ವೃದ್ಧೆ ಖಾತೆಯಿಂದ 50 ಲಕ್ಷ ಎಗರಿಸಿದ ಡೆಪ್ಯೂಟಿ ಬ್ಯಾಂಕ್ ಮ್ಯಾನೇಜರ್.. ಹೇಳಿದ್ದು ʼಲಕ್ಕಿ ಭಾಸ್ಕರ್ʼ ಸಿನಿಮಾ ಕಥೆ..!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬೆಂಗಳೂರು : ಈ ಫೋಟೋದಲ್ಲಿ ಇರುವ ಮಹಿಳೆಯ ಹೆಸರು ಮೇಘನಾ. ಗಿರಿನಗರದಲ್ಲಿರುವ IndusInd ಬ್ಯಾಂಕ್ ನಲ್ಲಿ ಡೆಪ್ಯೂಟಿ ಮ್ಯಾನೆಜರ್ ಆಗಿ ಕೆಲಸ ಮಾಡುತಿದ್ಲು. ಇನ್ನೂ ಶಿವಪ್ರಸಾದ್ ಮೇಘನಾ ಪತಿ. ಇವರಿಬ್ಬರ ಬೆನ್ನಿಗೆ ನಿಂತವರು ಅನ್ವರ್ ಘೋಷ್ ಮತ್ತು ವರದರಾಜು ನಾರಾಯಣ್ ಗಾಂವ್ಕರ್. ಈ ನಾಲ್ವರು ಖದೀಮರು ಸರಿಯಾದ ಸ್ಕೆಚ್ ಹಾಕಿದ್ದಾರೆ.! 76 ವರ್ಷದ ವೃದ್ಧೆಗೆ ಸ್ಕೆಚ್ ಹಾಕಿದ ಇವರು ಆಕೆಯ ಅಕೌಂಟ್ ನಿಂದ ಬರೋಬ್ಬರಿ 50 ಲಕ್ಷ ಹಣ ದೋಚಿದ್ದಾರೆ ಎಂದರೆ ನೀವು ನಂಬಲೆ ಬೇಕು. ಇವರುಗಳು ಪ್ಲಾನ್ ಮಾಡಿದ್ದು ತೆಲುಗು ಸೂಪರ್ ಹಿಟ್ ಮೂವಿ ” ಲಕ್ಕಿ ಭಾಸ್ಕರ್ ” ಮಾದರಿಯಲ್ಲೇ IndusInd ಬ್ಯಾಂಕ್ ಡೆಪ್ಯೂಟಿ ಮ್ಯಾನೆಜರ್ ಮೇಘನಾ ವೃದ್ಧೆಗೆ 50 ಲಕ್ಷ ಟೋಪಿ ಹಾಕಿರೊ ಘಟನೆ ಬೆಳಕಿಗೆ ಬಂದಿದೆ. ಆಗಿದ್ದೇನು ಅನ್ನೋದನ್ನೆ ಗಮನಿಸಿದರೆ ಗಿರಿನಗರದಲ್ಲಿರುವ IndusInd
ಬ್ಯಾಂಕ್ ನಲ್ಲಿ ವೃದ್ಧ ದಂಪತಿ ಜಂಟಿ ಖಾತೆ ತೆರೆದಿದ್ರು. ಅಲ್ಲದೇ ಅದೇ ಬ್ರಾಂಚ್ ನಲ್ಲಿ ಎಫ್ ಡಿ ಖಾತೆ ಕೂಡ ಹೊಂದಿದ್ರು. ಬ್ಯಾಂಕ್ ಗೆ ಬಂದು ಹೋಗ್ತಿದ್ದ ವೃದ್ಧೆಗೆ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿದ್ದ ಡೆಪ್ಯೂಟಿ ಮ್ಯಾನೆಜರ್ ಮೇಘನಾ ಪರಿಚಯವಾಗಿದ್ದು, ಬ್ಯಾಂಕ್ ವ್ಯವಹಾರದಲ್ಲಿ ಸಹಾಯ ಮಾಡ್ತಿದ್ಳು.ಒಂದು ದಿನ ಎಫ್ ಡಿ ಬಾಂಡ್ ಅವಧಿ ಮುಗಿದಿದೆ ಎಂದು ಕಥೆ ಕಟ್ಟಿದ ಅವಳು. ಹೊಸ ಬಾಂಡ್ ಖರೀದಿಗೆ ದಾಖಲಾತಿ ಮತ್ತು ಚೆಕ್ ಅವಶ್ಯಕತೆ ಇದೆ ಎಂದು ಎಫ್ ಡಿ ಬಾಂಡ್ ಬದಲಿಗೆ ಆರ್ ಟಿಜಿಎಸ್ ಕಾಗದಕ್ಕೆ ಸಹಿ ಪಡೆದು 50 ಲಕ್ಷ ಹಣ ಸ್ನೇಹಿತನ ಅಕೌಂಟ್ ವರ್ಗಾವಣೆ ಮಾಡಿ ವಂಚಿಸಿದ್ದಾಳೆ.
ವೃದ್ಧ ದಂಪತಿ ಮಗ ಮೊಬೈಲ್ ಪರಿಶೀಲನೆ ವೇಳೆ ಕಡಿಮೆ ಹಣ ಇರೋದು ಪತ್ತೆಯಾಗಿದೆ.ಬಳಿಕ ಬ್ಯಾಂಕ್ ನಿಂದ ಬಂದ ಮೆಸೆಜ್ ಗಳ ಪರಿಶೀಲನೆ ವೇಳೆ ಫೆಬ್ರವರಿ 13 ರಂದು ಬೇರೆ ಖಾತೆಗೆ ಹಣ ವರ್ಗಾವಣೆ ಆಗಿರೋದು ಗೊತ್ತಾಗಿದೆ. ಬ್ಯಾಂಕ್ ಗೆ ಹೋಗಿ ಮೇಘನಾಳಿಗೆ ಪ್ರಶ್ನಿಸಿದಾಗ ನೀವು ಹೇಳಿದ ಖಾತೆಗೆ ಆರ್ ಟಿಜಿಎಸ್ ಮಾಡಲಾಗಿದೆ ಎಂದು ಉಲ್ಟಾ ಹೊಡೆದಿದ್ದಾಳೆ.! ಮೋಸ ಹೋದ ವಿಚಾರ ಗೊತ್ತಾಗ್ತಿದ್ದಂತೆ ವೃದ್ಧೆ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಮೇಘನಾ, ಶಿವಪ್ರಸಾದ್, ಅನ್ವರ್ ಘೋಷ್, ವರದರಾಜ್ ನಾರಾಯಣ ಗಾಂವ್ಕರ್ ನನ್ನು ಬಂಧಿಸಿದ ಪೊಲೀಸರು ಅಸಲಿ ವಿಚಾರ ರಿವೀಲ್ ಮಾಡಿದ್ದಾರೆ
ಐಷಾರಾಮಿ ಜೀವನದ ಕನಸು ಕಂಡಿದ್ದ ಮೇಘನಾ, ಕಾರು ಖರೀದಿಸಿ ವೈಭೋಗದ ಲೈಫ್ ಲೀಡ್ ಮಾಡೊ ಕನಸು ಕಂಡಿದ್ಳು. ಅದಕ್ಕಾಗಿ ಗಂಡ ಶಿವಪ್ರಸಾದ್ ಜೊತೆಗೆ ಸೇರಿ ಪ್ಲಾನ್ ಮಾಡಿದ್ದ ಮೇಘನಾ ಗೆಳೆಯ ವರದರಾಜು ಮತ್ತು ಅನ್ವರ್ ಘೋಷ್ ಗೆ ಹೇಳಿ ಹೊಸ ಬ್ಯಾಂಕ್ ಖಾತೆ ಓಪನ್ ಮಾಡಿಸಿದ್ದಾಳೆ. ಆ ಖಾತೆಗೆ ಆರ್.ಟಿ ಜಿಎಸ್ ಮೂಲಕ ವೃದ್ಧೆ ಖಾತೆಯಿಂದ 50 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಬಂಧಿತ ಆರೋಪಿಗಳಿಂದ ಒಟ್ಟು 50 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.
ಇನ್ನೂ ಪೊಲೀಸರ ವಿಚಾರಣೆ ಮೇಘನಾ ಲಕ್ಕಿ ಭಾಸ್ಕರ್ ಸಿನಿಮಾ ಕಥೆ ಹೇಳಿದ್ದು, ನನಗೆ ವೃದ್ಧೆಗೆ ಮೋಸ ಮಾಡುವ ಉದ್ದೇಶ ಇರಲಿಲ್ಲ. ಬದಲಿಗೆ ನಮಗೆ ಹಣದ ಅವಶ್ಯಕತೆ ಇತ್ತು. ಆ ದುಡ್ಡಲ್ಲಿ ಲಾಭ ಗಳಿಸಿ ಮತ್ತೆ ವೃದ್ಧೆಗೆ ಕೊಡುವ ಪ್ಲಾನ್ ಇತ್ತು ಎಂದು ಹೇಳಿಕೊಂಡಿದ್ದಾಳೆ. ಅದೇನೆ ಹೇಳಿ ವೃದ್ಧೆಯ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಕ್ರಿಮಿನಲ್‌ಗಳು ಹಣ ದೋಚಿದ್ದು ಮಾತ್ರ ನಿಜಕ್ಕೂ ದುರಂತವೆ ಹೌದು..