ಡಾ.ಪ್ರೀತಮ್ ಬರೆದ ” ಡಯಾಬಿಟಿಸ್ ರಿವರ್ಸಲ್ ” ಪುಸ್ತಕ ಫೆ, 29 ರಂದು ಬಿಡುಗಡೆ

ದಿನಾಂಕ 29-2-24 ಗುರುವಾರ ಬೆಳಗ್ಗೆ 9 ಘಂಟೆಗೆ ಶುಭಂ ಹೋಟೆಲಿನ ಸಭಾಂಗಣದಲ್ಲಿ “ಡಯಾಬಿಟಿಸ್ ರಿವರ್ಸಲ್ – ಸತ್ಯ ಮತ್ತು ಮಿಥ್ಯ” ಡಾ. ಪ್ರೀತಮ್ ಅವರು ಬರೆದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ ಮತ್ತು ಕವಿ ಪ್ರೊಫೆಸರ್ ಹೆಚ್ಎಸ್ ಶಿವಪ್ರಕಾಶ್ ಆಗಮಿಸುತ್ತಿದ್ದಾರೆ. .

ಡಾ.ಪ್ರೀತಮ್ ಬರೆದ ” ಡಯಾಬಿಟಿಸ್ ರಿವರ್ಸಲ್ ” ಪುಸ್ತಕ ಫೆ,29 ರಂದು ಬಿಡುಗಡೆ

 ಶಿವಮೊಗ್ಗ ಜಿಲ್ಲೆಯ ಹೆಸರಾಂತ ವೈದ್ಯರಲ್ಲಿ ಒಬ್ಬರಾದ ಅದರಲ್ಲೂ ಮಧುಮೇಹ ಕಾಯಿಲೆ ಉಳ್ಳ ರೋಗಿಗಳ ಪಾಲಿನ ನೆಚ್ಚಿನ ಡಾಕ್ಟರ್ ಪ್ರೀತಂ ಇವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಧುಮೇಹ ರೋಗಿಗಳಿಗೆ ಅನುಕೂಲಕರ ಆಗುವಂತಹ ಡಯಾಬಿಟೀಸ್ ಸಂಪೂರ್ಣ ಗುಣಪಡಿಸುವಂತ “ಡಯಾಬಿಟೀಸ್ ರಿವರ್ಸಲ್ ಪುಸ್ತಕವನ್ನು ಬರೆದಿದ್ದಾರೆ ಇದೆ ಶುಕ್ರವಾರ 29ನೇ ತಾರೀಖಿನಂದು ಬಿಡುಗಡೆಯಾಗಿ ನಿಮ್ಮ ಕೈ ಸೇರಲಿದೆ.

   ಸ್ವತಃ ಡಯಾಬಿಟೀಸ್ ತಜ್ಞ ವೈದ್ಯರಾಗಿ ಪಡೆದಂತಹ ಅಪಾರ ಅನುಭವವನ್ನು ಕನ್ನಡ ಭಾಷೆಯಲ್ಲಿ ಬರೆದು ಪುಸ್ತಕ ರೂಪದಲ್ಲಿ ಹೊರತರಲಿದ್ದಾರೆ. ಡಯಾಬಿಟೀಸ್ ರೋಗಿಗಳಿಗೆ ನಿಮ್ಮ ಡಯಾಬಿಟೀಸ್ ಕಾಯಿಲೆ ಕಾಯಿಲೆ ಅಲ್ಲ ಅದನ್ನು ಸಂಪೂರ್ಣವಾಗಿ ಗುಣಪಡಿಸುವಂತಹ ಶಕ್ತಿ ಮಧುಮೇಹ ರೋಗಿಗಳ ಕೈಯಿಂದಲೇ ಸಾಧ್ಯ ಎಂಬ ಆಶಾದಾಯಕವಾದ ಸಂದೇಶವನ್ನು ಪುಸ್ತಕ ರೂಪದಲ್ಲಿ ಹೊರತರಲಿದ್ದಾರೆ.

  ಡಯಾಬಿಟೀಸ್ ರೋಗಿಗಳು ಮಾತ್ರವಲ್ಲ ಅವರ ಕುಟುಂಬ ಸದಸ್ಯರೂ ಈ ಪುಸ್ತಕ ಖರೀದಿಸಿ ಓದುವುದು ಅವಶ್ಯಕವಾಗಿದೆ.
ಬಿಡುವಿಲ್ಲದ ವೈದ್ಯ ವೃತ್ತಿಯ ಜೋತೆಗೆ ಬರೆಯುವ ಹವ್ಯಾಸವನ್ನು ಮೈಗೂಡಿಸಿಕೊಂಡಿರುವ ಡಾ.ಪ್ರೀತಮ್ ಮಧುಮೇಹ ರೋಗಿಗಳಿಗಾಗಿ ಅತಿ ಆವಶ್ಯಕತೆ ಇರುವಂತಹ ಒಂದು ಪುಸ್ತಕವನ್ನು ಬರೆದು ಹೊರತರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಅವರು ಬರೆದು ಸದ್ಯದಲ್ಲೇ ಬಿಡುಗಡೆಗೊಳಿಸಿ ಹೊರತರುತ್ತಿರುವ ” ಡಯಾಬಿಟಿಸ್ ರಿವರ್ಸಲ್ ” ಪುಸ್ತಕ ಮಧುಮೇಹ ರೋಗಿಗಳ ಪಾಲಿಗೆ ಸಂಜೀವಿನಿಯಾಗಲಿ ಎನ್ನುವುದೆ ನಮ್ಮ ಆಶಯವಾಗಿದೆ

Leave a Reply

Your email address will not be published. Required fields are marked *

Optimized by Optimole
error: Content is protected !!