ಮೇ 2ರಂದು ಶಿವಮೊಗ್ಗ ನಗರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಮತಯಾಚನೆ
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಮಲೆನಾಡ ತವರು ನಗರಿ ಶಿವಮೊಗ್ಗ ನಗರಕ್ಕೆ ಆಗಮಿಸಲಿದ್ದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‌ಕುಮಾರ್ ಪರ ಬಹಿರಂಗ ಪ್ರಚಾರ ದೊಂದಿಗೆ ಮತಯಾಚನೆ ಮಾಡಲಿದ್ದಾರೆ ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದರು.
ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡುತ್ತಸ ಸಂಪೂರ್ಣ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದೆ ನೆಡೆದಂತಹ ಚುನಾವಣೆಯಲ್ಲಿ ಸಿಗದಂತಹ ಜನರ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಶಿವಮೊಗ್ಗ ನಗರದಲ್ಲೂ ಒಳ್ಳೆಯ ವಾತಾವರಣ ಕಂಡುಬರುತ್ತಿದ್ದು ಜನರ ಈ ಬೆಂಬಲ ಪ್ರೀತಿಗೆ ನಾನು ತುಂಬ ಸಂತೋಷ ಜೋತೆಗೆ ಪ್ರತಿಯೊಬ್ಬರಿಗೂ ಋಣಿಯಾಗಿದ್ದೇನೆ. ಚುನಾವಣೆಯ ಮೊದಲು ಈ ರೀತಿಯ ಬದಲಾವಣೆಯನ್ನು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಎಲ್ಲಾ ವರ್ಗದ ಜನ ಅಭಿನಂದಿಸುತ್ತಿದ್ದಾರೆ. ಮತ ಕೇಳಲು ಮನೆಗೆ ಹೋದರಿಗೆ ಮನೆ ಒಳಗೆ ಕರೆದು ಉಪಚಾರ ಮಾಡುತ್ತಿದ್ದಾರೆ. ಪ್ರತಿ ಗ್ರಾಮ, ಪಟ್ಟಣ ಮತ್ತು ನಗರದ ಜನರ ಪ್ರೀತಿಗೆ ಹೃದಯ ತುಂಬಿ ಬರುತ್ತಿದೆ ಎಂದರು.
ಈಗಾಗಲೇ ಗ್ಯಾರಂಟಿ ಕಾರ್ಡ್‌ಗಳ ವಿತರಣೆ ಕಾರ್ಯ ಮುಗಿದಿದ್ದು. 3ನೇ ಹಂತದ ಪ್ರಚಾರಕ್ಕೆ ಮುಂದಾಗಿದ್ದೇವೆ.
ಬಿಜೆಪಿಯವರ ಪ್ರಚಾರಕ್ಕೆ ಹೋಲಿಸಿದರೆ ನಮ್ಮ ಪ್ರಚಾರದ ಅಬ್ಬರ ಜೋರಾಗಿದೆ. ನಮ್ಮ ಅಭ್ಯರ್ಥಿಯಾದ ಗೀತಾ ಶಿವರಾಜಕುಮಾರ್ ಅವರಿಗೆ ಇನ್ನಷ್ಟು ಬಲ ತುಂಬಲು ಇದೆ. ಮೇ 2 ನೇ ತಾರೀಖಿನಂದು ಮಧ್ಯಾಹ್ನ 12 ರಿಂದ 1.30 ರವರೆಗೆ ರಾಹುಲ್ ಗಾಂಧಿಯವರು ಚುನಾವಣೆಯ ಪ್ರಚಾರಕ್ಕೆ ಬರಲು ಸಮಯ ನೀಡಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಆಗಮಿಸಲಿದ್ದಾರೆ ಎಂದರು. ಅಂದು ಲಕ್ಷಾಂತರ ಮತದಾರ ಸಮ್ಮುಖದಲ್ಲಿ ಗೀತಾ ಶಿವರಾಜಕುಮಾರ್ ಪರವಾಗಿ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕ ರಾಹುಲ್ ಗಾಂಧಿ ಮತ್ತು ನಮ್ಮ ಹೆಮ್ಮೆಯ ಕರ್ನಾಟಕ ಸರ್ಕಾರದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಮತ್ತು ಜನಪ್ರಿಯ ಉಪ ಮುಖ್ಯಮಂತ್ರಿ ಡಿ.ಕೆ ಶಿವರಾಜಕುಮಾರ್ ಮತಯಾಚನೆ ಮಾಡಲಿದ್ದಾರೆ.
ಈ ಚುನಾವಣೆಯ ಪ್ರಚಾರದ ಬಹಿರಂಗ ಸಭೆಯಲ್ಲಿ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ ಮತ್ತು ಶಿವಮೊಗ್ಗ ನಗರ ನಾಲ್ಕು ತಾಲ್ಲೂಕುಗಳ ಮತದಾರರು ಆಗಮಿಸಲಿದ್ದಾರೆ. ಕರ್ನಾಟಕ ಫಿಲಂ ಛೇಂಬರ್‌ನವರು ಕೂಡ ಗೀತಕ್ಕನಾ ಪರವಾಗಿ ನಿಂತಿದ್ದಾರೆ.
ಕ್ಷೇತ್ರದ 8 ತಾಲ್ಲೂಕುಗಳಲ್ಲಿ ಗೀತಾ ಶಿವರಾಜಕುಮಾರ್ ಪರ ಭರ್ಜರಿ ಪ್ರಚಾರ ನೆಡೆಯುತ್ತಿದೆ ಇನ್ನೂ 28ನೇ ತಾರೀಖಿನಿಂದ ರೋಡ್ ಶೋ ಮೂಲಕ ಗೀತಕ್ಕನ ಪರ ವ್ಯಾಪಕ ಪ್ರಚಾರ ನೆಡೆಯಲಿದೆ.ಈ ರೋಡ್ ಶೋನಲ್ಲಿ ಕನ್ನಡ ಚಿತ್ರರಂಗದ ನಟ ನಟಿಯರು ಭಾಗವಹಿಸಿಲಿದ್ದಾರೆ ಅವರಿಗೆ ನಾವು ಒತ್ತಾಯಿಸಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ಗೀತಾ ಶಿವರಾಜಕುಮಾರ್ ಅವರಿಗೆ ಬೆಂಬಲಿಸಿ ಬರುತ್ತಿದ್ದಾರೆ, ನಟ ದುನಿಯಾ ವಿಜಿ, ಡಾಲಿ ಧಜಂಜಯ್, ಸತ್ಯ, ಚಿಕ್ಕಣ್ಣ, ವಿಜಯರಾಘವೇಂದ್ರ, ನೆನಪಿರಲಿ ಪ್ರೇಮ್, ನಿಸ್ವಿಕಾನಾಯ್ಡು, ಚಂದನಶೆಟ್ಟಿ, ಅನುಶ್ರೀ, ಅಕುಲ್‌ಬಾಲಾಜಿ ಸೇರಿದಂತೆ ಅನೇಕರು ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪನವರು ಹೇಳಿದ್ದಾರೆ.