ಅಶ್ವಸೂರ್ಯ/ತಮಿಳುನಾಡು: ಮಾಜಿ ಐಎಎಸ್ ಅಧಿಕಾರಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ ಬಂಧನವಾಗಿದೆ.! ಕೊಯಮತ್ತೂರಿನಲ್ಲಿ ಬ್ಲ್ಯಾಕ್ ಡೇ ಪ್ರತಿಭಟನೆ ನಡೆಸುತ್ತಿದ್ದ ಅಣ್ಣಾಮಲೈ ಹಾಗೂ ಇತರೇ ಬಿಜೆಪಿ ನಾಯಕರನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ.
1998ರಲ್ಲಿ ಕೊಯಮತ್ತೂರು ಬಾಂಬ್ ಸ್ಫೋಟದ ಅಪರಾಧಿ ಎಸ್.ಎ. ಬಾಷಾ ಎಂಬಾತನ ಅಂತ್ಯಕ್ರಿಯೆಯನ್ನು ಸ್ಟಾಲಿನ್ ನೇತೃತ್ವದ ತಮಿಳುನಾಡು ರಾಜ್ಯ ಸರ್ಕಾರ ನಡೆಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ನಾಯಕರು ಮತ್ತು ಹಿಂದೂ ಸಂಘಟನೆಗಳು ಕೊಯಮತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಅಣ್ಣಾಮಲೈ ಹಾಗೂ ಇತರೇ ನಾಯಕರನ್ನು ಬಂಧಿಸಿದ್ದಾರೆ.