಬಂದಿದೆ.
ಏನಿದು ನಯಾಜ್ ಮರ್ಡರ್ ಪ್ಲಾನ್.?
ಸ್ವಾತಿ ಮತ್ತು ನಯಾಜ್ ನಡುವೆ ಪ್ರೇಮಾಂಕುರವಾಗಿತ್ತು ಇಬ್ಬರಿಗೂ ಹೋರಿ ಬೆದರಿಸುವ ಸ್ಪರ್ಧೆ ಎಂದರೆ ಬಯಂಕರ ಕ್ರೇಜ್ ಅಂತೆ.!ಈ ಕಾರಣದಿಂದಲೇ ಇಬ್ಬರ ನಡುವೆ ಪರಿಚಯವಾಗಿ ಪರಿಚಯ ಪ್ರೇಮಕ್ಕೆ ತಿರುಗಿತ್ತು. ನಯಾಜ್ ಸ್ನೇಹಿತ ವಿನಯ್, ದುರ್ಗಾಚಾರಿ ಎಂಬವರೂ ಸ್ವಾತಿಗೆ ಪರಿಚಿತರಾಗಿದ್ದರು.
ಇತ್ತೀಚೆಗೆ ನಯಾಜ್ ಸ್ವಾತಿಯನ್ನು ಬಿಟ್ಟು ತನ್ನ ಧರ್ಮದ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದನಂತೆ. ಇದರ ಬಗ್ಗೆ ಸ್ವಾತಿ ನಯಾಜ್ ನನ್ನು ತರಾಟೆಗೆ ತೆಗೆದುಕೊಂಡಿದ್ದಳೆ. ಜೋತೆಗೆ ಆತನಿಗೆ ಬೇರೆ ಮದುವೆಯಾಗದಂತೆ ನಿತ್ಯ ಕಿರಿ ಕಿರಿ ಮಾಡುತ್ತಿದ್ದಳು.
ಪ್ರೀಯತಮೆಯ ನಿತ್ಯ ಕಿರಿ ಕಿರಿಯಿಂದ ನಯಾಜ್ ತನ್ನ ಸ್ನೇಹಿತ ವಿನಯ್, ದುರ್ಗಾಚಾರಿ ಸಹಾಯದಿಂದ ಕೊಲೆಗೆ ಸ್ಕೆಚ್ ಹಾಕಿ ಬಿಟ್ಟಿದ್ದ. ಅದರಂತೆ ನಯಾಜ್ ಮತ್ತು ಸ್ನೇಹಿತರು ಕಾರಿನಲ್ಲಿ ಉಪಾಯವಾಗಿ ಸ್ವಾತಿಯನ್ನು ಕರೆದುಕೊಂಡು ರಾಣೆಬೆನ್ನೂರು ಹೊರವಲಯದ ಸುವರ್ಣ ಪಾರ್ಕ್ ಗೆ ಕರೆದೊಯ್ದಿದ್ದಾರೆ.
ದಾರಿ ಮಧ್ಯೆಯೇ ಸ್ವಾತಿಯನ್ನು ನಯಾಜ್ ಟವೆಲ್ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದನಂತೆ.ಬಳಿಕ ಮೂವರೂ ಸೇರಿಕೊಂಡು ಮೃತದೇಹವನ್ನು ಕಾರಿನ ಢಿಕ್ಕಿಯಲ್ಲಿ ಹಾಕಿಕೊಂಡು ಹೋಗಿ ತುಂಗಭದ್ರಾ ನದಿಗೆ ಎಸೆದಿದ್ದಾರೆ.ಅ ನಂತರದಲ್ಲಿ ತುಂಗಭದ್ರಾ ನದಿಯಲ್ಲಿ ಅಪರಿಚಿತ ಶವವೊಂದು ತೇಲುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.ಶವದ ಗುರುತು ಸಿಗದೆ ಅನಾಮಧೇಯ ಶವವೆಂದು ತೀರ್ಮಾನಿಸಿ ಶವಪರೀಕ್ಷೆ ಮಾಡಿಸಿ ಅಂತಿಮ ಸಂಸ್ಕಾರ ಮಾಡಿದ್ದಾರೆ.ನಂತರ ಶವಪರೀಕ್ಷೆಯ ಪೊಲೀಸರ ಕೈಸೇರಿದಾಗ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ತಿಳಿದುಬಂದಿದೆ.
ಮದುವೆಯಾಗುವುದಾಗಿ ಅಮಾಯಕ ಯುವತಿಯೊಬ್ಬಳನ್ನು ನಂಬಿಸಿ ಆಕೆಯ ಜೋತೆಗೆ ಸುತ್ತಾಡಿ. ಆಕೆಯ ಜೋತೆಗೆ ಪ್ರೀತಿ ಪ್ರೇಮದ ನಾಟಕವಾಡಿ ಆಕೆಯನ್ನು ಮುಕ್ಕಿ ಕೊನೆಗೆ ತನ್ನ ಮದುವೆಗೆ ಅಡ್ಡಿಯಾಗುತ್ತಾಳೆ ಎನ್ನುವ ಕಾರಣಕ್ಕೆ ಆಕೆಯನ್ನು ಕೊಂದು ಮುಗಿಸಿದ ಆರೋಪಿ ನಯಾಜ್ಗೆ ಸರಿಯಾದ ಶಿಕ್ಷೆಯಾಗಬೇಕಿದೆ ಎನ್ನುವುದು ಆಕೆಯ ಕುಟುಂಬಸ್ಥರು ಆಗ್ರಹವಾಗಿದೆ..
ತಕ್ಷಣವೇ ತನಿಖೆಗೆ ಮುಂದಾದ ಪೊಲೀಸರಿಗೆ ಸ್ವಾತಿ ಎನ್ನುವ ಯುವತಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.ನಂತರ ತುಂಗಾಭದ್ರ ನದಿಯಲ್ಲಿ ಸಿಕ್ಕಶವ ಸ್ವಾತಿಯದು ಎಂದು ತಿಳಿದು. ಅವರ ಮನೆಯವರು ಆಕೆಯ ಸ್ನೇಹಿತರನ್ನು ವಿಚಾರಿಸಿದಾಗ ಆಕೆಯ ಲವ್ ಕಹಾನಿ ಹೊರಬಿದ್ದಿದೆ.ಮಾಹಿತಿ ಅಧಾರದ ಮೇಲೆ ಸ್ವಾತಿಯ ಪ್ರಿಯಕರ ನಯಾಜ್ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ.ಸ್ವಾತಿ ಹತ್ಯೆಯ ಅಷ್ಟು ಸತ್ಯ ಹೊರಬಿದ್ದಿದೆ.!