ಕೊಲೆಯಾದ ನೇಪಾಳಿ ಮಂಜ ರೌಡಿಸಂ ಸಹವಾಸ ಬೇಡ ಎಂದು ಇತ್ತೀಚೆಗೆ ಕುಟುಂಬ ಸಮೇತ ದೂರದ ಕುಣಿಗಲ್ಗೆ ಶಿಫ್ಟ್ ಆಗಿದ್ದ. ಯುಗಾದಿ ಹಬ್ಬ ಹಿನ್ನೆಲೆ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡಲು ಊರಿಗೆ ಬಂದಿದ್ದು, ರಾತ್ರಿ 10:45 ರ ಸುಮಾರಿಗೆ ಕೊಲೆ ನಡೆದಿದೆ. ಪರಿಚಿತರಿಂದಲೇ ಕೊಲೆಯಾಗಿರುವ ಶಂಕೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ. ಕೆ ಬಾಬಾ ತಿಳಿಸಿದ್ದಾರೆ.
ಆನೇಕಲ್: ಜನ ಯುಗಾದಿ ಚಂದ್ರನ ಹುಡುಕಾಟದಲ್ಲಿದ್ರೆ ಹಂತಕರು ರೌಡಿಶೀಟರ್ ನೇಪಾಳಿ ಮಂಜನನ್ನು ಕೊಂದು ಮುಗಿಸಿದ್ದಾರೆ.!
ಈ ರೌಡಿಸಂ ಸಾಕು ಎಂದು ಲಾಂಗು ಬದಿಗಿಟ್ಟು ಊರು ಸೇರಿದ್ದ ನೇಪಾಳಿ ಮಂಜ ಹಂತಕರ ಲಾಂಗಿನೇಟಿಗೆ ನೆತ್ತರ ಮಡುವಿನಲ್ಲಿ ಉಸಿರು ಚಲ್ಲಿದ್ದಾನೆ.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಆನೇಕಲ್: ರಾಜಧಾನಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಗೊಲ್ಲಹಳ್ಳಿ ಬಳಿ ಯುಗಾದಿ ಹಬ್ಬದ ಸಂಭ್ರಮದ ದಿನದಂದು ರೌಡಿಶೀಟರ್ ಒಬ್ಬನ ಬರ್ಬರ ಹತ್ಯೆಯಾಗಿದೆ.
ಹತ್ಯೆಯಾದ ರೌಡಿಶೀಟರ್ನನ್ನು ಮಂಜ ಅಲಿಯಾಸ್ ನೇಪಾಳಿ ಮಂಜ ಎಂದು ಗುರುತಿಸಲಾಗಿದೆ.ಊರಿನ ಮಂದಿ ಯುಗಾದಿ ಚಂದ್ರನನ್ನು ನೋಡಲು ಹುಡುಕಾಡಿ ಕಾಣದ ಕಾರಣಕ್ಕೆ ಮಧ್ಯಾಹ್ನದ ಉಳಿದ ಹಬ್ಬದೂಟವನ್ನು ಉಂಡು ಮನೆ ಜಗುಲಿಯ ಮೇಲೆ ಕುಳಿತು ಹರಟೆಗೆ ಇಳಿದಿದ್ದರೆ.ರೌಡಿಶೀಟರ್ ನೇಪಾಳಿ ಮಂಜ ಯುಗಾದಿ ಹಬ್ಬದ ಎಣ್ಣೆ ಪಾರ್ಟಿಗೆ ಹೋಗಿದ್ದ ವೇಳೆ ಎರಡು ಬೈಕ್ನಲ್ಲಿ ಬಂದ ಹಂತಕರ ಪಡೆ ಕ್ಷಣಮಾತ್ರದಲ್ಲಿ ಮಂಜನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದಾರೆ.!ಹಂತಕರ ಪಡೆ ಮೊದಲೇ ಸ್ಕೆಚ್ ಹಾಕಿಕೊಂಡು ಬಂದು ನೇಪಾಳಿ ಮಂಜನ ಮೇಲೆ ಲಾಂಗು ಮಚ್ಚುಗಳಿಂದ ಮನಬಂದಂತೆ ಅಟ್ಯಾಕ್ಮಾಡಿ ಆತನ ದೇಹದ ಸಿಕ್ಕ ಸಿಕ್ಕ ಭಾಗವನ್ನು ಕತ್ತರಿಸಿ ಹಾಕಿದ್ದರೆ.! ಹಂತಕರ ಲಾಂಗಿನೇಟಿಗೆ ನೇಪಾಳಿ ಮಂಜ ನೆಲಕ್ಕೂರುಳಿ ಉಸಿರು ಚಲ್ಲಿದ್ದಾನೆ.! ಇದು ಹಳೇ ದ್ವೇಷದ ಹಿನ್ನೆಲೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಜಗ್ಗ ಅಲಿಯಾಸ್ ಜಗದೀಶ್ ಮತ್ತವನ ಗ್ಯಾಂಗ್ ನೇಪಾಳಿ ಮಂಜನನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಕೊಲೆಯಾದ ನೇಪಾಳಿ ಮಂಜ ಇತ್ತೀಚೆಗೆ ರೌಡಿಸಂ ಸಹವಾಸ ಬೇಡ ಎಂದು ಕುಟುಂಬ ಸಮೇತವಾಗಿ ದೂರದ ಕುಣಿಗಲ್ಗೆ ವಲಸೆ ಹೋಗಿದ್ದ.! ಚಟ ಯಾರಪ್ಪಂದು ಯುಗಾದಿ ಹಬ್ಬ ಹಿನ್ನೆಲೆ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡಲು ಊರಿಗೆ ಹೋಗಿದ್ದ ಸಂಧರ್ಭದಲ್ಲಿ ರಾತ್ರಿ 10:45 ರ ಸುಮಾರಿಗೆ ಮಂಜನ ಕೊಲೆ ನಡೆದಿದೆ. ನೇಪಾಳಿ ಮಂಜನ ಹತ್ಯೆ ಆತನ ಪರಿಚಿತರಿಂದಲೇ ನೆಡೆದಿರುವ ಶಂಕೆ ವ್ಯಕ್ತವಾಗಿದೆ.! ಈ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ಕೆಲವೊಂದು ಮಾಹಿತಿಯನ್ನು ತಿಳಿಸಿದ್ದಾರೆ.
ಎರಡು ಕೊಲೆ ಸೇರಿದಂತೆ ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮೃತ ನೇಪಾಳಿ ಮಂಜ ಪ್ರಮುಖ ಆರೋಪಿಯಾಗಿದ್ದನಂತೆ.ಇವನನ್ನು ಎರಡು ಬಾರಿ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು. ಕಳೆದ ಚುನಾವಣೆ ಸಂಧರ್ಭದಲ್ಲಿ ಗಡಿಪಾರು ಕೂಡ ಮಾಡಲಾಗಿತ್ತು ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ, ಶ್ವಾನದಳ, ಬೇಟಿ ನೀಡಿ ಸ್ಥಳ ಮಹಜರು ನೆಡೆಸಿದ್ದಾರೆ. ಈಗಾಗಲೇ ಆರೋಪಿಗಳ ಸುಳಿವು ಸಿಕ್ಕಿದ್ದು,ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ನೇಪಾಳಿ ಮಂಜನ ಹತ್ಯೆಗೆ ಕಾರಣವೇನೆಂದು ಹತ್ಯಾ ಆರೋಪಿಗಳ ಬಂಧನವಾದ ಮೇಲೆ ಬಯಲಾಗಲಿದೆ..! ಆದರೆ ನೇಪಾಳಿ ಮಂಜನ ಹತ್ಯೆಗೆ ಸ್ನೇಹಿತರೆ ಚಟ್ಟಕಟ್ಟಿದರಾ.? ಎನ್ನುವ ಅನುಮಾನ ಬಲವಾಗಿ ಕೇಳಿ ಬರುತ್ತಿದೆ… ತಾನು ರೌಡಿಸಂ ಬಿಟ್ಟು ಸುಮ್ಮನೆ ಇರ್ತಿನಿ ಅಂದ್ರು ಮಾಡಿದ ಪಾಪದ ಕೃತ್ಯ ಯಮಪಾಶವಾಗಿ ಬೆನ್ನಿಗೆ ಇರೋತ್ತೆ ಅನ್ನೊದಿಕ್ಕೆ ಇತನ ಕೊಲೆಯೆ ಸಾಕ್ಷಿಯಾಗಿ ನಿಂತಿದೆ.!