ಡಿವಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನ ಮರು ಮೌಲ್ಯಮಾಪನದಲ್ಲಿ ಎರಡು ಅಂಕಗಳಿಸಿ ಆರನೇ ರ‍್ಯಾಂಕ್ ನಿಂದ ನಾಲ್ಕನೇ ರ‍್ಯಾಂಕ್ ಪಡೆದ ಸಿಂಚನ
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ: ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಶಿವಮೊಗ್ಗ ನಗರದ ಡಿವಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನ ಹೆಚ್ ಎಂ 600ಕ್ಕೆ 593 ಅಂಕಗಳಿಸಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ.
ಸಿಂಚನ ಎಚ್ ಎಂ ಇವರು ಶಿವಮೊಗ್ಗದ ಶಿಕ್ಷಕಿ ವಾಣಿ ಆರ್ ಜೇ ಹಾಗೂ ದಿ|| ಹಾಲೇಶ್ ಎನ್ ದಂಪತಿ ಪುತ್ರಿಯಾಗಿದ್ದಾರೆ, ಇವರು
ಎಸ್ಎಸ್ಎಲ್ಸಿ ಪರೀರಿಕ್ಷೆಯಲ್ಲೂ ಶೇ. 92.3 ಅಂಕ ಪಡೆದು ಕಲಾ ವಿಭಾಗವನ್ನು ಆಯ್ದುಕೊಂಡಿದ್ದರು. ಸಾಧಿಸುವ ಛಲ ಹೊಂದಿರುವ ಸಿಂಚನ ಮುಂದೆ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.ಇವರು ಸಾಧಿಸುವ ಗುರಿ ಇಟ್ಟುಕೊಂಡು ನಿಷ್ಠೆಯಿಂದ ಓದಿನ ಕಡೆ ಗಮನ ಹರಿಸಿದ ಕಾರಣಕ್ಕೆ
ನಾಲ್ಕನೇ ರ‍್ಯಾಂಕ್ ನೊಂದಿಗೆ ಹೊರಹೊಮ್ಮಿದ್ದಾರೆ.
ಮೊದಲು ಆರನೇ ರ‍್ಯಾಂಕ್
ಪಡೆದಿದ್ದ ಇವರು ಮನಸ್ಸು ಒಪ್ಪದ ಕಾರಣಕ್ಕೆ ಮತ್ತೆ ಮರು ಮೌಲ್ಯಮಾಪನಕ್ಕೆ ಹಾಕಿ ಮತ್ತೆರಡು ಅಂಕ ಗಳಿಸಿ
ಮೊದಲಿಗೆ 600 ಕ್ಕೆ 591 ಅಂಕ ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 6 ನೇ ರ‍್ಯಾಂಕ್ ಪಡೆದಿದ್ದಳು ಅನಂತರ ಇತಿಹಾಸ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೇ ಹಾಕಿ ಇನ್ನೆರಡು ಅಂಕ ಹೆಚ್ಚಿಗೆ ಪಡೆದು ಒಟ್ಟು 593 ಅಂಕದೊಂದಿಗೆ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಆಗಿ ಹೊರಹೊಮ್ಮಿದ್ದಾರೆ
ಇದು ನಮ್ಮ ಶಿವಮೊಗ್ಗದ ಹೆಮ್ಮೆಯಾಗಿದೆ. ಶುಭವಾಗಲಿ ಸಿಂಚನ ನಿನ್ನ ಮುಂದಿನ ವಿಧ್ಯಾರ್ಥಿ ಜೀವನ ಇನ್ನಷ್ಟು ಉಜ್ವಲವಾಗಿಲಿ…. All the best