news.ashwasurya.in
SUDHIR VIDHATA
ಅಶ್ವಸೂರ್ಯ/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಕೂಗಳತೆ ದೂರದ ಕಡಲ ತೀರದ ತಟದಲ್ಲಿರುವ ಸುಂದರ ಪಟ್ಟಣ ಸುರತ್ಕಲ್.. ಸರಳ ಸಜ್ಜನಿಕೆಯ ಗುಣವುಳ್ಳ ಇಲ್ಲಿಯ ನಾಗರಿಕರ ಪ್ರೀತಿ ವಿಶ್ವಾಸಕ್ಕೆ ಎಂತವರು ಅಬಾರಿ ಆಗಲೇ ಬೇಕು. ಇತ್ತೀಚೆಗೆ ಈ ಪಟ್ಟಣದ ಗೋವಿಂದ ದಾಸ್ ಕಾಲೇಜಿನ ಕ್ರೀಡಾಂಗಣದ ಅಂಗಳದಲ್ಲಿ ಮೂರುದಿನಗಳ ಕಾಲ ದೊಡ್ಡ ಕ್ರಿಕೆಟ್ ಹಬ್ಬವೆ ನೆಡೆದುಹೋಯ್ತು.
ಎಂಬತ್ತು ತೊಂಬತ್ತರ ದಶಕದ ಹೆಸರಾಂತ ಕ್ರಿಕೆಟ್ ತಂಡಗಳ ಜೋತೆಗೆ ಅಂದಿನ ಶ್ರೇಷ್ಠ ಹಿರಿಯ ಆಟಗಾರರನ್ನು ಒಂದೆಡೆ ಸೇರಿಸಿ 45 ವರ್ಷ ಮೇಲ್ಪಟ್ಟ ಹಿರಿಯರ ಕ್ರಿಕೆಟ್ ಪಂದ್ಯಾಕೂಟವನ್ನು ನೆಡೆಸಿ ಕ್ರಿಕೆಟ್ ಹಬ್ಬವನ್ನೆ ಅದ್ದೂರಿಯಾಗಿ ಆಚರಿಸಲಾಯಿತು.
ಈ ಒಂದು ಲೆಜೆಂಡ್ ಕಪ್ – 2024ರ ಸೀಸನ್ – 3 ಹಿರಿಯರ ಪಂದ್ಯಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಗೌರವಕ್ಕೆ ಪಾತ್ರರಾದವರು ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ) ಸುರತ್ಕಲ್, ಇವರ ಆಶ್ರಯದಲ್ಲಿ ನೆಡೆದಂತಹ ಈ ಅದ್ದೂರಿ ಲೀಗ್ ಕಮ್ ನಾಕೌಟ್ ಮಾದರಿಯ ಲೆಜೆಂಡ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ಹೆಸರಾಂತ ತಂಡಗಳು ಭಾಗವಹಿಸಿದ್ದವು ಕರಾವಳಿಯ ಎಂಟು ತಂಡಗಳ ಜೋತೆಗೆ ಶಿವಮೊಗ್ಗ, ಬೆಂಗಳೂರು ಮತ್ತು ಮೈಸೂರು ಹಾಗೂ ಅರಸೀಕೆರೆಯ ಹೆಸರಾಂತ ಹಿರಿಯರ ತಂಡಗಳು ಭಾಗವಹಿಸಿ ಈ ಪಂದ್ಯಾವಳಿಯ ಯಶಸ್ಸಿಗೆ ಕಾರಣರಾದರು. ಈ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವಾಗಿ 1,00000 ರೂಪಾಯಿ ದ್ವೀತಿಯ ಬಹುಮಾನ 50,000 ರೂಪಾಯಿ ನಗದು ಹಣದ ಜೋತೆಗೆ ಪ್ರಥಮ ಮತ್ತು ದ್ವೀತಿಯ ಅತ್ಯಾಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಯಿತು ಇನ್ನುಳಿದಂತೆ ತೃತೀಯ ಮತ್ತು ಚತುರ್ಥ ಸ್ಥಾನ ಪಡೇದ ತಂಡಗಳಿಗೂ ನಗದು ಬಹುಮಾನದ ಜೊತೆಗೆ ಆಕರ್ಷಕ ಟ್ರೋಫಿಯನ್ನು ನೀಡಲಾಯಿತು ಮತ್ತು ಈ ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸ್‌ಮನ್, ಉತ್ತಮ ಬೌಲರ್ ಮತ್ತು ಉತ್ತಮ ಕೀಪರ್ ಹಾಗೂ ಫೀಲ್ಡರ್ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಈ ಪಂದ್ಯಕೂಟದ ಸರಣಿಯ ಶ್ರೇಷ್ಠ ಆಟಗಾರಿನಿಗೆ ಆಕರ್ಷಕ ಟ್ರೋಫಿಯ ಜೋತೆಗೆ ನಗದು ಬಹುಮಾನವನ್ನು ಕೊಟ್ಟು ಗೌರವಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಎಸ್. ಗಣೇಶ್ ರಾವ್ ಅಧ್ಯಕ್ಷತೆಯಲ್ಲಿ ವೇದಮೂರ್ತಿ ಶ್ರೀ ಐ. ರಮಾನಂದ ಭಟ್ ಅವರು ದೀಪ ಬೆಳಗಿಸಿದರೆ ಶ್ರೀ ನಳಿನ್ ಕುಮಾರ್ ಕಟೀಲು ದ.ಕ. ಜಿಲ್ಲಾ ಲೋಕಸಭಾ ಸದಸ್ಯರು ಡಾ| ವೈ. ಭರತ್ ಶೆಟ್ಟಿ ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಇವರುಗಳು ಪಂದ್ಯಾವಳಿಗೆ ಚಾಲನೆ ನೀಡಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮನೋಜ್ ಕುಮಾರ್ ನಾಯಕ್, ಸಹಾಯಕ ಪೋಲೀಸ್ ಆಯುಕ್ತರು ಮಂಗಳೂರು ಉತ್ತರ ಉಪ ವಿಭಾಗ, ಶ್ರೀ ಶ್ರೀನಿವಾಸ ಪ್ರಾಣೇಶ್, ಶ್ರೀ ಪಿ. ಕೃಷ್ಣಮೂರ್ತಿ,
ಶ್ರೀ ಅಝೀಝ್ ಪರ್ತಿಪಾಡಿ, ಶ್ರೀ ರಾಮಚಂದ್ರ ಪಿಲಾರು,
ಶ್ರೀ ತಿಲಕ್‌ರಾಜ್ ಕೃಷ್ಣಾಪುರ, ಶ್ರೀ ದಾವೂದ್ ಹಕೀಂ, ಶ್ರೀ ಈಶ್ವರ ಕಟೀಲ್, ಶ್ರೀ ವರುಣ್ ಚೌಟ, ಶ್ರೀ ಜಯಚಂದ್ರ ಹತ್ವಾರ್ ಉಪಸ್ಥಿತರಿದ್ದರು,
ಇನ್ನೂ ಈ ಹಿರಿಯಯರ ಪಂದ್ಯಾಕೂಟದಲ್ಲಿ ರಾಜ್ಯದ ಪ್ರತಿಷ್ಠಿತ ಒಟ್ಟು ಹನ್ನೆರಡು ತಂಡಗಳಾದ
1 ವಾರಿಯರ್ಸ್ ಸೂರಿಂಜೆ,
2.ಚಮಕ್ ಕ್ರಿಕೆಟರ್ಸ್ ಅರಸೀಕೆರೆ,
3.ವೀರಕೇಸರಿ (ರಿ.) ತಡಂಬೈಲ್,
4.ಸಿಟಿ ಫ್ರೆಂಡ್ಸ್ ಕೊಲ್ನಾಡು
5.ಭಾರತ್ ಕ್ರಿಕೆಟರ್ಸ್ ಶಿವಮೊಗ್ಗ
6.ಅಟ್ಯಾಕರ್ಸ್ ಮಂಗಳೂರು,
7.ಶ್ರೀ ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ಸುರತ್ಕಲ್,
8.ಆನಂದ್ ಇಲೆವೆನ್ ಬೆಂಗಳೂರು,
9.ಕಪಿಲ್ ಕ್ರಿಕೆಟರ್ಸ್ ಬೆಂಗಳೂರು,
10.ಮೈಸೂರು ಕ್ರಿಕೆಟ್ ಕ್ಲಬ್,
11.ಮಾರುತಿ ಉಳ್ಳಾಲ,
12.ದುರ್ಗಾಂಬಾ ತಡಂಬೈಲ್,
ಈ ತಂಡಗಳು ಭಾಗವಹಿಸಿದ್ದವು. ಎರಡು ದಿನಗಳ ಕಾಲ ಪಂದ್ಯಕೂಟವು ಯಶಸ್ವಿಯಾಗಿ ನೆಡೆದು ಅಂತಿಮವಾಗಿ ಬೆಂಗಳೂರಿನ ಆನಂದ್ ಇಲೆವೆನ್ ತಂಡ ಮತ್ತು ಅಟ್ಯಾಕರ್ಸ್ ಮಂಗಳೂರು ತಂಡ ಫೈನಲ್ ಪಂದ್ಯದಲ್ಲಿ ಎದುರಾಗಿ ಉತ್ತಮ ಪ್ರದರ್ಶನ ನೀಡಿದ ಅಟ್ಯಾಕರ್ಸ್ ಮಂಗಳೂರು ತಂಡ ಅಂತಿಮ ಕಾದಾಟದಲ್ಲಿ ಗೆಲುವು ಸಾಧಿಸಿ ಲೆಜೆಂಡ್ ಕಪ್ 2024ರ ಟ್ರೋಫಿಯನ್ನು ಎತ್ತಿಹಿಡಿಯಿತು, ಆನಂದ್ ಇಲೆವೆನ್ ತಂಡ ದ್ವೀತಿಯ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು,
ಅಂತಿಮವಾಗಿ ನೆಡೆದ ಸಮಾರೋಪ ಸಮಾರಂಭದಲ್ಲಿ
ಅಧ್ಯಕ್ಷತೆಯನ್ನು ಮೈದಾನದ ಎಲ್ಲೆಡೆ ಚಿರ ಯುವಕನಂತೆ ಮೂರು ದಿನಗಳ ಕಾಲ ಓಡಾಡಿಕೊಂಡು ಪಂದ್ಯಾವಳಿಯ ಯಶಸ್ಸಿನ ರೂವಾರಿಯಾದ ಶ್ರೀ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷರು, ಸುರತ್ಕಲ್ ಸ್ಪೋರ್ಟ್ಸ್ ಕಲ್ಬರಲ್ & ಕ್ಲಬ್ (ರಿ.),
ಗೌರವ ಉಪಸ್ಥಿತಿ ಶ್ರೀ ಶಂಕರನಾರಾಯಣ ಭಟ್ ಇಡ್ಯಾ ಅರ್ಚಕರು, ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುರತ್ಕಲ್ ಇವರುಗಳು ಉಪಸ್ಥಿತರಿದ್ದರು ಬಹುಮಾನ ವಿತರಣೆಯನ್ನು ಶ್ರೀ ಉಮಾನಾಥ ಕೋಟ್ಯಾನ್ ಶಾಸಕರು, ಮುಲ್ಕಿ-ಮೂಡಬಿದ್ರಿ ಕ್ಷೇತ್ರ
ಶ್ರೀ ಸಂತೋಷ್ ಪೈ
HR & PR BASF ಇಂಡಿಯಾ LTD ಮತ್ತು
ಶ್ರೀ ಇನಾಯತ್ ಆಲಿ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ, ಶ್ರೀ ಜಯಂತ್ ವಿ. ಶೆಟ್ಟಿ ಮಂಗಳೂರು ನಿವೃತ್ತ ಪೊಲೀಸ್ ಅಧೀಕ್ಷಕರು,
ಶ್ರೀ ಸಂತೋಷ್ ಎ. ಕಾಯ್ಕಿಣಿ ಪೊಲೀಸ್ ನಿರೀಕ್ಷಕರು, ಸುರತ್ಕಲ್ ಪೊಲೀಸ್ ಠಾಣೆ,
ಶ್ರೀ ಕಡೆಂಜ ಅಶೋಕ್ ಕುಮಾರ್ ಚೌಟ ಉದ್ಯಮಿ, ಶ್ರೀ ಗಿರೀಶ್ ಶೆಟ್ಟಿ ಕಟೀಲು ಶ್ರೀ ಡೆವಲಪರ್ಸ್, ಶ್ರೀ ಮಹಮ್ಮದ್ ಅಶ್ರಫ್ ಸಂಸ್ಥಾಪಕರು, ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್,
ಶ್ರೀ ಅನಿಲ್ ಸಾಲ್ಯಾನ್ ಕಿನ್ನಿಗೋಳಿ ಉದ್ಯಮಿ / ಚಲನಚಿತ್ರ ನಿರ್ಮಾಪಕರು,
ಶ್ರೀ ನರೇಶ್ ಪೂಜಾರಿ ಮೆ। ರಾಜಲಕ್ಷ್ಮೀ ಟ್ರಾವೆಲ್ಸ್,
ಶ್ರೀಮತಿ ಸರಿತಾ ಶಶಿಧರ್ ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆ,
ಶ್ರೀ ಎಚ್. ಶ್ರೀರಂಗ ಕಾರ್ಯದರ್ಶಿ, ಹಿಂದೂ ವಿದ್ಯಾದಾಯಿನಿ ಸಂಘ (ರಿ.) ಸುರತ್ಕಲ್ ಉಪಸ್ಥಿತರಿದ್ದರು. ಪ್ರಮುಖವಾಗಿ ಕ್ಲಬ್ಬಿನ ಮಹಾಪೋಷಕರಾದ
ಎಸ್. ಮಹೇಶ್ ಕುಮಾರ್ ACP ಹಾಗೂ
ಮಹಾಬಲ ಪೂಜಾರಿ ಕಡಂಬೋಡಿ,ಅಧ್ಯಕ್ಷರು
ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಜರಿದ್ದು ಬಹುಮಾನ ವಿತರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ಮಾರ್ಚ್ 4 ಸಂಜೆ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ಬಿನ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ನಿರ್ದೇಶನದಲ್ಲಿ ವಿಭಿನ್ನ ಶೈಲಿಯ ಯಶಸ್ವಿ ನಾಟಕ ಶಿವಧೂತ ಗೂಳಿಗ ಪ್ರದರ್ಶನಗೊಂಡಿತು.
ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ತನು ಮನ ಧನದ ಸಹಕಾರದೊಂದಿಗೆ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ಬಿನ ಜೋತೆಗೆ ಕೈ ಜೋಡಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು. ಪ್ರಮುಖವಾಗಿ ಕ್ಲಬ್ಬಿನ ಮಹಾಪೋಷಕರಾದ
ಪ್ರಮುಖವಾಗಿ ಕ್ಲಬ್ಬಿನ ಮಹಾ ಪೋಷಕರಾದ ಎಸ್. ಮಹೇಶ್ ಕುಮಾರ್ ACP ಹಾಗೂ ಕ್ಲಬ್ಬಿನ ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಭೋಡಿ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಸಾರಥ್ಯದಲ್ಲಿ ನೆಡೆದಂತಹ ಹಿರಿಯರ ಕ್ರಿಕೆಟ್ ಪಂದ್ಯಾಕೂಟಕ್ಕೆ ತೆರೆ ಬಿತ್ತು….
ಸಂಸ್ಥೆಯ ಮಹಾ ಪೋಷಕರಾದ ದಕ್ಷ ಪೊಲೀಸ್ ಅಧಿಕಾರಿ ಎಸಿಪಿ ಮಹೇಶ್ ಕುಮಾರ್ ಇವರನ್ನು ತೃತೀಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಮಾಜ ಸೇವ ಕಲಾರತ್ನ ಎಂಬ ಬಿರುದು ಪ್ರಧಾನ ಮಾಡಲಾಯಿತು, ಜೊತೆಗೆ ಸಂಸ್ಥೆಯ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು
ಅದ್ದೂರಿಯಾಗಿ ಯಶಸ್ವಿಯಾಗಿ ನೆಡೆದಂತಹ ಈ ಹಿರಿಯರ ಪಂದ್ಯಾವಳಿಯಲ್ಲಿ ಭಾಗವಹಿಸಿದ ಖುಷಿ ಕೂಡ ನಮ್ಮ ಭಾರತ್ ಕ್ರಿಕೆಟರ್ಸ್ ನವರದು .ನಿಮ್ಮಗಳ ಪ್ರೀತಿ ವಿಶ್ವಾಸಕ್ಕೆ ಆತಿಥ್ಯಕ್ಕೆ ನಾವು ಚಿರಋಣಿ …
ಸುರತ್ಕಲ್ ನ ಗೋವಿಂದ ದಾಸ್ ಕಾಲೇಜು ಕ್ರೀಡಾಂಗಣದ ಬಣ್ಣವೆ ಬದಲಾಗಿ ಹೋಗಿತ್ತು ಕ್ರೀಡಾಂಗಣದ ಮಧ್ಯದಲ್ಲಿ ಉತ್ತಮ ಕ್ರಿಕೆಟ್ ಅಂಕಣವನ್ನು ನಿರ್ಮಿಸಲಾಗಿತ್ತು, ಅಂಕಣದ ಸುತ್ತಲೂ ಜಾಹಿರಾತು ಫಲಕಗಳು ವಿಜ್ರಂಭಿಸುತ್ತಿದ್ದರೆ.
ಆಟಗಾರರಿಗೂ ಕ್ರಿಕೆಟ್ ಅಭಿಮಾನಿಗಳಿಗೆ ಕೂರಲೂ ಶಾಮಿಯಾನದ ನೆರಳಿನಲ್ಲಿ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು, ಬ್ಯಾಟಿಂಗ್ ಅಂಕಣಕ್ಕೆ ನೇರವಾಗಿ ವಿಕ್ಷಕ ವಿವರಣೆಗಾರರ ಪ್ರತ್ಯೇಕವಾದ ಟೆಂಟ್ ನಿರ್ಮಿಸಲಾಗಿತ್ತು,
ಪ್ರತಿ ಬೌಂಡರಿ ಸಿಕ್ಸರ್ ಮತ್ತು ವಿಕೆಟ್ ಪತನದ ಸಮಯದಲ್ಲಿ ವಿಶೇಷವಾದ ಹಾಡಿನ ಜೋತೆಗೆ ಡಿಜೆ ಮ್ಯೂಸಿಕ್ ಅಬ್ಬರಿಸುತ್ತಿತ್ತು, ಟಾಸ್ ಗಾಗಿ ಪ್ರತ್ಯೇಕ ಸ್ಟೇಜ್ ಬಂದ ಅತಿಥಿ ಗಳನ್ನು ಗೌರವಿಸಲೆಂದು ಶ್ರೇಷ್ಠ ಮಟ್ಟದ ಸ್ಟೇಜ್ ನಿರ್ಮಿಸಿದ್ದರು.
ಆಟಗಾರರಿಗೆ ತಂಪು ಪಾನೀಯ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು, ಹೋರ ಊರಿನಿಂದ ಬಂದಂತ ನಾಲ್ಕೈದು ತಂಡಗಳಿಗೆ ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು.ಪಂದ್ಯದ ಆರಂಭದ ಕ್ಷಣದಿಂದ ವಿಜೇತರ ಕೈ ಸೇರುವ ಕ್ಷಣದ ವರೆಗೂ ಕ್ರೀಡಾಂಗಣದ ಭುಜದ ಭಾಗದಲ್ಲಿ ಪ್ರಥಮ ಮತ್ತು ದ್ವೀತಿಯ ಅತ್ಯಾಕರ್ಷಕ ಕಪ್ ಗಳ ಜೋತೆಗೆ ಇನ್ನೂಳಿದ ಪ್ರಶಸ್ತಿ ಫಲಕಗಳು ಕಣ್ಣಗೆ ಕಾಣುವಂತೆ ರಾರಾಜಿಸುತ್ತಿದ್ದವು.
ಒಟ್ಟಿನಲ್ಲಿ ಎಲ್ಲಾ ವಿಭಾಗದಲ್ಲೂ ಆಟಗಾರರ ಉಟ ಉಪಚಾರದ ವಿಷಯದಲ್ಲೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನವರ ಶ್ರೇಷ್ಠ ಮಟ್ಟದ ಕಾರ್ಯವೈಖರಿ ಎದ್ದುಕಾಣುತ್ತಿತ್ತು.ಈ ಪಂದ್ಯಾವಳಿಯಲ್ಲಿ ಗೆಲ್ಲುವುದಿರಲಿ ಭಾಗವಹಿಸಿದ್ದೆ ಪ್ರತಿಯೊಂದು ತಂಡದ ಹೆಮ್ಮೆ ಎನ್ನಬಹುದು..ಒಟ್ಟಿನಲ್ಲಿ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ನೆಡೆದಂತಹ ಲೆಜೆಂಡ್ ಕಪ್ – 2024ರ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು…..