ಅಮ್ಮನನ್ನೇ ಮೀರಿಸುವ ಅಂದ! ಇವಳೇ ಬಾಲಿವುಡ್ ನಟಿ ಐಶ್ವರ್ಯ ಮಗಳು ಆರಾಧ್ಯ.!!

ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಮಗಳು ಆರಾಧ್ಯ.!

ಅಮ್ಮನನ್ನೇ ಮೀರಿಸುವ ಅಂದ! ಇವಳೇ ಬಾಲಿವುಡ್ ನಟಿ ಐಶ್ವರ್ಯ ಮಗಳು ಆರಾಧ್ಯ.!!

news.ashwasurya.in

✍️SUDHIR VIDHATA

ವೈರಲ್ ಫೋಟೊಸ್ : ಐಶ್ವರ್ಯಾ ರೈ ಮಗಳು ಆರಾಧ್ಯ ಕೂಡ ಅಮ್ಮನಷ್ಟೇ ಸುಂದರವಾಗಿದ್ದಾರೆ.ಆರಾಧ್ಯ ಇನ್ನೂ ಚಿಕ್ಕ ಹುಡುಗಿ ಬಾಲಿವುಡ್ ಅಂಗಳದಲ್ಲಿ ಆಭಿನಯಸದಿದ್ದರು ಅಮಿತಾಭ್ ಮೊಮ್ಮಗಳು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೀಗ ಸಖತ್ ಲುಕ್​ನಲ್ಲಿ ಆರಾಧ್ಯ ಮಿಂಚಿದ್ದಾರೆ.


ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಇಬ್ಬರೂ ಜೋಡಿಯಾಗಿ ಎಲ್ಲಿಗೆ ಹೋದರೂ ಎಲ್ಲರ ಗಮನ ಸೆಳೆಯುತ್ತಾರೆ. ಆರಾಧ್ಯ ಆಗಾಗ ಕ್ಯಾಮೆರಾ ಕಣ್ಣಿಗೆ ಬೀಳಿತ್ತಿರುತ್ತಾರೆ. ಹೆಚ್ಚಾಗಿ ತನ್ನ ತಾಯಿ ಐಶ್ವರ್ಯಾ ಜೊತೆಗೆ ಆರಾಧ್ಯ ಕಾಣಿಸಿಕೊಳ್ತಾರೆ. ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರೊಂದಿಗೆ ಜಾಮ್ನನಗರದಲ್ಲಿ ನಡೆದ ಆನಂದ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್ ನಲ್ಲಿ ಭಾಗವಹಿಸಲು ಅಮ್ಮನ ಜೊತೆ ಆರಾಧ್ಯ ಕೂಡ ಬಂದಿದ್ದರು.


ಮೂರು ದಿನಗಳ ಕಾಲ ಜಾಮ್​ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆರಾಧ್ಯ ಅಪ್ಪ ಅಮ್ಮನ ಮಧ್ಯೆ ಕುಳಿತು ಎಂಜಾಯ್ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.
ಆನಂದ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಪೂರ್ವ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ಸೆಲೆಬ್ರಿಟಿ ಗಳಲ್ಲಿ ಆರಾಧ್ಯ ಅವರ ಫೋಟೋಗಳೇ ಹೆಚ್ಚು ವೈರಲ್ ಆಗಿವೆ.
ಲೈಟ್ ರೋಸ್ ಮತ್ತು ವೈಟ್ ಕಲರ್ ಹೆವಿ ಅನಾರ್ಕಲಿ ಡ್ರೆಸ್ಸಿನಲ್ಲಿ ಆರಾಧ್ಯ ಮಿಂಚುತ್ತಿದ್ರು. ಡುಡುಗೆಗೆ ತಕ್ಕ ಒಡವೆ ಎಂಬಂತೆ ಜುವೆಲ್ಲರಿ ತೊಟ್ಟಿದ್ದ ಆರಾಧ್ಯ, ಹೊಸ ಲುಕ್ನಲ್ಲಿ ಕಾಣಿಸಿಕೊಂಡ್ರು. ಐಶ್ವರ್ಯ ಮಗಳು ಗೊಂಬೆಯಂತೆ ಕಾಣಿಸುತ್ತಿದ್ದರು.!


ಆರಾಧ್ಯ ತನ್ನ ಹಳೆಯ ಹೇರ್ ಸ್ಟೈಲ್ ಅನ್ನು ತೆಗೆದು ಫ್ರಿಂಜ್ ಹೇರ್ ಸ್ಟೈಲ್ ಗೆ ಬದಲಿಸಿದ್ದರು ಹೊಸ ಹೇರ್ ಸ್ಟೈಲ್ ನಲ್ಲಿ ಹೊಸ ಲುಕ್ ನಲ್ಲಿ ಅತಿ ಸುಂದರವಾಗಿ ಕಾಣುತ್ತಿದ್ದರು. ಚಿಕ್ಕಂದಿನಿಂದಲೂ ಆರಾಧ್ಯಳ ಹೇರ್ ಸ್ಟೈಲ್ ಒಂದೇ ರೀತಿಯಾಗಿತ್ತು. ಇದೀಗ ಆರಾಧ್ಯ ಹೇರ್ ಸ್ಟೈಲ್ ಬದಲಿಸಿದ್ದು, ದೊಡ್ಡ ಹುಡುಗಿಯಂತೆ ಕಾಣಿಸುತ್ತಿದ್ದಾರೆ.


ಆರಾಧ್ಯಳ ಸುಂದರತೆಯನ್ನು ನೋಡಿದ ನೆಟ್ಟಿಗಳು ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎನ್ನುತ್ತಿದ್ದಾರೆ. ಆರಾಧ್ಯ ತನ್ನ ತಾಯಿಯಂತೆ ತುಂಬಾ ಸುಂದರವಾಗಿ ಕಾಣುತ್ತಾಳೆ. ಅಮ್ಮನನ್ನೇ ಮೀರುವ ಅಂದ ಆಕೆಯದು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮುಂದಿನ ವಿಶ್ವ ಸುಂದರಿ ಎಂದು ಬಣ್ಣಿಸಿ ಕಮೆಂಟ್ ಮಾಡುತ್ತಿದ್ದಾರೆ.


ಆರಾಧ್ಯ ದೊಡ್ಡವಳಾಗುತ್ತಿದ್ದಂತೆ ಅಮ್ಮನನ್ನೆ ಮೀರಿಸುವಂತಹ ದೊಡ್ಡ ನಟಿಯಾಗಿ ಭವಿಷ್ಯದಲ್ಲಿ ಬಾಲಿವುಡ್ ನಲ್ಲಿ ಕ್ವೀನ್ ಆಗುತ್ತಾರ ಎನ್ನುವುದನ್ನು ಕಾದು ನೀಡಬೇಕಿದೆ. ಇತ್ತೀಚಿಗೆ ಆರಾಧ್ಯ ಶಾಲೆಯ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರಂತೆ.!

Leave a Reply

Your email address will not be published. Required fields are marked *

Optimized by Optimole
error: Content is protected !!