Headlines

ಟೀಚರಮ್ಮನ ಒಂದು ಮುತ್ತಿಗೆ 50 ಸಾವಿರ ರೂಪಾಯಿ.! ಶಿಕ್ಷಕಿ ಮುತ್ತಿನ ಬಲೆಗೆ ಬಿದ್ದವನ ಒಂದು ಮುತ್ತಿನ ಕಥೆ.!?

ಅಶ್ವಸೂರ್ಯ/ಬೆಂಗಳೂರು: ಇತ್ತೀಚೆಗೆ ರಾಜಧಾನಿ ಬೆಂಗಳೂರು ಹನಿಟ್ರ್ಯಾಪರ್‌ಗಳ ಅಡ್ಡೆಯಾಗಿದೆ ಹೆಣ್ಣಿನ ಮೊಹಕ ಭಲೇಗೆ ಬಿದ್ದವರನ್ನ ಹೆದರಿಸಿ ಹಣಮಾಡುವ ಖದೀಮರ ಗ್ಯಾಂಗ್‌ಗಳು ಬೆಂಗಳೂರು ನಗರದಲ್ಲಿ ಆಕ್ಟೀವ್ ಆಗಿವೆ.. ಅದರಲ್ಲೂ ಇತ್ತೀಚೆಗೆ ರಾಜಕಾರಣಿಗಳ ಹನಿಟ್ರ್ಯಾಪ್ ಸುದ್ದಿ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಖಾಸಗಿ ಪ್ರೀಸ್ಕೂಲ್ ಶಿಕ್ಷಕಿಯೊಬ್ಬರ ಪ್ರೇಮ್ ಕಹಾನಿ ಕಥೆ ಸ್ಥಳಿಯರನ್ನು ಅಚ್ಚರಿ ಪಡಿಸಿದೆ. ಪ್ರಿ ಸ್ಕೂಲ್‌ಗೆ ಬರುತ್ತಿದ್ದ ಮಕ್ಕಳ ಪೋಷಕರನ್ನೇ ಟಾರ್ಗೆಟ್‌ ಮಾಡುತ್ತಿದ್ದ ಈ ಬ್ಯೂಟಿಫುಲ್ ನಾರಿಯು ಲಕ್ಷಾಂತರ ರೂಪಾಯಿ ವಂಚಿಸಿರುವುದು ಇದೀಗ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯ ಮೂರುಬಿಟ್ಟ ಪೋಷಕನೊಬ್ಬನಿಗೆ ಮುತ್ತು ಕೊಟ್ಟು 50 ಸಾವಿರ ರೂಪಾಯಿ ಕಿತ್ತಿದ್ದಾಳಂತೆ.!? ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿದ್ದಾಳೆ.

ಬ್ಯೂಟಿ ಶಿಕ್ಷಕಿ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಶಿಕ್ಷಕಿ ಶ್ರೀದೇವಿ ಮತ್ತು ಗಣೇಶ್ ಕಾಳೆ ಹಾಗೂ ಸಾಗರ್ ಮೋರೆ ಬಂಧಿತ ಆರೋಪಿಗಳಾಗಿದ್ದಾರೆ. ಮೂಲತಃ ವಿಜಯನಗರ ಜಿಲ್ಲೆಯವರಾದ ಮೂವರು ಆರೋಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. 
ಮಹಾಲಕ್ಷ್ಮಿ ಲೇಔಟ್ ನಲ್ಲಿ ಪ್ರೀಸ್ಕೂಲ್ ನಡೆಸುತ್ತಿದ್ದ ಆರೋಪಿತೆ ಶ್ರೀದೇವಿಗೆ ತನ್ನ ಸ್ಕೂಲ್‌ಗೆ ಬರುತ್ತಿದ್ದ ಮಗುವಿನ ಪೋಷಕ ರಾಕೇಶ್‌ನ ಪರಿಚಯವಾಗಿತ್ತು. 2023 ರಲ್ಲಿ ಈತನ ಪರಿಚಯವಾಗಿತ್ತು. ತನ್ನ ಮಕ್ಕಳನ್ನು ಶ್ರೀದೇವಿಯ ಪ್ಲೇ ಹೋಮ್ ಗೆ ಈ ವ್ಯಕ್ತಿ ಕಳಿಸುತ್ತಿದ್ದರು. ರಾಕೇಶ್ ನಿಂದ ಶ್ರೀದೇವಿ ಶಾಲೆ ನಿರ್ವಹಣೆ ಸಲುವಾಗಿ 2 ಲಕ್ಷ ಸಾಲ ಪಡೆದಿದ್ದರಂತೆ.! 2024 ರಲ್ಲಿ ಈ ಹಣವನ್ನು ವಾಪಸ್ ಕೊಡುವುದಾಗಿ ತಿಳಿಸಿದ್ದರು. 

ಹಣ ವಾಪಸ್ ಕೇಳಿದಾಗ ಶಾಲೆ ಪಾರ್ಟ್ನರ್ ಆಗು ಎಂದಿದ್ದಳು. ಈ ವೇಳೆ ಇಬ್ಬರ ನಡುವೆ ಸಲುಗೆ ಬೆಳಸಿ ಸುತ್ತಾಟ ನಡೆಸಿದ್ದರು. ಶ್ರೀದೇವಿ‌ ಜೊತೆ ಮಾತನಾಡಲು ಹೊಸ ಸಿಮ್ ಹಾಗೂ ಪೋನ್ ಖರೀದಿಸಿದ್ದರು. ಜನವರಿ ಮೊದಲ ವಾರದಲ್ಲಿ ಹಣ ವಾಪಸ್ ಕೇಳಿದ್ದರು.

ಈ ವೇಳೆ ನಿನಗೆ ಏನು ಬೇಕು ಕೇಳು ಕೊಡುತ್ತೇನೆ. ಹಣಕಾಸಿನ ವ್ಯವಹಾರ ಒಂದೇ ಸಲ ಮುಗಿಸಿಬಿಡೋಣ ಎಂದಿದ್ದಳು. ನಂತರ ರಾಕೇಶ್ ಮನೆಗೆ ತೆರಳಿದ್ದ ಶ್ರೀದೇವಿ ಮುತ್ತಿಟ್ಟು ಐವತ್ತು ಸಾವಿರ ಪಡೆದಿದ್ದಳು.ಬಳಿಕ ನಿನ್ನ ಜೊತೆ ರಿಲೇಷನ್ ಶಿಪ್ ನಲ್ಲಿ ಇರುತ್ತೆನೆಂದು ಆಫರ್ ಕೊಟ್ಟಿದ್ದರು. ಈ ವೇಳೆ ಮತ್ತೆ 15 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಪದೆ ಪದೇ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದರಿಂದ ಸಿಮ್ ಮುರಿದು ಬಿಸಾಕಿದ್ದರಂತೆ ಎಂದು ರಾಕೇಶ್ ಹೇಳಿದ್ದಾರೆ.
ಮಾರ್ಚ್ 12 ರಂದು ರಾಕೇಶ್ ಪತ್ನಿಗೆ ಕರೆಮಾಡಿದ್ದರು. ಮಗುವಿನ ಸ್ಕೂಲ್ ಟಿಸಿ ಕೊಡುತ್ತೇನೆ ನಿಮ್ಮ ಪತಿಯನ್ನ ಕಳಿಸಿ ಎಂದಿದ್ದಳು. ಅದರಂತೆ ಶ್ರೀದೇವಿಯ ಪ್ರೀ ಸ್ಕೂಲ್ ಗೆ ತೆರಳಿದ್ದರು. ಪ್ರೀಸ್ಕೂಲ್ ನಲ್ಲಿ ಶ್ರೀದೇವಿ ಜೊತೆ ಹಾಜರಿದ್ದ ಇತರೆ ಆರೋಪಿಗಳಾದ ಸಾಗರ್ ಹಾಗೂ ಗಣೇಶ್ ಮಗುವಿನ ಪೋಷಕನಿಗೆ ಅವಾಜ್ ಹಾಕಿದ್ದರು.
ಸಾಗರ್ ಜೊತೆ ಶ್ರೀದೇವಿಗೆ ಎಂಗೇಜ್ಮೆಂಟ್ ಆಗಿದೆ. ಆದರೆ ನೀನು ಆಕೆ ಜೊತೆ ಮಜಾ ಮಾಡ್ತಿದ್ದೀಯ. ಈ ವಿಚಾರವನ್ನ ಶ್ರೀದೇವಿಯ ತಂದೆ ಹಾಗೂ ನಿನ್ನ ಹೆಂಡತಿಗೆ ತಿಳಿಸುತ್ತೇವೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆಂದು ಆರೋಪಿಸಲಾಗಿದೆ. 

ಸಾಗರ್ ಜೊತೆ ಶ್ರೀದೇವಿಗೆ ನಿಶ್ಚಿತಾರ್ಥ ಆಗಿದೆ. ಆದರೆ ನೀನು ಆಕೆ ಜೊತೆ ಮಜಾ ಮಾಡುತ್ತಿದ್ದಿ. ಯಾರಿಗೂ ವಿಚಾರ ಹೇಳಬಾರದು ಎಂದರೆ 1 ಕೋಟಿ‌ ರೂ. ಕೊಡು ಎಂದು ಬ್ಲ್ಯಾಕ್​ಮೇಲ್‌ಗೆ ಮುಂದಾಗಿದ್ದಾರೆ. ಕೊನೆಯದಾಗಿ ಆರೋಪಿಗಳು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರಂತೆ. 1.90 ಲಕ್ಷ ರೂ. ಹಣ ಪಡೆದು ಬಿಟ್ಟು ಕಳುಹಿಸಿದ್ದರಂತೆ. ಆದರೆ, ಉಳಿದ ಹಣ ನೀಡುವಂತೆ ಪ್ರಾಣ ಬೆದರಿಕೆ ಹಾಕಿದ್ದರು ಎಂದು ರಾಕೇಶ್ ಆರೋಪಿಸಿದ್ದಾರೆ.
ಮಾರ್ಚ್ 17 ರಂದು ಮತ್ತೆ ರಾಕೇಶ್ ಗೆ ಕರೆ ಮಾಡುವ ಶ್ರೀದೇವಿ 15 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾಳೆ. ಹಣ ಕೊಟ್ಟರೇ ವಿಡಿಯೋ, ಚಾಟ್‌ ಡಿಲೀಟ್ ಮಾಡ್ತೀನಿ. ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ನಿನ್ನ ಸಂಸಾರವನ್ನ ಹಾಳು ಮಾಡ್ತೀವೆಂದು ಬ್ಲಾಕ್ ಮೇಲ್ ಮಾಡಿದ್ದರಂತೆ.
ಬೆಂಗಳೂರು ಸಿಸಿಬಿಗೆ ದೂರು ರಾಕೇಶ್ ನೀಡಿದ್ದರು. ಸದ್ಯ ದೂರಿನನ್ವಯ ಶ್ರೀದೇವಿ, ಅರುಣ್ ಮತ್ತು ಸಾಗರ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದಿದ್ದಾರೆ.ಒಟ್ಟಿನಲ್ಲಿ ಸುಂದರ ಶಿಕ್ಷಕಿಯ ಬೆನ್ನಿಗೆ ಬಿದ್ದ ಅಂಕಲ್ ಒಂದು ಮುತ್ತಿಗೆ 50,000 ಸಾವಿರ ಕೊಟ್ಟಿದ್ದು ಮಾತ್ರ ದುರಂತವೆ ಹೌದು…

Leave a Reply

Your email address will not be published. Required fields are marked *

Optimized by Optimole
error: Content is protected !!