ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಉಗ್ರರು ಅಂದರ್, ಮೊಬೈಲ್ ರಿಪೇರಿ ಮಾಡಿಸಲುಹೋಗಿ ಎನ್ಐಎ ಖೆಡ್ಡಕ್ಕೆ ಬಿದ್ದ ಶಂಕಿತರು.!

ದಿಘಾ ಪಟ್ಟಣದಲ್ಲಿ ಎನ್‌ಐಎ ಶಂಕಿತ ಉಗ್ರ ರಾದ ಮುಸಾವಿರ್‌ ಮತ್ತು ತಾಹಾನನ್ನು ಶುಕ್ರವಾರ ಬಂಧಿಸಿದ್ದಾರೆ. ಕಳೆದ ಮಾರ್ಚ್ 25ರಂದು ಅವರಿಬ್ಬರು, “ನಾವು ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಸಿಗರು ಎಂದು ಹೇಳಿ ನ್ಯೂ ದಿಘಾದ ಗೆಸ್ಟ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದರಂತೆ.!
ಬಾಂಬ್ ಬ್ಲಾಸ್ಟ್ ನ ಪ್ರಮುಖ ರೂವಾರಿಯಾದ ತಾಹಾನು ವಿಘ್ನೇಶ್‌ ಬಿ.ಡಿ., ಅನ್ಮೋಲ್‌ ಕುಲಕರ್ಣಿ ಹೆಸರಿನಲ್ಲಿ ಮತ್ತು ಇನ್ನೊಬ್ಬ ಶಂಕಿತ ಉಗ್ರ ಶಾಜೀಬ್‌ ಮಹಾರಾಷ್ಟ್ರದ ಪಾಲ್ಗಾರ್‌ನ ಯುಶಾ ಶಹನ್‌ವಾಜ್‌ ಪಟೇಲ್‌ ಹೆಸರಿನಲ್ಲಿ ಕೋಲ್ಕೊತಾದ ವಿವಿಧ ಲಾಡ್ಜ್ ಗಳಲ್ಲಿ ವಾಸ್ತವ್ಯ ಹೂಡಿದ್ದರಂತೆ. ಇನ್ನು ಕೆಲವು ಕಡೆ ಅವರು ಝಾರ್ಖಂಡ್‌ ಮತ್ತು ತ್ರಿಪುರಾದ ಸಂಜಯ್‌ ಅಗರ್ವಾಲ್‌ ಮತ್ತು ಉದಯ್‌ ದಾಸ್‌ ಹೆಸರಿನಲ್ಲಿ ತಂಗಿದ್ದರು ಎಂದು ಎನ್ಐಎ ತಂಡಕ್ಕೆ ಮಾಹಿತಿ ಲಭ್ಯವಾಗಿದೆ.

ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಉಗ್ರರು ಅಂದರ್, ಮೊಬೈಲ್ ರಿಪೇರಿ ಮಾಡಿಸಲುಹೋಗಿ ಎನ್ಐಎ ಖೆಡ್ಡಕ್ಕೆ ಬಿದ್ದ ಶಂಕಿತರು.!

ASHWASURYA/SHIVAMOGGA

✍️ ಸುಧೀರ್ ವಿಧಾತ

ಅಶ್ವಸೂರ್ಯ/ಬೆಂಗಳೂರು; ಬೆಂಗಳೂರು ರಾಮೇಶ್ವರಂ ಕೆಫೆ
ಸ್ಫೋಟದ ಶಂಕಿತರ ಬಳಿ ಇದ್ದ ಮೊಬೈಲ್ ಫೋನ್ ರಿಪೇರಿ ಮಾಡಿಸಲು ಹೋಗಿ ಮುಸ್ಸಾವಿರ್ ಹುಸೇನ್ ಶಾಜೆಬ್ ಹಾಗೂ ಅಬ್ದುಲ್ ಮಥೀನ್ ತಾಹಾ ಇಬ್ಬರು ಪಶ್ಚಿಮ ಬಂಗಾಳದಲ್ಲಿ ಎನ್‍ಐಎ ಖೆಡ್ಡಾಕ್ಕೆ ಸಿಕ್ಕಿಬಿದ್ದಿದ್ದಾರೆ. ತಮ್ಮ ಫ್ಲಾನ್ ನಂತೆ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ನೀಚರು ನಂತರ ಯಾರಿಗೂ ಸಣ್ಣ ಸುಳಿವು ಸಿಗದಹಾಗೆ ಕೋಲ್ಕತ್ತಾಗೆ ತೆರಳಿ ಖಾಸಗೀ ಹೋಟೆಲ್ ಒಂದರಲ್ಲಿ ಪ್ರವಾಸಿಗರಂತೆ ತಂಗಿದ್ದರು. ಹಾಳಾದ ಮೊಬೈಲ್ ಫೋನ್ ಅನ್ನು ಶಂಕಿತ ಉಗ್ರರು ಅಲ್ಲೇ ರಿಪೇರಿ ಮಾಡಿಸಲು ಹೋಗಿ ಎನ್ಐಎ ತನಿಖಾ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕೋಲ್ಕತ್ತಾದ ಹೋಟೆಲ್‍ನಲ್ಲಿ ತಲೆಮರೆಸಿಕೊಂಡಿದ್ದ ಉಗ್ರರ ಬಳಿ ಇದ್ದ ಒಬ್ಬನ ಮೊಬೈಲ್ ಕೆಟ್ಟು ಹೋಗಿತ್ತು. ಹೀಗಾಗಿ ಆತ ಸಿಮ್ ತೆಗೆದುಕೊಂಡು ಖಾಲಿ ಮೊಬೈಲ್ ಅನ್ನು ರಿಪೇರಿ ಮಾಡಿಸಲು ಸಮೀಪದ ಮೊಬೈಲ್ ರಿಪೇರಿ ಅಂಗಡಿ ತೆರಳಿ ಮೊಬೈಲ್ ರಿಪೇರಿಗೆ ನೀಡಿದ್ದ.


ಮೊಬೈಲ್ ರಿಪೇರಿ ಆದ ನಂತರ ಅಂಗಡಿಯಾತನ ಬಳಿ ಇದ್ದ ಬೇರೆ ಸಿಮ್ ಹಾಕಿ ಪರೀಕ್ಷಿಸಿದ್ದ ಮಾತ್ರವಲ್ಲ ಅದೇ ನಂಬರಿನಿಂದ ಯಾರಿಗೋ ಫೋನ್ ಮಾಡಿದ್ದ ಆ ಸಂದರ್ಭದಲ್ಲಿ ಮೊಬೈಲ್ ಲೊಕೇಷನ್ ಮಾಹಿತಿ ಎನ್‍ಐಎ ಪೊಲೀಸರಿಗೆ ರವಾನೆಯಾಗಿದೆ. ನಂತರ ಎನ್‍ಐಎ ಅಧಿಕಾರಿಗಳು ಅಂಗಡಿ ಬಳಿ ಹೋಗಿ ಮೊಬೈಲ್ ರಿಪೇರಿಗೆ ಬಂದಿದ್ದವರ ಮಾಹಿತಿಯನ್ನು ಕಲೆಹಾಕಿದ್ದರು. ಖಚಿತ ಸುಳಿವಿನ ಆಧಾರದ ಮೇಲೆ ಹೋಟೆಲ್ ಮೇಲೆ ದಾಳಿ ಮಾಡಿ ತಲೆಮರೆಸಿಕೊಂಡಿದ್ದ ಉಗ್ರರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಪರಾರಿಯಾಗಿದ್ದ ಇಬ್ಬರು ಶಂಕಿತ ಉಗ್ರರು ಮೊದಲು ಕೋಲ್ಕತ್ತಾದ ಹೋಟೆಲ್ ಒಂದರಲ್ಲಿ ರೂಮ್ ಪಡೆಯುವಾಗ ರಿಜಿಸ್ಟರ್ ನಲ್ಲಿ ತಮ್ಮ ಹೆಸರು ಬರೆದಿದ್ದರು ಆಗ ಎರಡನೆ ಆರೋಪಿ ಮೊದಲು ತನ್ನ ವಿಶೇಷ ಹೆಸರು ಬರೆದು ನಂತರ ಅದನ್ನು ಹೊಡೆದುಹಾಕಿ ತನ್ನ ನಿಜವಾದ ಹೆಸರನ್ನು ಬರೆದಿರುವುದು ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ನಾವು ಪ್ರವಾಸಿಗರು ಡಾರ್ಜಿಲಿಂಗ್‍ನಿಂದ ಬರುತ್ತಿರುವುದಾಗಿ ಹೋಟೆಲ್ ನವರಿಗೆ ತಿಳಿಸಿ, ಇಲ್ಲಿಂದ ಚೆನ್ನೈಗೆ ಹೋಗುತ್ತಿರುವುದಾಗಿ ಹೇಳಿದ್ದರಂತೆ. ಆದರೆ ನಂತರ ಇಬ್ಬರು ಯಾವ ಸುಳಿವು ನೀಡದೆ ಆ ಹೋಟೆಲ್‍ನಿಂದ ಹೊರಟು ಹೋಗಿದ್ದರು. ಜೊತೆಗೆ ನಕಲಿ ಆಧಾರ್ ಕಾರ್ಡ್ ಬಳಸಿ ರೂಮ್ ಪಡೆದಿದಿರುವುದು ಬೆಳಕಿಗೆ ಬಂದಿದೆ.
ಎನ್‍ಐಎ ಬಲೆಗೆ ಬಿದ್ದಿರುವ ಉಗ್ರರಾದ ಮುಸ್ಸಾವಿರ್ ಹುಸೇನ್ ಶಾಜೆಬ್ ಹಾಗೂ ಅಬ್ದುಲ್ ಮಥೀನ್ ತಾಹಾ ಅವರು ಕಳೆದ 28 ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಪ್ರವಾಸಿಗರಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಈ ವೇಳೆ ಇಬ್ಬರು ಉಗ್ರರು ಕೋಲ್ಕತ್ತಾದ ನಗರ ವ್ಯಾಪ್ತಿಯಲ್ಲಿರುವ ಮೂರು ಹೋಟೆಲ್ ಗಳಲ್ಲಿ ತಂಗಿದ್ದ ಬಗ್ಗೆ ಹಾಗೂ ಹೋಟೆಲ್ ವೊಂದರಲ್ಲಿ ಉಗ್ರರು ರಿಜಿಸ್ಟರ್ ನಲ್ಲಿ ತಮ್ಮ ಹೆಸರು ಬರೆಯುತ್ತಿರುವ ಸಿಸಿಟಿವಿ ದೃಶ್ಯಾವಳಿ ಕೂಡ ಪೊಲೀಸರಿಗೆ ಲಭ್ಯವಾಗಿದೆ.ಕೊನೆಗೂ ಬಾರಿ ಚರ್ಚೆಗೆ ಗ್ರಾಸವಾಗಿದ್ದ ರಾಮೇಶ್ವರಂ ಕೆಫೆಗೆ‌ ಬಾಂಬ್ ಇಟ್ಟವರು ಅಂದರ್ ಆಗಿದ್ದಾರೆ…

Leave a Reply

Your email address will not be published. Required fields are marked *

Optimized by Optimole
error: Content is protected !!