ಸಹೋದರ ಮಿತ್ರ ಕೋಣಂದೂರು ಸುಧಾಕರ ಶೆಟ್ಟಿ ( ಸುದಣ್ಣ) ವಿಧಿವಶ!!

ಇಲ್ಲಾ ಹೀಗಾಗಬಾರದಿತ್ತು. ಅನೇಕ ವರ್ಷದ ಪರಿಶ್ರಮ ಇನ್ನೇನು ಮಕ್ಕಳು ದುಡಿದು ಫಲಕೊಡುವ ಸಂದರ್ಭದಲ್ಲಿ ನನ್ನ ಆತ್ಮೀಯ ಮಿತ್ರ‌ ಸುದಣ್ಣ  ಸಾವಿನಮನೆ ಸೇರಿದ್ದಾರೆ.! ತನ್ನೂರಿನಲ್ಲಿ ತನ್ನದೇ ಆದ ಹೆಸರನ್ನು ಗಳಿಸಿಕೊಂಡಿದ್ದ ಸುದಣ್ಣ ಇನ್ನಷ್ಟು ಕಾಲ ಬದುಕಬೇಕಾಗಿತ್ತು  ಕಾಲಘಟ್ಟದಲ್ಲಿ ಕೊಣಂದೂರಿನ ಮನೆ ಮಗನಂತೆ ಇದ್ದ ಸುಧಾಕರ ಶೆಟ್ಟಿ ಅಕಾಲ ಮೃತ್ಯುವಿಗೆ ಆಹುತಿಯಾಗಬಾರದಿತ್ತು.ಸಮಾಜ ಸೇವಕನಾಗಿ, ಒಳ್ಳೆಯ ಮಿತ್ರನಾಗಿ,ಕಷ್ಟದಲ್ಲಿರುವವರ‌ ಪಾಲಿನ ಅನ್ನದಾತನಾಗಿ,ಹೆಂಡತಿಗೆ ಒಳ್ಳೆಯ ಗಂಡನಾಗಿ‌ ಮಕ್ಕಳಿಗೆ ಪ್ರೀತಿಯ ಅಪ್ಪನಾಗಿದ್ದ ಕೊಣಂದೂರಿನ ಮನೆಮಗನಂತೆ ಇದ್ದ ಸುದಣ್ಣನ ಮೇಲೆ ಅ ಕಾಲನಿಗೆ ಕರುಣೆಯೆ ಇಲ್ಲವಾಯಿತು. ಇನ್ನೂ ಅರವತ್ತರ ಆಸುಪಾಸು ಕಟ್ಟುಮಸ್ತಾದ ದೇಹ ಏನನ್ನೋ ಸಾಧಿಸುವ ಹುಮ್ಮಸ್ಸಿನ ವಕ್ತಿತ್ವದ ಮನಸುಳ್ಳ ವ್ಯಕ್ತಿ ಸುದಣ್ಣ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅನಾರೋಗ್ಯದಿಂದ ಬಳಲಿದ್ದ ಸುದಣ್ಣನನ್ನು ಮಣಿಪಾಲದ ಆಸ್ಪತ್ರೆಗೆ ‌ಕರೆದೊಯ್ಯಾಲಾಗಿತ್ತು.ಅಲ್ಲಿ ಶಸ್ತ್ರಚಿಕಿತ್ಸೆಕೂಡ ಯಶಸ್ವಿಯಾಗಿತ್ತು ಮಂಗಳವಾರ ಆಸ್ಪತ್ರೆಯಿಂದ ಮನೆಗೆ ನಿರ್ಗಮಿಸಬೇಕಿದ್ದ ಸುದಣ್ಣ ದಿಢೀರ್ ಹೃದಯಘಾತಕ್ಕೆ ಒಳಗಾಗಿ ಸೋಮವಾರ ಇಹಲೋಕವನ್ನು ತ್ಯಜಿಸಿದ್ದಾರೆ. ಆಸ್ಪತ್ರೆಯಿಂದ
ಚೇತರಿಸಿಕೊಂಡು ಇನ್ನೇನು ಮನೆಗೆ ಬರಬೇಕಾಗಿದ್ದ ಸುಧಾಕರ ಶೆಟ್ಟಿ ( ಸುದಣ್ಣ ) ಮಸಣ ಸೇರಿದ್ದಾರೆ.!! ಸುದಣ್ಣನ ದಿಢೀರ್ ಸಾವಿನಿಂದ ತೀರ್ಥಹಳ್ಳಿ ತಾಲ್ಲೂಕಿನ ಅಪಾರ ಬಂದು ಮಿತ್ರರಿಗೆ ನಿಜಕ್ಕೂ ಆಘಾತವೆನಿಸಿದೆ.

.

ಸಹೋದರ ಮಿತ್ರ ಕೋಣಂದೂರು ಸುಧಾಕರ ಶೆಟ್ಟಿ ( ಸುದಣ್ಣ) ವಿಧಿವಶ!!

ತೀರ್ಥಹಳ್ಳಿ: ತಾಲೂಕಿನ ಕೊಣಂದೂರು ವಾಸಿಯಾದ ಸುಧಾಕರ ಶೆಟ್ಟಿ ಅವರು ನಿನ್ನೆ (ದಿನಾಂಕ,26) ಮುಂಜಾನೆ ಮಣಿಪಾಲದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವಿಗೆ ಶರಣಾಗಿದ್ದಾರೆ. ಮೃತರು ಕೊಣಂದೂರಿನ ಮನೆ ಮಗನಂತೆ ಎಲ್ಲರಿಗೂ ಚಿರಪರಿಚಿತ ವ್ಯಕ್ತಿ ಇವರು ಎಲ್ಲರಿಗೂ ಸುದಣ್ಣನಾಗಿದ್ದರೆ ಇವರಿಗೆ ಊರಿನ ಹಿರಿಯರೆಲ್ಲ ಅಣ್ಣ ಅಕ್ಕಂದಿರಿದ್ದಂತೆ ಅಷ್ಟೇ ಪ್ರೀತಿಯಿಂದ ಕರಿಯುತ್ತಿದ್ದ ಸುದಣ್ಣ ಊರಿನ ಯಾವುದೇ ಕಾರ್ಯಕ್ರಮವಾಗಿರಲಿ ತಾನು ಮುಂದೆ ಎನ್ನುವಂತೆ ಭಾಗವಹಿಸಿ ತನ್ನ ಮನೆಯ ಕೆಲಸದಂತೆ ಎಲ್ಲವನ್ನೂ ಮಾಡುವಂತ ಮನಸುಳ್ಳ ವ್ಯಕ್ತಿತ್ವ, ತನ್ನ ಮಿತ್ರರ ಸುಖವಿರಲಿ ಕಷ್ಟವಿರಲಿ ಅವರೊಂದಿಗೆ ಕೈ ಜೋಡಿಸುವಂತಹ ಮನಸುಳ್ಳ ವ್ಯಕ್ತಿಯಾಗಿದ್ದರು.ಇವರ ಮಡದಿ ಗಾಯಿತ್ರಿ ಸುಧಾಕರ್ ಅವರು ಕೊಣಂದೂರು ಗ್ರಾಮ ಪಂಚಾಯತಿ ಸದಸ್ಯೆಯಾಗಿದ್ದರೆ. ತೀರ್ಥಹಳ್ಳಿ ಬಂಟರ ಸಂಘದ ಕ್ರಿಯಾಶೀಲ ಸದಸ್ಯ ರಾಗಿದ್ದರು ಸುಧಾಕರ ಶೆಟ್ಟಿ ಅವರು,ಸುಮಾರು 60 ವರ್ಷ ವಯಸ್ಸಿನಲ್ಲಿ ಸೋಮವಾರ ಹೃದಯಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು , ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆಂದು ತಿಳಿದುಬಂದಿದೆ. ತಮ್ಮ ‌ಬದುಕಿನಲ್ಲಿ ಸಮಾಜಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಒಳಿತಿಗಾಗಿ ಸದಾ ಚಿಂತಿಸುತಿದ್ದರು ಎನ್ನಲಾಗಿದೆ. ಸುಧಾಕರ ಶೆಟ್ಟಿಯವರು ನಿಧನದಿಂದಾಗಿ ಬಂಟರ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು ಸಂಪೂರ್ಣ ಕೊಣಂದೂರು ಮತ್ತು ಸುತ್ತ ಮುತ್ತಲಿನ ಗ್ರಾಮದಲ್ಲಿ ಸೂತಕದ ಛಾಯೆ ಅವರಿಸಿದೆ ಇಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅಂತಿಮ ವಿಧಿವಿಧಾನಗಳನ್ನು ಕೋಣಂದೂರಿನ ಅವರ ಸ್ವ ಗೃಹದಲ್ಲಿ ನಡೆಸಲಾಯಿತು.ಅಪಾರ ಬಂದು ಮಿತ್ರರ ಸಮ್ಮುಖದಲ್ಲಿ ಸುಧಾಕರ್ ಶೆಟ್ಟಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅವರ ನಿಧನದ ವಿಷಯ ತಿಳಿಯುತ್ತಿದ್ದಂತೆಯೇ ತೀರ್ಥಹಳ್ಳಿ ತಾಲ್ಲೂಕಿನ ಅವರ‌ ಬಂದು ಮಿತ್ರರು ಅಪ್ತರು ಸಹಪಾಠಿಗಳು ಅನೇಕ ಗಣ್ಯರು ಕಂಬನಿ ಮಿಡಿದ್ದಿದ್ದಾರೆ

Leave a Reply

Your email address will not be published. Required fields are marked *

Optimized by Optimole
error: Content is protected !!