ಆನೇಕಲ್: ಕಾಂಗ್ರೆಸ್ ಪುರಸಭಾ ಸದಸ್ಯನನ್ನ ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆಗೈದ ಹಂತಕರು..!
ಅಶ್ವಸೂರ್ಯ/ಶಿವಮೊಗ್ಗ: ಕಟ್ಟು ಮಸ್ತಾದ ದೇಹ ಸ್ವಲ್ಪ ಖದರ್ ಇರುವಂತಹ ಆನೇಕಲ್ ಪುರಸಭಾ ಸದಸ್ಯ ರವಿಯನ್ನು ಹೊಂಚುಹಾಕಿ ಅಡ್ಡಗಟ್ಟಿ ಮಾರಕಸ್ತ್ರದಿಂದ ಮನಬಂದಂತೆ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಹಂತಕರು ಎಸ್ಕೇಪ್ ಆಗಿದ್ದಾರೆ. ರವಿಯನ್ನು ಟಾರ್ಗೆಟ್ ಮಾಡಿಕೊಂಡು ಸ್ಕೆಚ್ ರೂಪಿಸಿಕೊಂಡ ಹಂತಕರ ತಂಡದ ಯುವಕರು ಕಳೆದ 15 ದಿನಗಳಿಂದ ಲಾಂಗ್ ಹಿಡಿದು ರವಿಯ ಹತ್ಯೆಮಾಡಲು ಓಡಾಡುತ್ತಿದ್ದರಂತೆ ಎನ್ನುವುದು ತಿಳಿದು ಬಂದಿದೆ.!
ಎರಡು ದಿನಗಳಿಂದ ಲಾಂಗ್ ಮತ್ತು ಹತಾರಗಳನ್ನು ಹಿಡಿದು ಅಡ್ಡಾಡ್ಡಿದ್ದ ಪುಂಡರ ಬಗ್ಗೆ ಒಂದು ನ್ಯೂಸ್ ಚಾನಲ್ನಲ್ಲಿ ವರದಿ ಕೂಡ ಮಾಡಿ ಎಚ್ಚರಿಸಿದ್ದರಂತೆ. ಅದೇ ಯುವಕರಿಂದ ಜುಲೈ 24 ರಂದು ನಡುರಸ್ತೆಯಲ್ಲೆ ಪುರಸಭಾ ಸದಸ್ಯ ರವಿಯನ್ನು ಬರ್ಬರವಾಗಿ ಹತ್ಯೆಮಾಡಿ ಎಸ್ಕೇಪ್ ಆಗಿದ್ದಾರೆ.
ಹತ್ಯೆಯಾದ ಆನೇಕಲ್ ಪುರಸಭೆ ಸದಸ್ಯ ರವಿ
ರವಿ ಹಾಲಿ ಆನೇಕಲ್ ಪುರಸಭೆಯ ಕಾಂಗ್ರೆಸ್ ಸದಸ್ಯರಾಗಿದ್ದ ಇವರನ್ನು ನಡು ರಸ್ತೆಯಲ್ಲಿ ಮನಬಂದಂತೆ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ಆನೇಕಲ್ ಪಟ್ಟಣದ ಬಹದ್ದೂರ್ ಪುರ ಬಳಿ ಬುಧವಾರ ನಡೆದಿದೆ. ಆನೇಕಲ್ ಪುರಸಭಾ ಸದಸ್ಯರಾಗಿದ್ದ ರವಿ ಸಾಕಷ್ಟು ಹೆಸರು ಜನಮನ್ನಣೆ ಗಳಿಸಿದಂತಹ ವ್ಯಕ್ತಿಯಾಗಿದ್ದರು ರವಿ.
ಈ ಹತ್ಯೆನೆಡದ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೇಕಲ್ ಆಸ್ಪತ್ರೆಗೆ ರವಿ ಅವರ ಶವವನ್ನು ಸಾಗಿಸಲಾಗಿತ್ತು. ಶವಾಗಾರಕ್ಕೆ ಬೆಂಗಳೂರು ಗ್ರಾಮಾಂತರ ಅಡೀಷನಲ್ ಎಸ್.ಪಿ ಎ.ಎಸ್.ಪಿ.ನಾಗೇಶ್ ಭೇಟಿ ನೀಡಿ ರವಿ ಅವರ ಸ್ನೇಹಿತರು ಮತ್ತು ಸಂಭಂಧಿಗಳಿಂದ ಕೆಲವೊಂದು ಮಾಹಿತಿ ಕಲೆಹಾಕಿದ್ದಾರೆ. ಜೊತೆಗೆ ಆನೇಕಲ್ ಪೋಲಿಸರ ಜೊತೆಗೆ ಚರ್ಚಿಸಿ ಹಂತಕರನ್ನು ಹೆಡೆಮುರಿಕಟ್ಟಲು ಪೋಲಿಸರ ತಂಡವನ್ನು ರಚಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್.ಪಿ.ಸಿ.ಕೆ ಬಾಬಾ ಅವರು, ರಾತ್ರಿ 8.30 ಸುಮಾರಿಗೆ ರವಿ ಎನ್ನುವ ವ್ಯಕ್ತಿ ಮನೆಯಿಂದ ಹೊರ ಬಂದಿದ್ದಾರೆ. ಹೊರ ಬಂದ ಕೇಲವೆ ಕ್ಷಣದಲ್ಲಿ ಮೂವರು ಹಂತಕರು ಏಕಾಏಕಿ ಅಟ್ಯಾಕ್ ಮಾಡಿದ್ದಾರೆ.ಹಂತಕರ ಲಾಂಗಿನೇಟಿಗೆ ರಕ್ತದ ಮಡುವಿನಲ್ಲಿ ಮುದುರಿಬಿದ್ದಿದ್ದ ರವಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು.
ಅಷ್ಟೋತ್ತಿಗಾಗಲೆ ಆತನ ಜೀವ ಹೊರಟಿ ಹೋಗಿತ್ತು ಆರೋಪಿಗಳು ಯಾರು ಎಂದು ಗೊತ್ತಾಗಿದೆ. ಎರಡು ಪೋಲಿಸರ ತಂಡಗಳನ್ನು ರಚನೆ ಮಾಡಿದ್ದೇವೆ. ಸ್ವಲ್ಪ ದಿನದ ಹಿಂದೆ ಕಾರಿನ ಗ್ಲಾಸ್ ಹಾಗೂ ಮನೆಗೆ ಕಲ್ಲು ಹೊಡೆದಿದ್ರು. ಆ ಗ್ಯಾಂಗ್ ರವಿ ಜೊತೆಗೆ ಕೂಡ ಇದ್ರು..ಹೀಗಾಗಿ ರವಿಯನ್ನು ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಇನ್ನು ಮುಂದೆ ಇಂತಹ ಸಮಾಜಘಾತುಕರ ವಿರುದ್ಧ ಕ್ರಮ ವಹಿಸುತ್ತೇವೆ ಎಂದು ಹೇಳಿದ್ದಾರೆ.