ಕಾನ್‌ಸ್ಟೆಬಲ್ ಗೆ ಚಾಕುವಿನಿಂದ ಇರಿಯಲು ಮುಂದಾದವನಿಗೆ ಪೋಲಿಸರ ಗುಂಡೇಟು.!! :
news.ashwasurya.in
ಶಿವಮೊಗ್ಗ/ಅಶ್ವಸೂರ್ಯ
ರಾಮನಗರ: ಕಾನ್‌ಸ್ಟೆಬಲ್ ಒಬ್ಬರನ್ನು ಚಾಕುವಿನಿಂದ ಇರಿಯಲು ಮುಂದಾಗಿ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಸೈಕಲ್ ಗಿರಿ ಕಾಲಿಗೆ ಕಗ್ಗಲಿಪುರ ಠಾಣೆ ಸಬ್ ಇನ್‌ಸ್ಪೆಕ್ಟರ್ ಲೋಕೇಶ್ ಗುಂಡು ತೂರಿಸಿದ್ದಾರೆ.!ರೌಡಿಶೀಟರ್ ನಿಂದ ಹಲ್ಲೆಗೆ ಒಳಗಾದ ಕಾನ್‌ಸ್ಟೆಬಲ್ ಬರ್ಲಿಂಗಪ್ಪ ಅವರ ಕೈಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡೇಟು ಬಿದ್ದ ಸೈಕಲ್ ರಾಜನನ್ನು ರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಗ್ಗಲಿಪುರ ಠಾಣೆ ವ್ಯಾಪ್ತಿಯ ಓ.ಬಿ.ಚೂಡಹಳ್ಳಿಯಲ್ಲಿರುವ ಶಿವಮಾದ ನಾಯ್ಕ ಅವರ ತೋಟದ ಮನೆಯಲ್ಲಿ ಸ್ನೇಹಿತ ರಾದ ವಿಘ್ನೇಶ್ವರ್, ಅಭಿಷೇಕ್, ರಾಹುಲ್ ಹಾಗೂ ವರುಣ್ ಮಾರ್ಚ್ 1ರಂದು ರಾತ್ರಿ ಊಟಕ್ಕೆ ಸೇರಿದ್ದರು. ಮಧ್ಯರಾತ್ರಿ 12ರ ಸುಮಾರಿಗೆ ಸೈಕಲ್ ಗಿರಿ ಸೇರಿದಂತೆ ಏಳೆಂಟು ರೌಡಿಗಳು ತೋಟದ ಮನೆಗೆ ಬಂದು, ಚಾಕುವಿನಿಂದ ಬೆದರಿಸಿ ಎಲ್ಲರ ಮೊಬೈಲ್ ಹಣ ಕಿತ್ತುಕೊಂಡಿದ್ದರಂತೆ.! ಎಂದು ಮೂಲಗಳಿಂದ ತಿಳಿದುಬಂದಿದೆ.
ಇದೆ ವೇಳೆ ತೋಟದನೆಯಲ್ಲಿ ಅ ರಾತ್ರಿ ವಿಘ್ನೇಶ್ವರ್ ತಲೆಗೆ ರೌಡಿಗಳು ಬಿಯರ್ ಬಾಟಲಿಯಿಂದ ಹೊಡೆದು, ಹಲ್ಲೆ ನಡೆಸಿದ್ದರು. ಬಿಡಿಸಲು ಬಂದವರನ್ನು ಹೆದರಿಸಿದ್ದರು. ಅಭಿಷೇಕ್ ಅವರ ಪರ್ಸ್ ಮತ್ತು ₹40 ಸಾವಿರ ಮೌಲ್ಯದ ವಾಚ್ ಬಲವಂತವಾಗಿ ಕಿತ್ತುಕೊಂಡಿದ್ದರು. ರಾಹುಲ್ ಬಳಿ ಇದ್ದ ₹3,500 ಹಣ ದೋಚಿದ್ದರು. ಹಲ್ಲೆ ನಡೆಸಿದವರಲ್ಲಿ ಇಬ್ಬರು, ‘ನಾವು ಸೈಕಲ್ ಗಿರಿ ಮತ್ತು ಕಿಶೋರ್. ನಮಗೆ ₹2 ಲಕ್ಷ ಹಣ ಕೊಡದಿದ್ದರೆ ನಿಮ್ಮನ್ನು ಚಾಕುವಿನಿಂದ ಇರಿಯುತ್ತೇವೆ’ ಎಂದು ಬೆದರಿಸಿದ್ದರಂತೆ.!
ಕೂಗಾಟ ಕೇಳಿ ಅಲ್ಲೆ ತೋಟದ ಕಾರ್ಮಿಕರು ಸ್ಥಳಕ್ಕೆ ಬರುತ್ತಿದ್ದಂತೆ, ರೌಡಿಗಳು ಹಣ ಮತ್ತು ಇತರ ವಸ್ತುಗಳನ್ನು ಅಲ್ಲೆಯೇ ಬಿಟ್ಟು ಪರಾರಿಯಾಗಿದ್ದರೆ ಘಟನೆಗೆ ಸಂಬಂಧಿಸಿದಂತೆ, ಮಾರನೇಯ ದಿನ ಡಕಾಯಿತಿ ಮತ್ತು ಹಲ್ಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪೈಕಿ ಸೈಕಲ್ ಗಿರಿಯನ್ನು ಕಾಲಿಗೆ ಗುಂಡು ತೂರಿಸಿ ಬಂಧಿಸಲಾಗಿತ್ತು.
ಸೈಕಲ್ ಗಿರಿ ವಿರುದ್ಧ ಈಗಾಗಲೇ 8 ಪ್ರಕರಣಳಿವೆ: ಗುಂಡೇಟು ತಿಂದಿರುವ ಗಿರೀಶ್ ಎನ್. ಅಲಿಯಾಸ್ ಸೈಕಲ್ ಗಿರಿ ಬೆಂಗಳೂರು ಉತ್ತರ ತಾಲ್ಲೂಕಿನ ಉದಿಪಾಳ್ಯದವ ನಾಗಿದ್ದಾನೆ. ಬೆಂಗಳೂರಿನ ಕೋಣನ ಕುಂಟೆ ಕ್ರಾಸ್‌ನ ಗಣಪತಿಪುರದಲ್ಲಿ ಆಟೊ ಓಡಿಸಿಕೊಂಡಿರುವ ಈತ ಇತ್ತೀಚೆಗೆ ಅಪರಾಧವನ್ನೇ ವೃತ್ತಿ ಮಾಡಿ ಕೊಂಡಿದ್ದಾನೆ. ಗಿರಿ ವಿರುದ್ಧ ಕಗ್ಗಲಿಪುರ ಮತ್ತು ಸುಬ್ರ ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಕೊಲೆ ಯತ್ನ, ದರೋಡೆ, ಡಕಾಯಿತಿ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
‘ಎಚ್ಚರಿಕೆ ಕೊಟ್ಟರು ಲೆಕ್ಕಿಸದೆ ಪೋಲಿಸರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾದಾಗ ಗುಂಡು ಹಾರಿಸದೆ ವಿಧಿ ಇರಲಿಲ್ಲ.
ದರೋಡೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಲು ಮತ್ತು ಚಾಕುವನ್ನು ವಶಪಡಿಸಿಕೊಳ್ಳಲು ಕಾನ್‌ಸ್ಟೆಬಲ್‌ಗಳಾದ ಮುರಳೀಧರ್ ಹಾಗೂ ಬರ್ಲಿಂಗಪ್ಪ ಅವರೊಂದಿಗೆ ಸಂಜೆ 4ರ ಸುಮಾರಿಗೆ ಸೈಕಲ್ ಗಿರಿಯನ್ನು ತೋಟದ ಮನೆಗೆ ಕರೆದುಕೊಂಡು ಹೋಗಿದ್ದೇವು. ಅಲ್ಲೇ ಬಿದ್ದಿದ್ದ ಚಾಕುವನ್ನು ತೋರಿಸಿದ ಗಿರಿ ಅದನ್ನು ಕೈಗೆತ್ತಿಕೊಂಡು ಏಕಾಏಕಿಯಾಗಿ ಬರ್ಲಿಂಗಪ್ಪ ಅವರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.! ಹಿಡಿಯಲು ಹೋದ ನಮ್ಮ ಮೇಲೂ ಹಲ್ಲೆಗೆ ಮುಂದಾದಾಗ ಗಾಳಿಯಲ್ಲಿ ಗುಂಡು ಹಾರಿಸಿ ಆತನಿಗೆ ಎಚ್ಚರಿಕೆ ನೀಡಿದೆ ಆದರೂ ಲೆಕ್ಕಿಸದೆ ಮತ್ತೆ ನಮ್ಮತ್ತ ಚಾಕು ಹಿಡಿದು ಮುನ್ನುಗ್ಗಿದಾಗ ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿದೆ’ ಎಂದು ಸಬ್ ಇನ್‌ಸ್ಪೆಕ್ಟರ್ ಲೋಕೇಶ್ ಸಿ.ಹೇಳಿದ್ದಾರೆ