ವಿದ್ಯಾರ್ಥಿನಿಯರ ಮೇಲೆ ಆಸಿಡ್ ಹಾಕಿದವನನ್ನು ಎನ್ ಕೌಂಟರ್ ಮಾಡಿ ಸಂಪೂರ್ಣ ಕರ್ನಾಟಕ ನಿಮ್ಮೊಂದಿಗಿರುತ್ತದೆ : ಗಿರೀಶ್ ಮಟ್ಟಣ್ಣನವರ್
news.ashwasurya.in
✍️SUDHIR VIDHATA
ಅಶ್ವಸೂರ್ಯ/ಶಿವಮೊಗ್ಗ ಪುತ್ತೂರು : ಕಡಬ ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿಯ ಅಮಾನುಷ ಕೃತ್ಯ ಎಸಗಿದವನನ್ನು ಏನ್ ಕೌಂಟರ್ ಮಾಡಿ ಎಂದು ಮಾಜಿ ಪೊಲೀಸ್ ಅಧಿಕಾರಿ, ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾರೆ.
ಕಡಬ ಪೊಲೀಸ್ ಠಾಣೆಗೆ ಭೇಟಿ ಆ್ಯಸಿಡ್ ದಾಳಿ ಪ್ರಕರಣ ಸಮಗ್ರ ಮಾಹಿತಿ ಪಡೆದರು. ಈ ಸಂದರ್ಭ ಪ್ರತಿಕ್ರೀಯಿಸಿದ ಅವರು ಇಲ್ಲಿನ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ನಾವು ವಿನಂತಿ ಮಾಡುವುದೇನೆಂದರೆ ಆಸಿಡ್ ಎರಚಿ ಇಂತಹ ಕೃತ್ಯ ಎಸಗಿದಾತನನ್ನು ಎನ್ ಕೌಂಟರ್ ಮಾಡಿ, ಇಡೀ ಸಮಾಜ,ರಾಜ್ಯ ನಿಮ್ಮ ಜೊತೆಗೆ ಇರಲಿದೆ .ಈ ಹೆಣ್ಣು ಮಗಳು ಯಾರೋದೊ ಮಗಳು, ಯಾರೋದೋ ತಂಗಿ.ಇಂತಹ ಅಮಾಯಕ ಹೆಣ್ಣುಮಕ್ಕಳ ಬದುಕಿನಲ್ಲಿ ರಾಕ್ಷಸ ಕ್ರೌರ್ಯ ಮೆರೆದವನಿಗೆ ಕಠಿಣ ಕಾನೂನು ಕ್ರಮ ಆಗದಿದ್ದರೆ ಇದೇ ರೀತಿ ಪುನರಾವರ್ತನೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.