ನೀರಿನಲ್ಲಿ ಮುಳುಗಿ ಮೂರು ದಿನ ಕಳೆದರು ಇನ್ನೂ ಸಿಗದ ಭದ್ರಾವತಿಯ ಶರತ್ ಮೃತದೇಹ ಮುಳುಗು ತಜ್ಞರಿಂದ ನಿರಂತರ ಹುಡುಕಾಟ..

ಅರಿವಿಲ್ಲದೆ ಸಾವಿನ ಮನೆ ಸೇರಿದ ಭದ್ರಾವತಿಯ ಯುವಕ ಶರತ್

ಕೊಲ್ಲೂರು ವ್ಯಾಪ್ತಿಯ ಅರಸಶಿನಗುಂಡಿ ಜಲಪಾತದಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಭಾನುವಾರ ರಿಲ್ಸ್ ಮಾಡಲು ಹೋಗಿ ರಿಯಲ್ ಆಗಿಯೆ ಕಾಲುಜಾರಿ ಜಲಪಾತಕ್ಕೆ ಬಿದ್ದ ಶರತ್ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆಸಿದ್ದಾರೆ…!

ಘಟನೆಯ ವಿವರ

ಉಡುಪಿ: ಕೊಲ್ಲೂರು ಸಮೀಪದ ಅರಿಶಿಣಗುಂಡಿ ಫಾಲ್ಸ್ ನಲ್ಲಿ ಬಂಡೆಯ ಮೇಲೆ ನಿಂತು ರೀಲ್ಸ್ ಮಾಡಲು ಹೋಗಿ ತನಗೆ ಅರಿವಿಲ್ಲದೆ ರೀಯಲ್ ಆಗಿ ಕಾಲುಜಾರಿ ಕೊಚ್ಚಿ ಹೋದ ಭದ್ರಾವತಿಯ ಯುವಕ ಶರತ್ ಎನಾಗಿದ್ದಾನೆ.? ಎನ್ನುವುದು ತಿಳಿಯದಾಗಿದೆ. ನೀರಿನಲ್ಲಿ ಕೊಚ್ಚಿ ಹೋಗಿರುವುದು ಮಾತ್ರ ಆತನ ಸ್ನೇಹಿತನ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ..! ನೀರಿನಲ್ಲಿ ಕೊಚ್ಚಿಹೋಗಿ ಸುಮಾರು ಮೂರು ದಿನ ಕಳೆದರೂ ಇನ್ನೂ ಶರತ್ ಮಾತ್ರ ಪತ್ತೆಯಾಗಿಲ್ಲ ನೂರಾರು ಜನ ಆತನಿಗಾಗಿ ಹಗಲಿರುಳು ಹುಡುಕುತ್ತಿದ್ದಾರೆ.
ಶರತ್ ಬಂಡೆಯ ಮೇಲಿನಿಂದ ಕಾಲು ಜಾರಿ ಬಿದ್ದಂತಹ ಸ್ಥಳದಲ್ಲಿ ನೀರಿನ ಹರಿವು ರಭಸವಾಗಿತ್ತು ಜೊತೆಗೆ ಕಾಲುಜಾರಿ ಬಂಡೆಯ ಮೇಲೆ ಬಿಳುತಿದ್ದ ಹಾಗೆ ಆತನಿಗೆ ಬಲವಾದ ಹೊಡೆತ ಬಿದ್ದಿದೆ ಬದುಕಲು ಪ್ರಯತ್ನಿಸಲು ಸಾಧ್ಯವಾಗ ರೀತಿಯಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ನೀರಿನ ಹರಿವಿನ ಉದ್ದಕ್ಕೂ ದೊಡ್ಡ ದೊಡ್ಡ ಬಂಡೆಗಳು ನೀರಿನಲ್ಲಿ ಮುಳಿಗಿವೆ ಆತನ ಮೃತದೇಹ ಯಾವುದೋ ಬಂಡೆಯ ಅಡಿಗೆ ಸಿಲುಕಿರುವ ಸಾಧ್ಯತೆ ಇರಬಹುದು.? ಶರತ್ ಮೃತದೇಹಕ್ಕಾಗಿ ಮುಳುಗು ತಜ್ಞರಿಂದ ಹುಡುಕಾಟ ನೆಡೆದಿದೆ.

ಶರತ್ ಕಾಲುಜಾರಿ ಜಲಪಾತಕ್ಕೆ ಬಿದ್ದ ದೃಶ್ಯ ಆತನ ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿದೆ..!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಶರತ್ ಎಂಬ 23 ವರ್ಷದ ಯುವಕ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಶಿನಗುಂಡಿ ಜಲಪಾತದಲ್ಲಿ ಭಾನುವಾರ ಸಂಜೆ ಕಾಲುಜಾರಿ ಮುಳುಗಿ ಮೃತಪಟ್ಟಿದ್ದಾನೆ..!?
ಶರತ್ ಸ್ನೇಹಿತರೊಂದಿಗೆ ಕಳೆದ ಭಾನುವಾರ ಅಂದರೆ ಜುಲೈ 24ರಂದು ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತ ನೋಡಲು ಹೋಗಿದ್ದರೆ. ಈ ವೇಳೆ ಬಂಡೆಗಳ ಮೇಲೆ ನಿಂತು ರೀಲ್ಸ್ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಹೊರಡುವ ಮುನ್ನ ಅಮ್ಮನ ಕೈಯಲ್ಲಿ ಎರಡುಸಾವಿರ ಖರ್ಚಿಗೆ ಕೊಟ್ಟು ಕೊಲ್ಲೂರು ಮೂಕಾಂಬಿಕಾ ದೇವಾಲಯ ಮತ್ತು ಕಮಲಶಿಲೆ ಹಾಗೆ ಹೊಸಂಗಡಿಗೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಆದರೆ ದೇವಸ್ಥಾನಕ್ಕೆ ಹೋಗುವ ಹಾದಿಯಲ್ಲಿ ಭರ್ಜರಿ ಮಳೆ ಬರುತ್ತಿದ್ದ ಕಾರಣ ಧುಮ್ಮಿಕ್ಕುವ ಜಲಪಾತವನ್ನು ವೀಕ್ಷಿಸುವ ಮನಸ್ಸಾಗಿದೆ ಹೋಗೋಣವೆಂದು ಸ್ನೇಹಿತರೆಲ್ಲ ಸೇರಿ ಅರಿಶಿನಗುಂಡಿ ಜಲಪಾತಕ್ಕೆ ಹೋಗಿದ್ದಾರೆ.
ಶರತ್ ತನ್ನ ಓದು ಮುಗಿಸಿ ಜೆಸಿಬಿ ಮತ್ತು ಹಿಟಾಚಿ ವ್ಯಾಪಾರ ಮತ್ತು ವ್ಯವಸಾಯ ಮಾಡಿಕೊಂಡಿದ್ದನಂತೆ. ಈಗ ಜೋರಾಗಿ ಸುರಿಯುವ ಮಳೆಗಾಲ ಕೃಷಿ ಕೆಲಸ ಕಡಿಮೆ ಇದ್ದುದರಿಂದ ಸ್ನೇಹಿತರೆಲ್ಲಾ ಸೇರಿ ದೇವಾಲಯಕ್ಕೆ ಹೋಗಲು ಹೊರಟಿದ್ದಾರೆ. ಆದರೆ ವಿಧಿ ಆಟ ದೇವಾಲಯಕ್ಕೆಂದು ಹೋದವರು ಅರಿಶಿಣಗುಂಡಿ ಜಲಪಾತಕ್ಕೆ ತೆರಳಿ ಪ್ರಾಣ ಕಳೆದುಕೊಂಡಿದ್ದಾನೆ.!
 ಶರತ್ ಬಿದ್ದ ಜಾಗದಲ್ಲಿ ಮತ್ತು ಸುತ್ತಮುತ್ತ ಸ್ಥಳಗಳಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಸತತ ಕಾರ್ಯಾಚರಣೆ ನಡೆಸಿದರೂ ಈ ವರೆಗೂ ಶರತ್ ಮೃತದೇಹ ಸಿಕ್ಕಿಲ್ಲ.
ಅರಿಶಿನಗುಂಡಿ ಜಲಪಾತಕ್ಕೆ ಹೋಗುವ ಮೊದಲು ಸಿಗುವ ತೊರೆಯನ್ನು ದಾಟಲು ಸಾಧ್ಯವಾಗದೆ ಕೆಲಕಾಲ ಕಾರ್ಯಚರಣೆಯನ್ನು ನಿಲ್ಲಿಸಲಾಗಿತ್ತು. ಎಂದು ಕೊಲ್ಲೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜಯಶ್ರೀ ಹೊನ್ನೂರು ತಿಳಿಸಿದ್ದಾರೆ.
ಜಲಪಾತಕ್ಕೆ ಪ್ರವೇಶ ನಿಷೇಧ
 ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಚಾರಣಕ್ಕೆ ನಿಷೇಧವಿದ್ದರೂ, ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುವ ಕೊಲ್ಲೂರಿನ ಮೂಕಾಂಬಿಕಾ ವನ್ಯಜೀವಿಧಾಮದಲ್ಲಿರುವ ಜಲಪಾತವನ್ನು ತಲುಪುವ ಮುನ್ನ ಶರತ್ ಮತ್ತು ಆತನ ಸ್ನೇಹಿತ ಗುರುರಾಜ್ 6 ಕಿಲೋ ಮೀಟರ್ ನಡೆದುಕೊಂಡೇ ಹೋಗಿದ್ದಾರೆ. 
ಜಲಪಾತಕ್ಕೆ ಹೋಗಲು ಅನುಮತಿ ಇರಲಿಲ್ಲ. ಅಪಾಯದಲ್ಲಿ ಅವರಾಗಿಯೇ ಹೋಗಿದ್ದಾರೆ. ಎಲ್ಲಾ ಪ್ರವಾಸೋದ್ಯಮ ಇಲಾಖೆ ಗೊತ್ತುಪಡಿಸಿದ ಜಲಪಾತಗಳಲ್ಲಿ ಪ್ರವಾಸಿಗರು ಜಲಪಾತಗಳಿಗೆ ಇಳಿಯದಂತೆ ಎಚ್ಚರಿಕೆ ವಹಿಸಲು ಜಿಲ್ಲಾಡಳಿತವು ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ಉಡುಪಿ ಎಸ್ಪಿ ಅಕ್ಷಯ್ ಅವರು ಹೇಳಿದ್ದಾರೆ. ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದ ಡಿಸಿಎಫ್ ಗಣಪತಿ ಕೆ, ಮಳೆಗಾಲದಲ್ಲಿ ಎಲ್ಲಾ ಟ್ರೆಕ್ಕಿಂಗ್ ಮಾರ್ಗಗಳನ್ನು ಮುಚ್ಚಲಾಗುತ್ತದೆ ಎಂದು ತಿಳಿಸಿದರು. 
ಕೊಲ್ಲೂರಿನ ಗಡಿ ಪ್ರದೇಶದಲ್ಲಿ ಗ್ರಾಮ ಅರಣ್ಯ ಸಮಿತಿಯ ಗಮನಕ್ಕೆ ಬಾರದೆ ಮೃತ ವ್ಯಕ್ತಿ ಹಾಗೂ ಆತನ ಸ್ನೇಹಿತರು ಜಲಪಾತಕ್ಕೆ ತೆರಳಿರಬಹುದು. ಇಂತಹ ದುಸ್ಸಾಹಸಕ್ಕೆ ಜನರು ಮುಂದಾಗಬಾರದು ಎಂದರು. 


ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!