ಬೆಂಗಳೂರು: ಹೆಸರಾಂತನಟ ಬಿಜೆಪಿ ಪಕ್ಷದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಮಂಗಳವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗುವುದರೊಂದಿಗೆ ಹಲವರ ಹುಬ್ಬೇರುವಂತೆ ಮಾಡಿದ್ದಾರೆ.ಅದರಲ್ಲೂ ಬಿಜೆಪಿ ನಾಯಕರಲ್ಲೆ ಗುಸು ಗುಸು ಶುರುವಾಗಿದೆ..! ಬೆಂಗಳೂರಿನ ಕೆ.ಕೆ ಗೆಸ್ಟ್ ಹೌಸ್ ಗೆ ಆಗಮಿಸಿದ ನಿಶಾ ಅವರು ಡಿ.ಕೆ. ಶಿವಕುಮಾರ್ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದು ಖಾಸಗಿ ಭೇಟಿನಾ?
ನಿಶಾ ಅವರು ತಮ್ಮ ಸಂಸ್ಥೆಯ ವಿಚಾರದ ಬಗ್ಗೆ ಮಾತನಾಡಲು ಬಂದಿದ್ದರಾ? ಅಥವಾ ಇದೊಂದು ರಾಜಕೀಯ ಭೇಟಿಯಾ ಎನ್ನುವ ಕುರಿತು ಊಹಾಪೋಹಗಳು ಎದ್ದಿವೆ. ಡಿ.ಕೆ. ಶಿವಕುಮಾರ್ ಅವರ ಅಪ್ತರ ಪ್ರಕಾರ ಇದೊಂದು ರಾಜಕೀಯ ಸಂಬಂಧ ಬೇಟಿ ರಾಜಕೀಯ ಮಾತುಕತೆಗಾಗಿ ನಡೆದ ಭೇಟಿ. ಹಾಗಾದರೆ ಏನಿದು ರಾಜಕೀಯ ಒಳ ಮರ್ಮ ಎನ್ನುವುದು ಮಾತ್ರ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.!
ಸಿ.ಪಿ. ಯೋಗೀಶ್ವರ್ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಕಾರಣಾಂತರದಿಂದ ಈಗ ಬಿಜೆಪಿಯಲ್ಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ಸ್ಥಾಪನೆಯಲ್ಲಿ ಸಿ.ಪಿ. ಯೋಗೇಶ್ವರ್ ಅವರದು ಮಹತ್ವದ ಪಾತ್ರವಾಗಿತ್ತು.
ಇದೀಗ ಅದೇ ಸಿ.ಪಿ. ಯೋಗೇಶ್ವರ್ ಅವರು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಜತೆಗೆ ರಾಜಕೀಯ ಮೈತ್ರಿಯ ಮಾತುಕತೆ ಶುರು ಮಾಡಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವ ನಿಟ್ಟಿನ ಮಾತುಕತೆಗೆ ಚಾಲನೆ ನೀಡಿದ್ದು ಯೋಗೇಶ್ವರ್ ಎನ್ನಲಾಗುತ್ತಿದೆ. ಅವರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗುವ ಕನಸು ಕಾಣುತ್ತಿದ್ದಾರ.?
ಇದರ ನಡುವೆಯೇ ಇದೀಗ ನಿಶಾ ಯೋಗೇಶ್ವರ್ ಅವರು ಡಿ.ಕೆ. ಶಿವಕುಮಾರ್ ಅವರನ್ನು ದೀಡಿರ್ ಭೇಟಿಯಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. 33 ವರ್ಷದ ನಿಶಾ ಯೋಗೇಶ್ವರ್ ಅವರು ಚಿತ್ರನಟಿ ಮತ್ತು ರೂಪದರ್ಶಿಯಾಗಿದ್ದಾರೆ. ಇದರ ಜತೆಗೆ ಕೆಲವು ಉದ್ಯಮಗಳನ್ನೂ ನಡೆಸುತ್ತಿದ್ದಾರೆ. ಮದ್ದೂರಿನಲ್ಲಿ ಅವರಿಗೆ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಇದೆ.
ಈ ಹಿಂದೆ ನಿಶಾ ಯೋಗೀಶ್ವರ್ ಅವರು ರಾಜಕೀಯಕ್ಕೆ ಬರುತ್ತಾರೆ, ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹರಡಿತ್ತು. ನಿಶಾ ಅವರಿಗೆ ರಾಜಕೀಯದಲ್ಲಿ ಆಸಕ್ತಿಯೂ ಇದೆ ಎನ್ನಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಅವರು ಡಿ.ಕೆ. ಶಿವಕುಮಾರ್ ಅವರ ನ್ನು ಭೇಟಿಯಾಗಿರುವುದು ಮತ್ತು ಡಿ.ಕೆ.ಶಿ ಅವರ ಆಪ್ತರು ಇದೊಂದು ರಾಜಕೀಯ ಭೇಟಿ ಎಂದು ಹೇಳುತ್ತಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.
ಮೊನ್ನೆಯಷ್ಟೇ ಚನ್ನಪಟ್ಟಣದಲ್ಲಿ ಗೆದ್ದವರು, ಸೋತವರು ಸರ್ಕಾರ ಬೀಳಿಸಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದರು. ಈ ಬೆನ್ನಲ್ಲೇ ಉಪಮುಖ್ಯಮಂತ್ರಿ ಜೊತೆ ನಿಶಾ ಯೋಗೇಶ್ವರ್ ಕಾಣಿಸಿಕೊಂಡಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಿಶಾ ಯೋಗೇಶ್ವರ್ ಅಪ್ಪನ ಪರ ಪ್ರಚಾರ ಮಾಡಿದ್ದರು. ಈಗ ಅಪ್ಪನ ಪರವಾಗಿಯೆ ಮಾತುಕತೆ ಮಾಡಲು ಡಿಕೆಶಿ ಅವರನ್ನು ಬೇಟಿ ಮಾಡಲು ಬಂದಿದ್ದರಂತೆ…!?
ಸುಧೀರ್ ವಿಧಾತ, ಶಿವಮೊಗ್ಗ