ಹಾಸನದ ಯುವ ರಾಜಕಾರಣಿಯ ಲೈಂಗಿಕ ಹಗರಣ : ಸರ್ಕಾರ ತನಿಖೆಗೆ ಮುಂದಾಗಬೇಕಿದೆ : ಮಾಜಿ ಸಂಸದ ಆಯನೂರು ಮಂಜುನಾಥ್
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ: ಹಾಸನ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಪ್ರತಿಷ್ಠಿತ ರಾಜಕೀಯ ಕುಟುಂಬವೊಂದರ ಯುವ ರಾಜಕಾರಣಿಯೊಬ್ಬ ನೂರಾರು ಬಡ ಮಹಿಳೆಯರನ್ನು ಒತ್ತಾಯವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ ಎಂಬ ಸುದ್ಧಿಗಳು ಹರಿದಾಡುತ್ತಿವೆ. ಇದು ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಹದ್ದು. ಈ ಬಗ್ಗೆ ಸಂಬಂದಪಟ್ಟ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮುಂದಾಗಬೇಕಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಒತ್ತಾಯಿಸಿದ್ದಾರೆ. ಶಿವಮೊಗ್ಗ
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಈಗ ರಾಜ್ಯವ್ಯಾಪ್ತಿ ಹಾಸನ ರಾಜಕಾರಣಿಯ ಲೈಂಗಿಕ ಹಗರಣದ ಬಗ್ಗೆಯೇ ದೊಡ್ಡ ಚರ್ಚೆಯಾಗುತ್ತಿದೆ. ಆತನ ಬಲೆಗೆ ಬಿದ್ದವರಲ್ಲಿ ಬಡವರು ನಿರುದ್ಯೋಗಿ ಯುವತಿಯರು.ವರ್ಗಾವಣೆ ಬಯಸಿ ಹೊದಂತಹ ಅಧಿಕಾರಿ ಮತ್ತು ಕೆಲವು ನೌಕರಿಯಲ್ಲಿರುವ ಹೆಣ್ಣುಮಕ್ಕಳು ಸಾಲದ್ದಕ್ಕೆ ಮನೆಗೆ ಮುಸುರೆ ತಿಕ್ಕಲು ಬಂದಂತಹ ಹೆಂಗಸರನ್ನು ಬಲವಂತವಾಗಿ ತನ್ನ ಕಾಮತೃಷೆಗೆ ಒತ್ತಾಯವಾಗಿ ಬಳಸಿಕೊಂಡಿದ್ದಾನೆ ಎಂದರೆ ನಂಬಲು ಅಸಾಧ್ಯವೆ ಆದರು ಹೌದು.!? ಅಷ್ಟೇ ಅಲ್ಲ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಕೂಡ ತನ್ನ ತೆವಲಿಗೆ ಬಳಸಿಕೊಳ್ಳಲಾಗಿದೆಯಂತೆ.? ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳು ಅಸಹಾಯಕರಾಗಿರುವುದರಿಂದ ದೂರು ನೀಡಲು ಕೂಡ ಅವರು ಭಯ ಪಡುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅನ್ಯಾಯವಾದ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಬೇಕಿದೆ ಎಂದು ಆಗ್ರಹಿಸಿದರು.
ಭಾರತ ಮಾತೆಯ ರಕ್ಷಕರು ಎಂದು ಹೇಳಿಕೊಳ್ಳುವ ಬಿಜೆಪಿಯವರು ಈ ವಿಚಾರದಲ್ಲಿ ತುಟಿ ಬಿಚ್ಚುತ್ತಿಲ್ಲ ಏಕೆ.? ರಾಜಕೀಯ ಲಾಭಕ್ಕಾಗಿ ಅನ್ಯಾಯಕೊಳಕ್ಕಾಗದ ಮಹಿಳೆಯರ ಪರ ಮಾತನಾಡದಿರುವುದು ಸರಿಯೇ ಎಂದು ಪ್ರಶ್ನಿಸಿದ ಆಯನೂರು ಮಂಜುನಾಥ್, ಶಿವಮೊಗ್ಗದಲ್ಲೂ ಹಿಂದೂ ಹುಲಿ ಅನ್ನಿಸಿಕೊಂಡ ಈಶ್ವರಪ್ಪ ಕೂಡ ಇದ್ದಾರೆ ಅವರು ಕೂಡ ಹಾಸನದಲ್ಲಿ ನೂರಾರು ಹಿಂದೂ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಸುಮ್ಮನಿದ್ದಾರೆ ಎಂದು ಹೇಳಿದರು.
ಲೈಂಗಿಕ ಹಗರಣದಲ್ಲಿ ಒಂದಷ್ಡು ಒಪ್ಪಿತರು ಇನ್ನೊಂದಷ್ಟು ಬಲವಂತಕ್ಕೆ ಬೆತ್ತಲಾದವರು ಇರಬಹುದು. ಆದರೆ ಇದನ್ನು ಅ ವಿಕೃತಕಾಮಿ ತನ್ನ ಮೊಬೈಲ್ ನಲ್ಲಿ ದೃಶ್ಯಗಳನ್ನು ವಿಡಿಯೊ ಚಿತ್ರೀಕರಿಸಿ ಇಟ್ಟುಕೊಳ್ಳಬಹುದೇ. ಇದರಿಂದ ಆಯಾ ಹೆಣ್ಣುಮಕ್ಕಳ ಕುಟುಂಬಗಳು ಸಾಮಾಜಿಕವಾಗಿ ಅಪಮಾನ ಅನುಭವಿಸಬೇಕಿದೆ. ಏನಾದರೂ ಅನಾಹುತಗಳು ಘಟಿಸಿದರೆ ಯಾರು ಜವಾಬ್ದಾರಿ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಒಟ್ಟಿನಲ್ಲಿ ದಿನೆ ದಿನೆ ಯುವ ರಾಜಕಾರಣಿಯ ಹಾಸನದ ಹಾದರದ ಪಲ್ಲಂಗದ ದೃಶ್ಯಾವಳಿಗಳು ಒಂದೊಂದಾಗಿ ಹೊರಬರುತ್ತಿರುವುದನ್ನು ನೋಡಿದರೆ ಆತನಿಗೆ ಜೈಲೂಟ ಗ್ಯಾರಂಟಿ ಎನ್ನುವುದು ನಿಕ್ಕಿಯಾಗುತ್ತಿದೆ…
ರಾಜ್ಯದಲ್ಲಿ ಕಾರ್ಮಿಕರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬಾರದು: ಮಾಜಿ ಸಂಸದ ಅಯನೂರು ಮಂಜುನಾಥ್
ರಾಜ್ಯದಲ್ಲಿ ಕಾರ್ಮಿಕರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬಾರದು ಏಕೆಂದರೆ ಬಸವರಾಜ್‌ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಯಾವುದೋ ಒತ್ತಡಕ್ಕೆ ಮಣಿದು ಕಾರ್ಮಿಕರ ದುಡಿಯುವ ಸಮಯ 8 ಗಂಟೆ ಸಮಯ ಇದ್ದದ್ದನ್ನು 12 ಗಂಟೆಗೆ ಹೆಚ್ಚಿಸಿದ್ದರು. ಅಂದು ಕಾರ್ಮಿಕರ ಅಳಲು ಮುಗಿಲು ಮುಟ್ಟಿತ್ತು.ಅಂದು ಜಾರಿಗೆ ತಂದದ್ದು ಕಾರ್ಮಿಕ ವಿರೋಧಿ ನೀತಿಯಾಗಿತ್ತು. ಹಾಗೆಯೇ ಶಿವಮೊಗ್ಗ ನಗರದಲ್ಲಿ ಶಾಹಿ ಗಾರ್ಮೆಂಟ್ಸ್‌ಗೆ 24 ಎಕರೆ ಜಮೀನನ್ನು ಕೊಟ್ಟಿದ್ದಾರೆ. ಅಲ್ಲಿ ಕೆಲವರು ಸ್ಲೀಪಿಂಗ್ ಪಾರ್ಟ್ನರ್ಸ್ ಆಗಿದ್ದಾರೆ ಎಂಬ ದೂರುಗಳು ಕೇಳಿಬಂದಿದೆ. ಜೊತೆಗೆ 6 ಸಾವಿರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಅಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲ. ಮಹಿಳೆಯರಿಗೆ ಕೆಲಸಕ್ಕೆ ತಕ್ಕಂತೆ ವೇತನವು ಇಲ್ಲದಂತಾಗಿದೆ. ಅಲ್ಲೂ ಕೂಡ ನಿತ್ಯ ಕಾರ್ಮಿಕರ ಶೋಷಣೆ ನಡೆಯುತ್ತಿದೆ ಎಂದರು.
ಶಿವಮೊಗ್ಗದಲ್ಲಿ ಕ್ರಷರ್ ನೆಡೆಯುತ್ತಿಲ್ಲ ಆದರೆ ಇಲ್ಲಿನ ಹೆದ್ದಾರಿ ಕಾಮಗಾರಿಗೆ ಲೋಡ್‌ಗಟ್ಟಲೆ ಹೊಸದುರ್ಗದಿಂದ ಜಲ್ಲಿ ಕಲ್ಲುಗಳು ಲೋಡುಗಟ್ಟಲೆ ಬರುತ್ತಿದೆ.ಹಾಗದರೆ ಹೊಸದುರ್ಗದ ಕ್ರಷರ್ ಮಾಲಿಕ ಯಾರು? ಎಂದು ಅಯನೂರು ಮಂಜುನಾಥ್ ಪ್ರಶ್ನೆ ಮಾಡಿದರು. ಭರ್ಜರಿ ಅದಾಯದ ಎಲ್ಲಾ ದಂಧೆಯಲ್ಲೂ ಅವರದೆ ಪಾರುಪತ್ಯ ಎದ್ದು ಕಾಣುತಿದೆ ಆಸ್ಪತ್ರೆಗಳು, ಟ್ರ್ಯಾಕ್ಟರ್, ಬೈಕ್,ಇನ್ನತರ ಶೋರೂಂಗಳು ಅವರದೆ ಆಗಿದೆ, ಶಿಕ್ಷಣ ಸಂಸ್ಥೆಗಳು ಅವರದೆ, ಅವರ ಕುಟುಂಬವನ್ನೆ ರಾಜಕಾರಣಕ್ಕೆ ತರುವ ನಿಟ್ಟಿನಲಿ ಬಿಜೆಪಿಯ ಎಲ್ಲಾ ಹಿರಿಯ ನಾಯಕರನ್ನು ಮುಗಿಸಿಬಿಡುವ ಒಳಸಂಚು ನಡೆಯುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಪಿ.ಶೇಷಾದ್ರಿ ಪ್ರಮುಖರಾದ ಹಿರಣ್ಣಯ್ಯ, ಧೀರರಾಜ್ ಹೊನ್ನಾವಿಲೆ, ಶಿ.ಜು.ಪಾಶ, ಪದ್ಮನಾಭ್, ಆಯನೂರು ಸಂತೋಷ್, ಜಗದೀಶ್, ಶಶಿ ಮುಂತಾದವರು ಇದ್ದರು.