ಮಾಳೂರು ಪೋಲಿಸರ ಭರ್ಜರಿ ಬೇಟೆ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂದಿಸಿದಂತೆ ಆರೋಪಿಗಳ ಬಂಧನ.!
ಅಶ್ವಸೂರ್ಯ/ಶಿವಮೊಗ್ಗ : ಮಾಳೂರು ಠಾಣಾ ವ್ಯಾಪ್ತಿಯಲ್ಲಿನ ಕಲ್ಕೊಪ್ಪ ಕಾರಕುಚ್ಚಿ ಗ್ರಾಮದ ದೇವಾದಾಸ್ ಅವರ ಮನೆಯಲ್ಲಿ 4 ಕ್ವಿಂಟಾಲ್ ಚಾಲಿ ಅಡಿಕೆ ಕಳ್ಳತನವಾಗಿದ್ದು ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಸದರಿ ಪ್ರಕರಣವನ್ನು ಬೆನ್ನುಹತ್ತಿದ ಮಾಳೂರು ಪೊಲೀಸರ ತಂಡ ಕಳ್ಳರನ್ನು ಭಂದಿಸುವಲ್ಲಿ ಯಶಸ್ವಿಯಾಗಿದ್ದು ಕಳ್ಳರಿಂದ ಅಂದಾಜು 80000₹ ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಬೊಲೆರೋ ಪಿಕಪ್ ವಾಹನ ಅಂದಾಜು ಮೌಲ್ಯ 300000₹ ನ್ನು ವಶಪಡಿಸಿಕೊಂಡಿರುತ್ತಾರೆ ಕಾರ್ಯಾಚರಣೆಯಲ್ಲಿ ಶ್ರೀ ಗಜಾನನ ವಾಮನ ಸುತಾರ. ಡಿವೈಎಸ್ಪಿ ಹಾಗೂ ಶ್ರೀ ಶ್ರೀಧರ್ ಸಿಪಿಐ ಮಾಳೂರು ರವರ ಮಾರ್ಗದರ್ಶನದಲ್ಲಿ ಶ್ರೀ ಕುಮಾರ್ ಕುರಗೊಂದ ಪಿಎಸ್ಐ ಶ್ರೀ ಶಿವಾನಂದ ಧರೇನವರ್ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಹೆಚ್ ಸಿ ಸುರಕ್ಷಿತ, ರಾಜಶೇಖರ್, ಪಿಸಿ ಪ್ರದೀಪ್,ವಿವೇಕ್, ಪುನೀತ್,ಸಂತೋಷ್ ರವರು ಕಾರ್ಯಾಚರಣೆ ನಡೆಸಿ 3 ಜನ ಆರೋಪಿತರನ್ನು ಭಂದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿತರ ವಿವರ
1 ಹನುಮಂತ ತಂದೆ ಯಲ್ಲಪ್ಪ ಹರಗವಳ್ಳಿ ಶಿಕಾರಿಪುರ
2 ಅಭಿಷೇಕ್ ಹರಗವಳ್ಳಿ ಶಿಕಾರಿಪುರ
3 ತುಕಾರಾಜ್ ಹರಗವಳ್ಳಿ ಶಿಕಾರಿಪುರ
ಮಾಳೂರು ಪೋಲಿಸರಿಂದ ಭದ್ರಾವತಿ ಮೂಲದ ಘಂಟೆ ಕಳ್ಳರ ಬಂಧನ.!
ತೀರ್ಥಹಳ್ಳಿ : ಮಾಳೂರು ಠಾಣಾ ವ್ಯಾಪ್ತಿಯಲ್ಲಿನ ಚಿಡುವ ಆಂಜನೇಯ ದೇವಸ್ಥಾನ ಗಾಳಿಮಾರಮ್ಮ ದೇವಸ್ಥಾನ ಹಾಗೂ ತೀರ್ಥಹಳ್ಳಿ ಠಾಣಾ ವ್ಯಾಪ್ತಿಯ ಬಾಳಾಗಾರು ರಾಮೇಶ್ವರ ದೇವಸ್ಥಾನಗಳಲ್ಲಿ ಘಂಟೆ,ಪೂಜಾಸಾಮಾಗ್ರಿಗಳು,ಹಾಗೂ ಬೆಳ್ಳಿಯ ದೀಪಗಳನ್ನು ಕಳ್ಳತನ ಮಾಡಲಾಗಿದ್ದು ಮಾಳೂರು ಠಾಣೆಯಲ್ಲಿ ಹಾಗೂ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಸದರಿ ಪ್ರಕರಣವನ್ನು ಬೆನ್ನುಹತ್ತಿದ ಮಾಳೂರು ಪೊಲೀಸರ ತಂಡ ಕಳ್ಳರನ್ನು ಭಂದಿಸುವಲ್ಲಿ ಯಶಸ್ವಿಯಾಗಿದ್ದು ಕಳ್ಳರಿಂದ ಅಂದಾಜು ಮೌಲ್ಯ 70000₹ ದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಓಮ್ನಿ ವಾಹನ ಅಂದಾಜು ಮೌಲ್ಯ 200000₹ ನ್ನು ವಶಪಡಿಸಿಕೊಂಡಿರುತ್ತಾರೆ ಕಾರ್ಯಾಚರಣೆಯಲ್ಲಿ ಶ್ರೀ ಗಜಾನನ ವಾಮನ ಸುತಾರ. ಡಿವೈಎಸ್ಪಿ ಹಾಗೂ
ಶ್ರೀ ಶ್ರೀಧರ ಸಿಪಿಐ ಮಾಳೂರು ರವರ ಮಾರ್ಗದರ್ಶನದಲ್ಲಿ
ಶ್ರೀ ಕುಮಾರ್ ಕುರಗೊಂದ ಪಿಎಸ್ಐ ಶ್ರೀ ಶಿವಾನಂದ ಧರೇನವರ್ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಹೆಚ್ ಸಿ ಸುರಕ್ಷಿತ,ಪಿಸಿ ಸಂತೋಷ್ ಹೆಚ್ ಸಿ ರಾಜಶೇಖರ್, ಮಂಜುನಾಥ್ ಕೋಣಂದೂರು, ಪಿಸಿ ಪ್ರದೀಪ್,ವಿವೇಕ್, ಪ್ರಸನ್ನ,ಚೇತನ್,ಮಂಜುನಾಥ್, ಹಾಗೂ ಜಿಪ್ ಚಾಲಕ ಅಭಿಲಾಷ್ ರವರು ಕಾರ್ಯಾಚರಣೆ ನಡೆಸಿ 2 ಜನ ಆರೋಪಿತರನ್ನು ಭಂದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿತರ ವಿವರ
1 ಅರುಣ ತಂದೆ ಗೋಪಾಲ 26 ವರ್ಷ ಕೋಲಿಬ್ಲಾಕ್ ಶೆಡ್ ಭದ್ರಾವತಿ
2 ಆಕಾಶ್ ತಂದೆ ಬಾಬು 24 ವರ್ಷ ಬುಳ್ಳಾಪುರ ಭದ್ರಾವತಿ