ಸಿಡ್ನಿ ಗುಂಡಿನದಾಳಿ : ಸಿಡ್ನಿ ಗುಂಡಿನ ದಾಳಿ ಸಾವಿನ ಸಂಖ್ಯೆ 16.! ಅಪ್ಪ ಮಗನಿಂದಲೆ ಗುಂಡಿನ ದಾಳಿ.!

news.ashwasurya.in
ಅಶ್ವಸೂರ್ಯ/ಸಿಡ್ನಿ : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಪ್ಪ ಮಗನಿಂಲೆ ಗುಂಡಿನ ದಾಳಿ.! ಈ ದಾಳಿಯ ಹಿಂದೆ ಭಯೋತ್ಪಾದಕರಿದ್ದಾರೆ ಎಂದು ಪೊಲೀಸರು ಘೋಷಿಸಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿಯ ಬೊಂಡಿ ಬೀಚ್ನಲ್ಲಿ ಮಾರಣಹೋಮ ನಡೆದಿದ್ದು ಯಹೂದಿಗಳನ್ನು ಗುರಿಯಾಗಿಸಿಕೊಂಡು ಅಪ್ಪ ಮಗ ಗುಂಡಿನ ದಾಳಿ ನೆಡೆಸಿ 16 ಮಂದಿ ಅಮಾಯಕರನ್ನು ಕೊಂದು ಮುಗಿಸಿದ್ದಾರೆ. ಇನ್ನೂ ಈ ಭೀಕರ ದಾಳಿ ನಡೆಸಿದ ಓರ್ವನನ್ನು ಪೊಲೀಸರು ಬಂಧಿಸಿದ್ದು ಈತನ ಅಪ್ಪನ್ನು ಪೊಲೀಸರು ಕೊಂದು ಹಾಕಿದ್ದಾರೆ.! ಸೇರೆ ಸಿಕ್ಕವನನ್ನು ನವೀದ್ ಅಕ್ರಮ್ ಎಂದು ಗುರುತಿಸಲಾಗಿದೆ.

ಸಿಡ್ನಿಯ ಬೊಂಡಿ ಬೀಚ್ನಲ್ಲಿ ಭಾನುವಾರ ಯಹೂದಿಗಳು ತಮ್ಮ ಸಾಂಪ್ರದಾಯಿಕ ಹನುಕ್ಕಾ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಜನರ ಗುಂಪಿನ ಮಧ್ಯೆ ಗನ್ ಹಿಡಿದು ನುಗ್ಗಿದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ಸುರಿಮಳೆ ಸುರಿಸಿದ್ದಾರೆ. ಮಕ್ಕಳು, ಮಹಿಳೆಯರು ಅಂತಲೂ ನೋಡದೇ ಗುಂಡು ಹಾರಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 16 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಗುಂಡಿನ ದಾಳಿ ನಡೆಸಿದ ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬ ಸೇರೆ ಸಿಕ್ಕಿದ್ದು ಆತನನ್ನು ನವೀದ್ ಅಕ್ರಮ್ ಎಂದು ಗುರುತು ಪತ್ತೆಹಚ್ಚಲಾಗಿದೆ ಮತ್ತೋರ್ವ ಪೊಲೀಸರ ಪ್ರತಿ ದಾಳಿಗೆ ಬಲಿಯಾಗಿದ್ದು ಆತನನ್ನು ನವೀದ್ ಅಕ್ರಮ್ ತಂದೆ ಎಂದು ಗುರುತಿಸಲಾಗಿದ್ದು ಅಪ್ಪ ಮಗ ಸೇರಿ ಈ ಕೃತ್ಯ ನೆಡೆಸಿದ್ದಾರೆ.!

ಸೆರೆಸಿಕ್ಕ ನವೀದ್ ಅಕ್ರಮ್ ಯಾರು.!?
ಯಹೂದಿಗಳ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸಿದ ಓರ್ವನನ್ನ 24 ವರ್ಷದ ನವೀದ್ ಅಕ್ರಮ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ದಾಳಿಕೋರ ನವೀದ್ ಅಕ್ರಮ್ನ ಡ್ರೈವಿಂಗ್ ಲೈಸೆನ್ಸ್ ಪತ್ತೆಯಾಗಿದ್ದು, ಗುರುತಿನ ಚೀಟಿಯಲ್ಲಿ ಆತ ಸಿಡ್ನಿಯ ನ್ಯೂಸೌಥ್ ವೆಲ್ಸ್ನ ಬೊನ್ನಿರಿಗ್ ನಿವಾಸಿ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಈ ಮಾಹಿತಿ ಆಧರಿಸಿದ ಆತನ ಮನೆಯ ಮೇಲೆ ದಾಳಿ ನಡೆಸಿದ್ದು. ಆತನ ಹಿನ್ನೆಲೆ ಏನು?,ದಾಳಿಗೆ ಕಾರಣವೇನು.? ಆತನ ಹಿಂದೆ ಯಾರಿದ್ದಾರೆ ಎಂದು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಬೊಂಡಿ ಬೀಚ್ನಲ್ಲಿ ಅಪ್ಪ ಮಗನಿಂದ ಗುಂಡಿನ ದಾಳಿ.!?
ಎಂಟು ದಿನಗಳ ಯಹೂದಿ ಹಬ್ಬವಾದ ಹನುಕ್ಕಾದ ಮೊದಲ ರಾತ್ರಿ ದುರಂತ ಘಟನೆ ನಡೆದಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಸಿಡ್ನಿಯ ಬೊಂಡಿ ಬೀಚ್ನಲ್ಲಿ ತಮ್ಮ ಸಾಂಪ್ರದಾಯಿಕ ಹಬ್ಬವಾದ ಹನುಕ್ಕಾ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು.
ಇದೇ ವೇಳೆ ಕಾರಿನಲ್ಲಿ ಗನ್ ಹಿಡಿದು ಬಂದ ಅಪ್ಪ ಮಗ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಗನ್ ಹಿಡಿದು ದಾಳಿ ನಡೆಸುತ್ತಿದ್ದರು ಕೂಡ ಓರ್ವ ವ್ಯಕ್ತಿಯೊಬ್ಬ ಬಂದೂಕುಧಾರಿ ಬಳಿ ಇದ್ದ ಗನ್ ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯ ಈ ದೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


