ಅಪ್ರಾಪ್ತೆಯನ್ನು ಪ್ರೀತಿಸಿದವನ ಹೆಣ ಬಿತ್ತು.!:ಹುಡುಗನನ್ನು ಕರೆಯಿಸಿ ಕೊಂದೆ ಬಿಟ್ಟರು ಆಕೆಯ ಕಡೆಯವರು.!!
news.ashwasurya.in
✍️SUDHIR VIDHATA
ಕಲಬುರಗಿಯ ಅ ಹುಡುಗನಿಗೆ ಇನ್ನೂ 19 ವರ್ಷ. ಬಿಎಸ್‌ಸಿ ನರ್ಸಿಂಗ್ ನಲ್ಲಿ ಎರಡನೇ ವರ್ಷದ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ. ಆತ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಜತೆ ಪ್ರೇಮದ ಸುಳಿಯಲ್ಲಿ ಸಿಲುಕಿದವನು ಇಂದು ಬೀದಿ ಹೆಣವಾಗಿದ್ದಾನೆ.ಈ ಘಟನೆ ಕಲಬುರಗಿಯ ಸರಸ್ವತಿಪುರದಲ್ಲಿ ನಡೆದಿದೆ.
ಹತ್ಯೆಗೆ ಕಾರಣವೇನು?
ಬಿಎಸ್ಸಿ ನರ್ಸಿಂಗ್ ಎರಡನೇ ಸೆಮಿಸ್ಟರ್ ಓದುತ್ತಿದ್ದ ಅಭಿಷೇಕ್ ಇತ್ತೀಚಿಗಷ್ಟೇ ಪರೀಕ್ಷೆ ಕೂಡ ಬರೆದಿದ್ದ.ಚೆನ್ನಾಗಿಯೇ ಓದುತ್ತಿದ್ದ ಇವನು ತನ್ನದೇ ವಠಾರದ ಬಾಲಕಿಯೊಬ್ಬಳ ಜೊತೆಗೆ ಸಲುಗೆಯಿಂದ ಇದ್ದ ಅದು ನಿಧಾನವಾಗಿ ಪ್ರೀತಿಗೆ ಜಾರಿದೆ.! ಈಕೆಯ ಪ್ರೇಮದ ಸುಳಿಯಲ್ಲಿ ಸಂಪೂರ್ಣವಾಗಿ ಸಿಲುಕಿದ್ದ! ಆಕೆಯೂ ಅಷ್ಟೆ ಅವನನ್ನು ತುಂಬ ಹಚ್ಚಿಕೊಂಡಿದ್ದಳು. ಅವರಿಬ್ಬರೂ ಆಗಾಗ ಕದ್ದುಮುಚ್ಚಿ ಭೇಟಿಯಾಗುವುದು, ರಾತ್ರಿ ಹಗಲೆನ್ನದೆ ವಾಟ್ಸ್ ಆಪ್‌ನಲ್ಲಿ ಪ್ರೇಮ ಸಂದೇಶ ಕಳಿಸುತ್ತಿದ್ದರಂತೆ!? ಇದು ನಿತ್ಯ ನೆಡೆಯುತ್ತಿತ್ತು ಎನ್ನುವುದು ಇವರನ್ನು ಹತ್ತಿರದಿಂದ ಬಲ್ಲವರ ಮಾತು.!
ಇದನ್ನು ಗಮನಿಸಿದ ಬಾಲಕಿ ಮನೆಯವರು ಇದನ್ನು ಆಕ್ಷೇಪಿಸಿದ್ದರು. ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಆದರೆ, ಅವರಿಬ್ಬರೂ ತಮ್ಮ ಹಳೆ ಚಾಳಿ ಮುಂದುವರಿಸಿ ಕೊಂಡು ಹೋಗಿದ್ದರು.
ಈ ನಡುವೆ, ಮಾರ್ಚ್ ಮೂರರಂದು ಹುಡುಗಿ ಮನೆಯವರು ಒಂದು ಸ್ಕೆಚ್ ರೆಡಿಮಾಡಿ ಬಿಟ್ಟಿದ್ದರು.! ಅದೇನೆಂದರೆ, ಹುಡುಗಿಯ ಕೈಯಲ್ಲಿ ಅಭಿಷೇಕ್‌ಗೆ ಕರೆ ಮಾಡಿಸಿ ʻನಮ್ಮ ಮನೆಯಲ್ಲಿ ಬರ್ತ್ ಡೇ ಇದೆ. ನೀನು ಬರಲೇಬೇಕುʼ ಎಂದು ಹುಡುಗಿಯ ಕೈಯಿಂದ ಹೇಳಿಸಿದ್ದಾರೆ. ಹುಡುಗಿ ಕರೆದಿದ್ದಾಳೆ ಎಂಬ ಖುಷಿಯಲ್ಲಿ ಅಭಿಷೇಕ್ ಹುಚ್ಚನಂತೆ ಆಗಿದ್ದ ಅವಳನ್ನು ಎದುರಾಗಬಹುದು ಹತ್ತಿರದಿಂದ ಮಾತನಾಡಿಸ ಬಹುದು ಎಂದು ಕುಣಿಯುತ್ತಾ ಆಕೆಯ ಮನೆಗೆ ಹೋಗಿದ್ದ.! ಆಗ ಆ ಮನೆಯವರು ಮತ್ತದೇ ಪ್ರೇಮದ ಪ್ರಸ್ತಾಪ ಎತ್ತಿದ್ದಾರೆ ನೀನು ಅವಳಿಂದ ದೂರಾಗು ಎಂದಿದ್ದಾರೆ.ಅದಕ್ಕೆ ಆತ ಬಿಲ್ ಕುಲ್ ಒಪ್ಪಲು ತಯಾರಿರಲಿಲ್ಲ. ಹುಡುಗ ಹುಡುಗಿ ಕರೆದಳು ಎಂದು
ಅಲ್ಲಿ ಬರ್ತಡೇ ಹೋಗಿದ್ದ ಆದರೆ ಅಲ್ಲಿ ಬರ್ತಡೆ ನಡೆಯುತ್ತಿರಲಿಲ್ಲ. ಬದಲಾಗಿ ಹುಡುಗನ ತಿಥಿಗೆ ಮುಹೊರ್ತ ಫಿಕ್ಸ್ ಮಾಡಿಕೊಂಡಿದ್ದರು.! ನನ್ನ ಹತ್ಯೆಗೆ ಮಚ್ಚು ಮಸಿಯುತ್ತಿದ್ದಾರೆ ಎಂದು ಆ ಹುಡುಗನಿಗೆ ತಿಳಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಯಾಕೆಂದರೆ ಆ ಮನೆಯವರು ಅಭಿಷೇಕ್‌ನನ್ನು ಹಿಡಿದು ಮನಸೋ ಇಚ್ಛೆ ರಾಡ್‌ನಿಂದ ಹೊಡೆದಿದ್ದರು. ಮನೆಯಲ್ಲಿ ಕೂಡಿಹಾಕಿ ರಾಡ್‌ನಿಂದ ಎರಡು ಗಂಟೆಗಳ ಕಾಲ ಆತನಿಗೆ ಥಳಿಸಿದ್ದಾರೆ. ಈ ನಡುವೆ ಬಾಲಕಿ ಅವನನ್ನು ಬಿಟ್ಟು ಬಿಡಿ. ಇನ್ನು ಅವನ ಜತೆ ಮಾತನಾಡುವುದಿಲ್ಲ ಎಂದು ಅಂಗಲಾಚಿದರೂ ಕಿರಾತಕರು ಬಿಟ್ಟಿರಲಿಲ್ಲ.
ಕಬ್ಬಿಣದ ರಾಡಿನ ಹೊಡೆತದಿಂದ ತತ್ತರಿಸಿ ಹೋಗಿ ನೆಲಕ್ಕೂರುಳಿದ ಅಭಿಷೇಕ್ ಗಂಭೀರ ಸ್ಥಿತಿಗೆ ತಲುಪಿದ್ದನಂತೆ.? ಅನಂತರ ಆತನ ಅರೆ ಜೀವವಾಗಿದ್ದ ದೇಹವನ್ನು ಹುಡುಗಿಯ ಮನೆಯವರು ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದರಂತೆ.! ರಾತ್ರಿ ಯಾರೋ ಗಮನಿಸಿ ಗುಟುಕು ಜೀವ ಹಿಡಿದು ಒದ್ದಾಡುತ್ತಿದ್ದ ಆತನನ್ನು ಜಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಭಿಷೇಕ್ ಮಾರ್ಚ್ 5ರಂದು ಮುಂಜಾನೆ ಪ್ರೀತಿಸಿದ ತಪ್ಪಿಗೆ ಸಣ್ಣ ವಯಸಿನಲ್ಲೆ ಬದುಕಿಗೆ ವಿದಾಯ ಹೇಳಿದ್ದಾನೆ ಆಸ್ಪತ್ರೆಯ ಹಾಸಿಗೆಯಲ್ಲೆ ಉಸಿರು ಚಲ್ಲಿದ್ದಾನೆ.!
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಬಾಲಕಿ ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇವರ ಪೈಕಿ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿಕೊಟ್ಟಿದ್ದಾರೆ. ಬಂಧಿತರಲ್ಲಿ ಅನಿಲ್ ರಾಠೋಡ್ (42), ಸಂತೋಷ್ ರಾಠೋಡ್ (34), ಸಾಗರ್ ಜಾಧವ್ (27), ಹೇಮಂತ್ ರಾಠೋಡ್ (34) ವರ್ಷದವರು
ಇದೀಗ ಅಭಿಷೇಕ್‌ನ ಮನೆಯವರು ಹೆತ್ತ ಅಮಾಯಕ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ. ಅದರ ಜತೆಗೆ ನಮ್ಮ ಮಾತು ಕೇಳದೆ ಪ್ರೀತಿಯ ಹಿಂದೆ ಬಿದ್ದು ಬದುಕನ್ನೇ ಹಾಳು ಮಾಡಿಕೊಂಡ ಮನೆ ಮಗನ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ಇಷ್ಟೇ ಪ್ರೀತಿ ಪ್ರೀತಿ ಎಂದು ಹುಡುಗಿಯೊಬ್ಬಳ ಹಿಂದೆ ಬಿದ್ದವನು ಹೆಣವಾಗಿ ಹೋಗಿದ್ದಾನೆ.! ಎದೆ ಮಟ್ಟಕ್ಕೆ ಬೆಳೆದಿದ್ದ ಮಗನನ್ನು ಕಳೆದುಕೊಂಡು ಹೆತ್ತವವರು ದಿಕ್ಕು ತೋಚದಂತಾಗಿದ್ದಾರೆ.