ಬ್ಯಾಡರಹಳ್ಳಿಯಲ್ಲಿ ಗ್ಯಾಂಗ್ ವಾರ್ : ಕಾಲ್ ಮಾಡಿ ಕೆಣಕಿದ್ದಕ್ಕೆ ಮನೆಗೆ ನುಗ್ಗಿದ ರೌಡಿಶೀಟರ್ ಗ್ಯಾಂಗ್
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬೆಂಗಳೂರು: ತಮ್ಮ ಏರಿಯಾದಲ್ಲಿ ಹವಾ ಮೆಂಟೈನ್ ಮಾಡೋದು ರೌಡಿಗಳಿಗೆ ತಮ್ಮ ರಕ್ತದಲ್ಲೆ ಬಂದಿರೊತ್ತೆ ಅನ್ಸೋತ್ತೆ.! ಹುಟ್ಟುಗುಣ ಸುಟ್ರು ಹೋಗಲ್ಲ ಅನ್ಸೋತ್ತೆ. ತಮ್ಮ ಏರಿಯಾಗಳಲ್ಲಿ ನಮ್ಮನ್ನು ನೋಡಿದ್ರೆ ಸಾಕು ಜನ, ಎದುರಾಳಿಗಳು ಭಯ ಪಡಬೇಕು ಅಂತನೇ ಕೆಲ ರೌಡಿಗಳು ಕಿರಿಕ್ ಮಾಡ್ತಾನೆ ಇರ್ತಾರೆ.!ಈ ಹಿನ್ನಲೆಯಲ್ಲಿ ಏರಿಯಾದಲ್ಲಿ ಹವಾ ಮೈಂಟೆನ್ ಮಾಡೋಕೆ ಪೋನ್ ಮಾಡಿ ಅವಾಜ್ ಹಾಕಿದ್ದಕ್ಕೆ ಇಬ್ಬರು ಪುಡಿರೌಡಿಗಳ ಮನೆ ಮೇಲೆ ರೌಡಿಶೀಟರ್ನ ಗ್ಯಾಂಗ್ವೊಂದು ಅಟ್ಯಾಕ್ ಮಾಡಿದೆ. ಏಕಾಏಕಿ ಅವರುಗಳ ಮನೆಗೆ ನುಗ್ಗಿ ಇಬ್ಬರ ಮೇಲೂ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು.ವಿಷಯ ತಿಳಿದ ಕೂಡಲೇ ಕಾರ್ಯಚರಣೆಗೆ ಇಳಿದ ಪೊಲೀಸರು ರೌಡಿಶೀಟರ್ ಗ್ಯಾಂಗ್ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ನಡೆದಿದ್ದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸರಹದ್ದಿನ ವಿಘ್ನೇಶ್ವರ ನಗರದಲ್ಲಿ. ನವೀನ್ ಮತ್ತು ಅಭಿ ಎನ್ನುವ ಪುಡಿರೌಡಿಗಳ ಮೇಲೆ ಆ್ಯಪಲ್ ಸಂತೋಷ್ ಎನ್ನುವ ರೌಡಿಶೀಟರ್ ಗ್ಯಾಂಗ್ ಅಟ್ಯಾಕ್ ಮಾಡಿದೆ.ಕಳೆದ 27ನೇ ತಾರೀಖು ಬಾರ್ ವೊಂದರ ಬಳಿ ನವೀನ್ ಮತ್ತು ಅಭಿ ಇಬ್ಬರು ನಿಂತಂತ ಸಂಧರ್ಭದಲ್ಲಿ ಅಲ್ಲಿಗೆ ಬಂದ ಆ್ಯಪಲ್ ಸಂತೋಷ್ ಮತ್ತು ದಂಧೆ ಶಿವ & ಗ್ಯಾಂಗ್ ಅಲ್ಲಿದ್ದ ಇಬ್ರನ್ನೂ ಕರೆದು ಏಯ್ ನಾವಂದ್ರೆ ಭಯ ಇಲ್ವನ್ರೋ.. ನಾವ್ ಬಂದ್ರೆ ಮರ್ಯಾದೆ ಕೊಡಬೇಕು ಗೊತ್ತಲ್ವಾ ಅಂತಾ ಅವಾಜ್ ಹಾಕಿ ಎರಡೇಟು ಹೊಡೆದು ಕಳೆಸಿದ್ದಾರೆ.!
ಅವಾಜ್ ಹಾಕಿಸ್ಕೊಂಡು ಮನೆಗೆ ಹೋಗಿದ್ದ ನವೀನ್ ದಂಧೆ ಶಿವ ಎಂಬ ರೌಡಿಗೆ ಕಾಲ್ ಮಾಡಿ ಏನ್ರೋ ನಮ್ಗೆ ಅವಾಜ್ ಹಾಕ್ತೀರಾ. ನಾವ್ಯಾರು ಅಂತಾ ಗೊತ್ತಲ್ಲ. ತಾಕತ್ ಇದ್ರೆ ನಮ್ ಏರಿಯಾಗ್ ಬನ್ನಿ ಅಂತಾ ಉಲ್ಟಾ ಅವಾಜ್ ಹಾಕಿದ್ದಾನೆ. ಅಷ್ಟೇ ಮರು ದಿನ ಅಂದ್ರೆ 28 ತಾರೀಖು ಸೀದಾ ಆ್ಯಪಲ್ ಸಂತೋಷ್, ದಂಧೆ ಶಿವ ತನ್ನ ಪಟಾಲಂ ಕರ್ಕೊಂಡು ನವೀನ್ ಮತ್ತೆ ಅಭಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಈ ನವೀನ್ ಅದೇ ಏರಿಯಾದ ಮತ್ತೋರ್ವ ರೌಡಿಶೀಟರ್ ವಡ್ಡ ನಾಗನ ಶಿಷ್ಯನಂತೆ. ಈ ವಡ್ಡ ನಾಗ ಮತ್ತು ಆ್ಯಪಲ್ ಸಂತೋಷ್ ಮಧ್ಯೆ ಗ್ಯಾಂಗ್ ವಾರ್ ಇದೆ. ವಡ್ಡಾ ನಾಗನ ಹವಾ ಜಾಸ್ತಿ ಆಯ್ತು ಅಂತಾ ಆ್ಯಪಲ್ ಸಂತೋಷ್ ಅಟ್ಯಾಕ್ ಮಾಡಿದ್ದಾನೆ ಅನ್ನೋದು ಸದ್ಯದ ಸ್ಥಿತಿ ಇನ್ನು ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ಕರಿಯ ಕಿರಣ, ದಂಧೆ ಶಿವ, ರೇವಂತ್, ತುರೆ ಸುರೇಶ, ಸೈಕೋ ಸಿದ್ದ ಸೇರಿದಂತೆ ಐವರು ರೌಡಿಗಳನ್ನು ಅರೆಸ್ಟ್ ಮಾಡಿದ್ದಾರೆ. ಉಳಿದ ರೌಡಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ಬ್ಯಾಡರಹಳ್ಳಿ ರೌಡಿಗಳ ಕೊಂಪೆ ಎನ್ನುವ ಮಾತು ಕೇಳಿಬರುತ್ತಿದೆ, ಇಲ್ಲಿ ರೌಡಿಗಳ ನಡುವೆ ಗ್ಯಾಂಗ್ವಾರ್ ಹೊಸದೆನು ಅಲ್ಲ.ಆದರೆ ನಿತ್ಯಾ ಇದೆ ದಂಧೆ ಮಾಡಿಕೊಂಡಿರುವ ರೌಡಿಗಳ ನಡುಮುರಿಯುವ ಕೇಲಸ ಪೋಲಿಸರಿಂದ ಆಗಬೇಕಿದೆ.