ತೀರ್ಥಹಳ್ಳಿ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮಧ್ಯಭಾಗದಲ್ಲಿ ಮತ್ತು ರಸ್ತೆಯ ಎರಡು ಬದಿಯ ಇಕ್ಕೆಲಗಳಲ್ಲೂ ಸುಂದರವಾಗಿ ಬೆಳೆದು ನಿಂತಿದ್ದ ಮರ ಗಿಡಗಳನ್ನು ಟ್ರಿಮ್ ಮಾಡದೆ ಮನಬಂದಂತೆ ಕಡಿದು ಧರೆಗೆ ಉರುಳಿಸಿದ ದುಷ್ಟರು..!! ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಬಿ ಆರ್ ರಾಘವೇಂದ್ರ ಶೆಟ್ಟಿ ( ಕಂಡಿಲ್ ರಾಘು) ಒತ್ತಾಯ
ತೀರ್ಥಹಳ್ಳಿ ಹೃದಯ ಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಆಧುನಿಕ ಮಾದರಿಯಲ್ಲಿ 2017 ರಲ್ಲಿ, ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟು ಕೊಡಲಾಗಿತ್ತು. ಪಟ್ಟಣ ಮತ್ತು ರಸ್ತೆಯ ಸೌಂದರ್ಯಕ್ಕಾಗಿ, ನೂರಾರು ವಿವಿಧ ಜಾತಿಯ ಗಿಡಗಳನ್ನು ಮೀಡಿಯನ್ (ರಸ್ತೆಯ ಮಧ್ಯ ಭಾಗ) ಮತ್ತು ಎರಡು ಬದಿಯ ಪುಟ್‌ಪಾತ್ ಅಂಚಿನಲ್ಲಿ ಗಿಡ ನೆಡಲಾಗಿತ್ತು. ಆ ಗಿಡಗಳು ಬಹಳ ಸೊಗಸಾಗಿ ಬೆಳೆದು,ತೀರ್ಥಹಳ್ಳಿ ಪಟ್ಟಣದ ಸೌಂದರ್ಯವನ್ನೇ ಬದಲಾಯಿಸಿದ್ದವು ಎಂದರೆ ತಪ್ಪಾಗಲಾರದು.
ಇದರ ನಿರ್ವಹಣೆ ಮಾಡುವ ಹೊಣೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಯದ್ದಾಗಿತ್ತು ಆದರೂ, ಸರಿಯಾದ ರೀತಿಯಲ್ಲಿ ನಿರ್ವಹಣೆ ಆಗದೆ. ಗಿಡಗಳಿಗೆ ನೀರು, ಗೊಬ್ಬರ ಮತ್ತು ವರ್ಷಕೊಮ್ಮೆ ನುರಿತವರಿಂದ ಪ್ರೊನಿಂಗ್ ಮಾಡುವ ಅವಶ್ಯಕತೆ ಇದೆ. ಪಾಮ್ ಮತ್ತು ಕೋಸ್ಟರಿಕಾ ಗಿಡಗಳು ನೇರವಾಗಿ ಎತ್ತರಕ್ಕೆ ಬೆಳೆಯುವ ಗಿಡಗಳಾಗಿದ್ದವು, ಅವುಗಳಿಂದ ವಾಹನಗಳಿಗಾಗಲಿ.ಸಾರ್ವಜನಿಕರಿಗಾಗಲಿ ಯಾರಿಗೂ ತೊಂದರೆ ಇರಲಿಲ್ಲ. ಅತಿ ಅವಶ್ಯಕವಿದ್ದರೆ 12 ಅಡಿ ಎತ್ತರದವರೆಗಿನ ಕೋಸ್ಟರಿಕಾ ಗಿಡಗಳ ಅಡ್ಡ ಬೆಳೆದ ಬ್ರಾಂಚ್ ಗಳನ್ನು ಟ್ರಿಮ್ ಮಾಡಬಹುದಿತ್ತು.
ಆದರೆ ನಿನ್ನೆ ದಿನ 25-07-2023 ರಂದು ಕೊಪ್ಪಸರ್ಕಲ್ ಪಟ್ಟಣಪಂಚಾಯ್ತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿನ ಗಿಡ, ಮರಗಳನ್ನು ಸಂಪೂರ್ಣವಾಗಿ ಮನೆಯ ಉರುವಲಿಗೆ ಕಟ್ಟಿಗೆ ಕಡಿದ ಹಾಗೆ ಕಡಿದಿದ್ದಾರೆ ದುಷ್ಟರು. ಹರಿತ ಆಯುಧಗಳ ಹೊಡೆತ ಬಿದ್ದಿರುವ ಈ ಮರಗಳು ಇನ್ನೂ ಬದುಕಲು ಸಾಧ್ಯವೇ ಇಲ್ಲ. ಮರ ಕಡಿದ ವ್ಯಕ್ತಿಯನ್ನು ವಿಚಾರಿಸಿದರೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಸೂಚನೆ ಕೊಟ್ಟಂತೆ ನಾವು ಮರ ಕಡಿದಿರುವುದಾಗಿ ತಿಳಿಸಿದ್ದಾರಂತೆ. ಇವರು ತಮ್ಮ ಜವಾಬ್ದಾರಿ ರಹಿತ ವರ್ತನೆಯಿಂದ ಸಾರ್ವಜನಿಕ ಆಸ್ತಿಗೆ ಅಪಾರ ನಷ್ಟ ಉಂಟು ಮಾಡಿದ್ದಾರೆ. ಆದ್ದರಿಂದ ಇದ್ದಕ್ಕೆ ಕಾರಣರಾದ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್‌ರವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಮ್ಮನ್ನು ಕೋರುತ್ತೇನೆ.
ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಬಿ ಆರ್ ರಾಘವೇಂದ್ರ ಶೆಟ್ಟಿ. ಅಧ್ಯಕ್ಷರು. ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ. ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಹಾಗೂ ಪರಿಸರ ಪ್ರೇಮಿಗಳು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೋಲಿಸ್ ಠಾಣೆಯಲ್ಲು ದೂರು ದಾಖಲಿಸಿದ್ದಾರೆ.
ಸುಧೀರ್ ವಿಧಾತ, ಶಿವಮೊಗ್ಗ
Voice of common man in words