ಪ್ರಯಾಣಿಕರು ತುಂಬಿದ ಬಸ್ಸಿನಲ್ಲಿ ಪ್ರಯಾಣಿಸುತ್ತೀರಾ..? ಎಚ್ಚರಿಕೆ..!! ಕಿಲಾಡಿ ಲೇಡಿ ಗ್ಯಾಂಗ್ ಇರೊತ್ತೆ ಮೊಬೈಲ್ ಎಗರಿಸಲು.!!
news.ashwasurya.in
✍️Sudhir Vidhata
ರಾಜಧಾನಿ ಬೆಂಗಳೂರಿನಲ್ಲಿ ಖತರ್ನಾಕ್ ಮೊಬೈಲ್ ಸ್ನಾಚರ್ಸ್ ಲೇಡಿ ಗ್ಯಾಂಗ್ ಬಿಡುಬಿಟ್ಟಿದೆ.! ಮೆಜೆಸ್ಟಿಕ್ ಇವರ ಅಡ್ಡೆಯಾಗಿದೆ.
ಈ ಖದೀಮ ಮಹಿಳೆಯರು ಅಮಾಯಕರ ರೀತಿಯಲ್ಲಿ ರಶ್ ಇರುವ ಬಸ್ ಏರಿ ಹೋಗಿ ಐಟಿಬಿಟಿ ಸೆಕ್ಟರ್ ಏರಿಗಳಲ್ಲಿ ರೌಂಡ್ಸ್ ಹಾಕ್ತಾರೆ.! ಆಧಾರ್ ಕಾರ್ಡ್ ಇದ್ದರೆ ಎಲ್ಲೆಂದರಲ್ಲಿ ಓಡಾಡಲು ಬಸ್ಸು ಫ್ರೀ…ಇದನ್ನೆ ಬಂಡವಾಳ ಮಾಡಿಕೊಂಡ ಕಳ್ಳಿಯರು ಪ್ರಯಾಣಿಕರು ತಬಿದ ಬಸ್‌ಗಳಲ್ಲಿ ತಮ್ಮ ಕೈಚಳಕ ತೋರಿಸಿ ಸೀದಾ ತಮ್ಮ ಮೂಲಸ್ಥಾನಕ್ಕೆ ವಾಪಸ್ ಆಗ್ತಿದ್ರು…!
ಬೆಂಗಳೂರು : ಈ ಮಹಿಳೆಯರು ಹೊರರಾಜ್ಯದಿಂದ ಬಂದು ಬೆಂಗಳೂರು ಹೊರಹೊಲಯದಲ್ಲಿಯ ಮೈದಾನದಲ್ಲಿ ಟೆಂಟ್ ಹಾಕೊಂಡಿದ್ರು. ಪ್ರತಿನಿತ್ಯ ಅಮಾಯಕ ರೀತಿಯಲ್ಲಿ ಬಸ್ ಏರಿ ಬಂದು ಐಟಿಬಿಟಿ ಸೆಕ್ಟರ್ ಏರಿಗಳಲ್ಲಿ ರೌಂಡ್ಸ್ ಮಾಡ್ತಿದ್ರು. ಹೀಗೆ ಪ್ರಯಾಣಿಕರು ತುಂಬಿದ ಬಸ್‌ಗಳಲ್ಲಿ ತಾನು ಕೈಚಳಕ ತೋರಿಸಿ ಸೀದಾ ಊರಿಗೆ ವಾಪಸ್ ಆಗ್ತಿದ್ರು. ಇದೀಗ ಖತರ್ನಾಕ್ ಲೇಡಿ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಅಷ್ಟಕ್ಕೂ ಲೇಡಿ ಗ್ಯಾಂಗ್ ಮಾಡ್ತಿದ್ದ ಕೆಲಸವೇನು ಅಂತ ನೀವೇ ನೋಡಿ..
ಹೀಗೆ ಸಾಲಾಗಿ ಕಲರ್ ಫುಲ್ ಆಗಿ ಜೋಡಿಸಿರೋ ಮೊಬೈಲ್ ಗಳು..ಐಪೋನ್ ಮೊಬೈಲ್ ಗಳ ಜೊತೆಗೆ ಬಾರಿ ಬೆಲೆಬಾಳುವ ಇನ್ನಿತರ ಕಂಪನಿಯ ಆಂಡ್ರಾಯ್ಡ್ ಮೊಬೈಲ್ ಗಳು ಸಹ ಇವೆ. ಈ ಮೊಬೈಲ್ ಗಳನ್ನ ಪರಿಶೀಲಿಸ್ತಿರೋ ಸಿಟಿ ಪೊಲಿಸ್ ಕಮಿಷನರ್… ಅರೆ ಇದೇನಪ್ಪಾ ಮೊಬೈಲ್ ಮೇಳ ನಡಿತಿದ್ಯಾ ಅನ್ಕೊಂಡ್ರಾ..ಇದು ಕಳ್ಳತನ ಮಾಡಿದ್ದ ಮೊಬೈಲ್ ಗಳು ಅಂದ್ರು
ಹೌದು ವೈಟ್ ಫೀಲ್ಡ್ ವಿಭಾಗದ ಐಟಿಬಿಟಿ ಸೆಕ್ಟರ್ ನಲ್ಲಿ ಕೈಚಳಕ ತೋರಿಸಿ ಮೊಬೈಲ್ ಕಳ್ಳತನ ಮಾಡ್ತಿದ್ದ ಖತರ್ನಾಕ್ ಲೇಡಿಗ್ಯಾಂಗ್ ನ್ನ ಮಹದೇವಪುರ ಪೊಲೀಸರು ಸರಿಯಾಗಿ ಭಲೇ ಬಿಸಿ ಬಂಧಿಸಿದ್ದಾರೆ. ಶಂಕ್ರಮ್ಮ, ಸುಜಾತ ಹಾಗೂ ಶಾಂತಮ್ಮ ,ರಾಧ, ನಂದಿನಿ ಬಂಧಿತ ಆರೋಪಿಗಳು. ಈ ಕಿಲಾಡಿ ಲೇಡಿ ಗ್ಯಾಂಗ್ ಎರಡ್ಮೂರು ವರ್ಷಗಳಿಂದ ವೈಟ್ ಫೀಲ್ಡ್, ಮಹದೇವಪುರ ಭಾಗದಲ್ಲಿ ಪ್ರಯಾಣಿಕರು ತುಂಬಿದ ಬಸ್‌ಗಳನ್ನೆ ಟಾರ್ಗೆಟ್ ಮಾಡಿಕೊಂಡು ಬಸ್ಸಿನಲ್ಲಿ ಪ್ರಯಾಣಿಕರಂತೆ ಹಾಗೂ ಕೆಲವು ವೇಳೆ ಭಿಕ್ಷೆ ಬೇಡುವವರಂತೆ ವರ್ತನೆ ಮಾಡ್ತಿದ್ರು. ಜನರು ತುಂಬಿದ ಬಸ್‌ಗಳು ಬರ್ತಿದ್ದಹಾಗೆ ಸೀದಾ ಬಸ್ ಹತ್ತಿ ತಳ್ಳಾಡಿಕೊಂಡು ಕ್ಷಣಾರ್ಧದಲ್ಲಿ ಮೊಬೈಲ್ ಎಗರಿಸಿ ಹಾಗೇ ಬಸ್ ನಿಂದ ಇಳಿದುಬಿಡ್ತಿದ್ರು. ಇದೇ ರೀತಿ ನೂರಾರು ಮೊಬೈಲ್‌ಗಳನ್ನು ಕಳ್ಳತನ ಮಾಡಿ ಅನಂತಪುರಕ್ಕೆ ಸಪ್ಲೈ ಮಾಡ್ತಿದ್ರು.
ಇನ್ನೂ ಈ ಖತರ್ನಾಕ್ ಗ್ಯಾಂಗ್ ಹೊಸಕೋಟೆಯ ಚೊಕ್ಕಹಳ್ಳಿ ಬಳಿ ಟೆಂಟ್ ಹಾಕೊಂಡಿದ್ರು. ಆ ಬಳಿಕ ಅಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡ್ತಿದ್ರು. ಕಳ್ಳತನ ಮಾಡಿದ ಕೂಡಲೇ ಮೊಬೈಲ್ ಗಳನ್ನ ಸಿಲ್ವರ್ ಕವರ್ ನಲ್ಲಿ ಪ್ಯಾಕಿಂಗ್ ಮಾಡಿ, ಬ್ಯಾಗ್ ಗಳಲ್ಲಿ ಇಟ್ಟುಕೊಂಡು ಹೋಗ್ತಿದ್ರು. ಹಾಗೇ ವಾರಕ್ಕೊಮ್ಮೆ ಅನಂತಪುರದಿಂದ ಬರ್ತಿದ್ದ ವ್ಯಕ್ತಿಗೆ ಮಾರಾಟ ಮಾಡ್ತಿದ್ದದ್ದು ಬೆಳಕಿಗೆ ಬಂದಿದೆ. ಸದ್ಯ ಲೇಡಿಗ್ಯಾಂಗ್ ನಿಂದ ಮೂವತ್ತು ಲಕ್ಷ ಮೌಲ್ಯದ 120 ಮೊಬೈಲ್ ಗಳನ್ನ ಮಹದೇವಪುರ ಠಾಣೆಯ ಪೊಲೀಸರು ಜಪ್ತಿ ಮಾಡಿದ್ದಾರೆ.
ಇನ್ನೂ ಪ್ರಮುಖ ಆರೋಪಿ ರಾಧ ಸುಲಭವಾಗಿ ಹೆಚ್ಚು ಹಣ ಮಾಡುವ ಸಲುವಾಗಿ ಗ್ಯಾಂಗ್ ಮಾಡಿಕೊಂಡು ಹೆಚ್ಚು ಮೊಬೈಲ್ ಗಳನ್ನು ಕಳ್ಳತನ ಮಾಡಿಸ್ತಿದ್ಲು. ಸದ್ಯ ಅನಂತಪುರಂ ಗೆ ತೆರಳಿರೋ ಪೊಲೀಸರು ಮೊಬೈಲ್ ಗಳನ್ನ ಕಳ್ಳಿಯರಿಂದ ತೆಗೆದುಕೊಳ್ಳುತ್ತಿದ್ದವನಿಗಾಗಿ ಭಲೇ ಬಿಸಿದ್ದಾರೆ. ಜೊತೆಗೆ ಐದು ಮಂದಿಯ ಲೇಡಿ ಗ್ಯಾಂಗ್ ಅನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.