
ಆಗಸ್ಟ್ 11ರಂದು ನಡೆಯಲಿರುವ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಚುನಾವಣೆಗೆ ಪ್ರಬಲ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಂಡೆ ವೆಂಕಟೇಶ್

ಅಶ್ವಸೂರ್ಯ/ಶಿವಮೊಗ್ಗ: ಆಗಸ್ಟ್ 11ರಂದು ನೆಡೆಯುವ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಚುನಾವಣೆಗೆ ತೀರ್ಥಹಳ್ಳಿ ತಾಲ್ಲೂಕಿನ ಒಕ್ಕಲಿಗ ಸಮುದಾಯದ ಜನಪ್ರಿಯ ನಾಯಕ ಹಾಲಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘದ ಹಾಲಿ ನಿರ್ದೇಶಕರು ಹಾಗೂ ರಾಜ್ಯ ಗ್ರಾಮ ಪಂಚಾಯತಿ ಒಕ್ಕೂಟದ ಉಪಾಧ್ಯಕ್ಷರಾಗಿರುವ ಬಂಡೆ ವೆಂಕಟೇಶ್ ಅವರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನದ ಆಕಾಂಕ್ಷಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ಈ. ಮೂಲಕ ಬರಲಿರು ಆಗಸ್ಟ್ 11ರಂದು ನೆಡೆಯಲಿರುವ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಇವರ ಹಿತೈಷಿಗಳು, ಸ್ನೇಹಿತರು,ಬಂಧು ಬಳಗದವರು ಮತ್ತು ಒಕ್ಕಲಿಗ ಸಮುದಾಯದ ಮತದಾರರು ಇವರಿಗೆ ಮತ ಚಲಾಯಿಸುವುದರ ಮೂಲಕ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿ ಕೊಡುವುದರ ಮುಖಾಂತರ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿದ್ದಾರೆ
- ಬಂಡೆ ವೆಂಕಟೇಶ
- ಗ್ರಾಮ ಪಂಚಾಯತಿ ಅಧ್ಯಕ್ಷರು
- ಮೇಲಿನ ಕುರುವಳ್ಳಿ
ತೀರ್ಥಹಳ್ಳಿ



