ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪ್ರತಿಷ್ಠಿತ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿಯತ್ತ ಸಾಗಿದೆ…!! ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಬ್ಯಾಂಕಿನ ಕಾರ್ಯನಿರ್ವಹಣೆಗೆ ನಿರ್ಬಂಧ ಹೇರಿ ಸುತ್ತೋಲೆ ಹೊರಡಿಸಿದ್ದ ವಿಚಾರ ತಿಳಿದು ಆತಂಕಗೊಂಡ ಸಾವಿರಾರು ಗ್ರಾಹಕರು, ಮಂಗಳವಾರ ಬೆಳಗ್ಗೆಯಿಂದಲೇ ಬಸವನಗುಡಿ, ಜಯನಗರ ಸೇರಿದಂತೆ ಇನ್ನೂ ನಗರದ ಹಲವು ಏರಿಯಾದಲ್ಲಿ ಇರುವಂತಹ ಬ್ಯಾಂಕಿನ ಶಾಖೆಗಳ ಮುಂದೆ ಸಾವಿರಾರು ಜನ ಬ್ಯಾಂಕಿನ ಗ್ರಾಹಕರು ಜಮಾವಣೆಯಾಗಿದ್ದರು. ತಾವು ಕಷ್ಟಪಟ್ಟು ಇಟ್ಟಿದ್ದ ಲಕ್ಷಾಂತರ ರೂಪಾಯಿ ಠೇವಣಿ ಹಣವನ್ನು ಕಳೆದುಕೊಳ್ಳುವ ಭಯದಲ್ಲಿ ಅದನ್ನು ಹಿಂಪಡೆಯಲು ಗ್ರಾಹಕರು ಸರದಿ ಸಾಲಿನಲ್ಲಿ ನಿಂತುಕೊಂಡು ಆತಂಕ ವ್ಯಕ್ತಪಡಿಸುತ್ತಿದ್ದದ್ದು ಬ್ಯಾಂಕುಗಳು ಮುಂಭಾಗದಲ್ಲಿ ಎದ್ದು ಕಾಣುತ್ತಿತ್ತು..!
ಬ್ಯಾಂಕ್ ಆವರಣದಲ್ಲಿ ಹಣ ಇಟ್ಟ ಮಂದಿ ತಮ್ಮ ಆತ್ಮೀಯರಿಗೆ ಸಂಬಂಧಿಗಳಿಗೆ ಕರೆ ಮಾಡಿ ನೋವನ್ನು ತೋಡಿಕೊಳ್ಳುತ್ತಿದ್ದರು ಜೊತೆಗೆ ಮಕ್ಕಳ ಮದುವೆಗೆ, ವಿದ್ಯಾಭ್ಯಾಸಕ್ಕೆ, ಮನೆ ಕಟ್ಟಲು,ತಮ್ಮ ಅನಾರೋಗ್ಯ ಹಿನ್ನಲೆ.ವೃದ್ಧಾಪ್ಯ ಜೀವನ ಸಾಗಿಸಲು ಸೇರಿದಂತೆ ಇನ್ನಿತರೆ ಖರ್ಚು ವೆಚ್ಚಗಳಿಗಾಗಿ ಪೈಸೆಗೆ ಪೈಸೆಯಂತೆ ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟ ಹಣವನ್ನು ಸಾವಿರಾರು ಗ್ರಾಹಕರು ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದರು.ಈ ಹಣವೂ ವಾಪಸ್ ಕೈಗೆ ಸಿಗೋತ್ತೊ ಇಲ್ಲವೂ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವ ಹಿನ್ನೆಲೆಯಲ್ಲಿ ಸಾಕಷ್ಟು ನೊಂದ ಜೀವಗಳು ಬ್ಯಾಂಕ್ ಆವರಣದಲ್ಲಿ ಗೋಳಾಡುತ್ತಿದ್ದದ್ದು ಕಂಡುಬಂದಿದೆ..!
ಈ ಬ್ಯಾಂಕಿನಲ್ಲಿ ಹೊಸದಾಗಿ ಸಾಲ ವಿತರಣೆ ಮಾಡಬಾರದು, ಹೂಡಿಕೆಗೆ ಹಣ ಹೂಡಬಾರದು, ಹೊಸದಾಗಿ ಠೇವಣಿ ಸ್ವೀಕರಿಸಬಾರದು, ಮತ್ತು ಇರಬಾರದು. ದೊಡ್ಡ ಮೊತ್ತ ಪಾವತಿಯಂತು ಮಾಡಬಾರದು, ಅನುಮತಿ ಇಲ್ಲದೆ ಬ್ಯಾಂಕಿನ ಯಾವುದೇ ಆಸ್ತಿ ಮಾರಾಟ ಅಥವಾ ಪರಭಾರೆ ಒಪ್ಪಂದ ಮಾಡಬಾರದು, ಗ್ರಾಹಕರು ತಮ್ಮ ಖಾತೆಯಿಂದ 50 ಸಾವಿರ ರೂ.ಗಿಂತ ಹೆಚ್ಚು ಹಣ ಪಡೆಯಬಾರದು ಎಂದು ಆರ್‌ಬಿಐ ನಿಯಮ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಠೇವಣಿ ಹಣ ಬಿಡಿಸಿಕೊಳ್ಳಲು ಗ್ರಾಹಕರು ಬ್ಯಾಂಕಿನ ಎಲ್ಲಾ ಶಾಖೆಗಳಿಗೆ ಮುಗಿಬಿದ್ದಿದ್ದಾರೆ. ಠೇವಣಿ ಇಟ್ಟಿದ್ದ ಪ್ರೂಫ್ ತೋರಿಸಿ 50.000 ಸಾವಿರ ರೂ ಹಣವನ್ನು ಹಿಂಪಡೆದುಕೊಳ್ಳುತ್ತಿದ್ದರೆ. ಆದರೆ 50.000 ಸಾವಿರ ರೂ.ಮಾತ್ರ ಹಿಂಪಡೆಯಬಹುದು ಎಂದು ಆರ್‌ಬಿಐ ಮಿತಿ ಹೇರಿದ ಹಿನ್ನೆಲೆಯಲ್ಲಿ ಹೆಚ್ಚಿನ ಹಣ ಪಡೆಯಲು ಸಾಧ್ಯವಾಗದ ಗ್ರಾಹಕರು ಕಂಗಾಲಾಗಿ ಕೂಳಿತಿದ್ದಾರೆ. ಹಲವು ವರ್ಷಗಳಿಂದ ಸಂಪಾದಿಸಿ ಕೂಡಿಟ್ಟ ನಮ್ಮ ಹಣವನ್ನು ಒಂದೇ ಏಟಿಗೆ ಬಿಡಿಸಿ ಕೊಳ್ಳಲು ಸಾಧ್ಯವಾಗದ ಕೆಲವರು ಹೆದರಿ ಬ್ಯಾಂಕಿನ ಪಡುಸಾಲೆಯಲ್ಲೆ ನೊಂದು ಕುಳಿತಿದ್ದಾರೆ. ನಾವು ಮುಂದಿನ ಭವಿಷ್ಯದ ದೃಷ್ಟಿಯಿಂದ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ್ದೆವು. ಔಷಧ ಖರೀದಿಗೆ, ಜೀವನ ನಿರ್ವಹಿಸಲು ಇನ್ನೂ ಕಷ್ಟವಾಗಲಿದೆ ಎಂದು ಹಿರಿಯ ನಾಗರಿಕರುಗಳು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ನಿಮ್ಮ ಹಣ ಭದ್ರವಾಗಿದೆ ಎಂದು ಬ್ಯಾಂಕ್ ಸಿಬ್ಬಂದಿ ಭರವಸೆ ನೀಡುತ್ತಿದ್ದರೂ ಇದನ್ನು ನಂಬದ ಗ್ರಾಹಕರು ತಮ್ಮ ಹಣ ಪಡೆಯಲು ಮುಗಿಬೀಳುತ್ತಿದ್ದರು. ತಾಸುಗಟ್ಟಲೆ ನಿಂತಲ್ಲೇ ನಿಂತು ಸುಸ್ತಾದ ಕೆಲ ಗ್ರಾಹಕರು ಬ್ಯಾಂಕಿನ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದರೆ ಇನ್ನೂ ಕೆಲವರು ನಿತ್ರಾಣರಾಗಿ ಕುಸಿದು ಬಿದ್ದಿದ್ದಾರೆ.!
ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿಗೆ ಕಾರಣಗಳೇನು..!?
ಅಂದಾಜು 24 ಸಾವಿರ ಸದಸ್ಯರ ಬಲ ಇರುವ ಈ ಬ್ಯಾಂಕ್ ಅಂದಾಜು 12 ಶಾಖೆಗಳನ್ನು ಹೊಂದಿದೆ.ಬೆಂಗಳೂರಿನ ಅತಿ ಹಳೆಯ ಬ್ಯಾಂಕ್‌ಗಳಲ್ಲಿ ಇದು ಒಂದಾಗಿದೆ. ಆದರೆ, ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ನಿಯಮ ಪಾಲಿಸದೆ ಕಾನೂನು ಉಲ್ಲಂಘನೆ, ಯಾವುದೇ ಭದ್ರತೆ ಪಡೆಯದೆ ಬೇಕಾದವರಿಗೆ ಕೋಟ್ಯಂತರ ರೂ.ಸಾಲ ಕೊಟ್ಟಿರುವ ಸಾಲ ವಸೂಲಿ ಮಾಡದಿರುವುದು, ಠೇವಣಿ ಇಲ್ಲದಿದ್ದರೂ ಠೇವಣಿ ಇದೆ ಎಂದು ಕೋಟ್ಯಂತರ ರೂ.ಸಾಲ ನೀಡಿಕೆ, ಬೇನಾಮಿ ಹೆಸರಿನಲ್ಲಿ ವ್ಯವಹಾರ ಹಾಗೂ ಕಮಿಷನ್ ದಂಧೆ ಸೇರಿ ಇತರ ಕಾರಣಗಳಿಂದ ಬ್ಯಾಂಕ್ ದಿವಾಳಿಯಾಗಿದೆ. ಇಲ್ಲಿ ದಿವಾಳಿಗೆ ಬ್ಯಾಂಕ್ ಸಿಬ್ಬಂದಿಗಳ ಹಣ ದಾಹವು ಒಂದಾಗಿದೆ
ಆಡಳಿತ ಮಂಡಳಿಯವರು ಹೇಳುವುದೇನು..?
ಬ್ಯಾಂಕಿನ ಒಟ್ಟು ಠೇವಣಿ 1,416 ಕೋಟಿ ರೂ, ಒಟ್ಟು ಸಾಲ 569 ಕೋಟಿ ರೂ., ಸಾಲಗಳ ಮೇಲೆ ಬರಬೇಕಾದ ಬಡ್ಡಿ 355 ಕೋಟಿ ರೂ., ಸರ್ಕಾರಿ ಕಾಯ್ದೆಯಲ್ಲಿ ವಸೂಲಾತಿ ಮೊತ್ತ 340 ಕೋಟಿ ರೂ., ಹರಾಜು ಪ್ರಕ್ರಿಯೆಯಲ್ಲಿ 203 ಕೋಟಿ ರೂ., ಕೋರ್ಟ್‌ನಲ್ಲಿ ಇರತಕ್ಕ ದಾವೆಗಳು 110 ಕೋಟಿ ರೂ., ಹೂಡಿಕೆ ಮತ್ತು ಬರಬೇಕಾದ ಬಾಕಿ 738 ಕೋಟಿ ರೂ, ಸ್ವಂತ ಆಸ್ತಿಯು 65 ಕೋಟಿ ರೂ ಸೇರಿ ಹಣಕಾಸಿನ ವಿವರದ ಪ್ರತಿಯನ್ನು ಬ್ಯಾಂಕಿನ ಗೋಡೆ ಮೇಲೆ ಆಡಳಿತ ಮಂಡಳಿ ಅಂಟಿಸಿದೆ. ಗ್ರಾಹಕರು, ಠೇವಣಿದಾರರು ತಾಳ್ಮೆ ಕಳೆದುಕೊಳ್ಳಬಾರದು. ನಾವು ಕೊಟ್ಟಿರುವ ಸಾಲಗಳಲ್ಲಿ ಅಡಮಾನ ಮಾಡಿದ ಆಸ್ತಿಯು ಮೊತ್ತ 1,500 ಕೋಟಿ ರೂ.ಅಧಿಕ ಹಣ ನಮ್ಮಲ್ಲಿದೆ. ಅದಷ್ಟು ಶೀಘ್ರ ಸಾಲ ವಸೂಲಾತಿ ಮಾಡಿ ಸಮಸ್ಯೆಯನ್ನು ಪ್ರಮಾಣಿಕವಾಗಿ ಬಗೆಹರಿಸುವುದಾಗಿ ಆಡಳಿತ ಮಂಡಳಿ ಪತ್ರದ ಮುಖಾಂತರ ಭರವಸೆ ನೀಡಿದೆ.
ಒಟ್ಟಿನಲ್ಲಿ ಹಣ ಹೂಡಿಕೆ ಮಾಡಿದವರ ಪಾಡು ಅ ದೇವರಿಗೆ ಗೊತ್ತು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖಾ ಸಿಬ್ಬಂದಿಗಳು ತಮ್ಮ ಕಷ್ಟಗಳಿಗೆ ಹೂಡಿಕೆಮಾಡಿ ಮುಂದಿನ ಭವಿಷ್ಯದ ಕನಸು ಕಾಣುತ್ತಿದ್ದ ಮಂದಿಯ ಬದುಕಿಗೆ ಆಸರೆಯಾಗಿ ರಕ್ತ ಬಸಿದು ಕೂಡಿಟ್ಟು ಬ್ಯಾಂಕಿನಲ್ಲಿ ಠೇವಣಿ ಇಟ್ಟ ಹಣವನ್ನು ಹಿಂದಿರುಗಿಸಲು ಮುಂದಾಗಿ.ಇಲ್ಲದಿದ್ದರೆ ಮುಂದಾಗುವ ಸಾವು ನೋವಿಗೆ ನೀವೆ ಹೊಣೆಗಾರರಾಗುತ್ತೀರ
ಸುಧೀರ್ ವಿಧಾತ, ಶಿವಮೊಗ್ಗ