IND vs ENG: ಭಾರತ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್; ಭಾವುಕರಾದ ತಂದೆ ಮತ್ತು ಪತ್ನಿ.!

ವಿಶ್ವ ಕ್ರಿಕೆಟ್ ನ ದಂತಕಥೆ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರಿಂದ ಭಾರತ ಕ್ರಿಕೆಟ್ ತಂಡದ ಟೆಸ್ಟ್ ಕ್ಯಾಪ್ ಪಡೆದ ಸರ್ಫರಾಜ್

IND vs ENG: ಭಾರತ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್; ಭಾವುಕರಾದ ತಂದೆ ಮತ್ತು ಪತ್ನಿ

News.Ashwasurya.in

ದೇಶಿ ಕ್ರಿಕೆಟ್‌ನಲ್ಲಿ ತನ್ನದೇ ಸಾರ್ವಭೌಮತ್ವ ಹೊಂದಿದ್ದ ಉತ್ತಮ ಆಟಗಾರ ಸರ್ಫರಾಜ್‌ ಖಾನ್‌ ಅವರು. ಕೊನೆಗೂ ಸರ್ಫರಾಜ್ ಖಾನ್ ಅವರಿಗೆ ಅದೃಷ್ಟದ ಬಾಗಿಲು ತೆರೆದಿತ್ತು ಹೆತ್ತ ತಂದೆಯು ಮಗನಿಗಾಗಿ ಪಟ್ಟ ಶ್ರಮ ಕಂಡ ಕನಸು ಫಲ ನೀಡಿತ್ತು ಭಾರತ ಪ್ರವಾಸದಲ್ಲಿರುವ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 3ನೇ ಪಂದ್ಯದ ಮೂಲಕ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ ಸರ್ಫರಾಜ್ ಖಾನ್!

ಭಾರತ ತಂಡದ ಶ್ರೇಷ್ಠ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ಕೈಯಿಂದ ಟೆಸ್ಟ್ ಕ್ಯಾಪ್ ಪಡೆದ ಸರ್ಫರಾಜ್‌ ಖಾನ್‌ ಅವರನ್ನು ನೋಡಿ ಅಲ್ಲೆ ಇದ್ದ ಅವರ ತಂದೆ ಭಾವುಕರಾಗಿದ್ದರು.  ನೌಶಾದ್ ಖಾನ್ ಅವರ ತಂದೆ ಮಗನನ್ನು ಕ್ರೀಡಾಂಗಣದ ಅಂಗಳದಲ್ಲೆ ತಬ್ಬಿಕೊಂಡು ಮುತ್ತು ಕೊಟ್ಟರು.

ಸೂರ್ಯಕುಮಾರ್ ಯಾದವ್ ಇಲ್ಲದಿದ್ದರೆ, ಬಹುಶಃ ಸರ್ಫರಾಜ್ ಖಾನ್ ಅವರ ತಂದೆ ತಮ್ಮ ಮಗ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಪದಾರ್ಪಣೆ ಮಾಡುವಾಗ ಅನಿಲ್ ಕುಂಬ್ಳೆ ಅವರಿಂದ ಟೆಸ್ಟ್ ಕ್ಯಾಪ್ ತೆಗೆದುಕೊಳ್ಳುವುದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ.


ಕೆ. ಎಲ್‌ ರಾಹುಲ್‌ ಅವರು ಗಾಯಗೊಂಡು ಹೊರಬಿದ್ದಿರುವುದರಿಂದ ಸರ್ಫರಾಜ್‌ ಖಾನ್‌ ಅವರಿಗೆ ಅವಕಾಶ ಬಾಗಿಲು ತೆರೆದಿತ್ತು.


ಶ್ರೀಕರ್‌ ಭರತ್‌ ಅವರ ಬದಲು ಸ್ಥಾನ ಪಡೆದಿರುವ ವಿಕೆಟ್‌ಕೀಪರ್ ಧ್ರುವ ಜುರೇಲ್ ಅವರೊಂದಿಗೆ ಸರ್ಫರಾಜ್‌ ಖಾನ್‌‌ ಕುಂಬ್ಳೆ ಅವರಿಂದ ಟೆಸ್ಟ್‌ ಕ್ಯಾಪ್‌ ಅನ್ನು ಪಡೆದ ನಂತರ ಭಾವುಕರಾಗಿ ತಮ್ಮ ಮಡದಿಯನ್ನು ತಬ್ಬಿಕೊಂಡ ಸರ್ಫರಾಜ್‌ ಖಾನ್‌ ಟೆಸ್ಟ್‌ ಕ್ಯಾಪ್‌ ಅನ್ನು ಪಡೆದ ನಂತರ ಭಾವುಕರಾಗಿ ತಮ್ಮ ತಾಯಿಯನ್ನು ತಬ್ಬಿಕೊಂಡಿದ್ದರು ಸರ್ಫರಾಜ್‌ ಖಾನ್‌ ಅವರು 2019–20ರ ರಣಜಿ ಟೂರ್ನಿಯಲ್ಲಿ ಮುಂಬೈ ಪರ ಆಡಿದ 6 ಪಂದ್ಯಗಳ 9 ಇನಿಂಗ್ಸ್‌ಗಳಿಂದ 928 ರನ್‌ ಗಳಿಸಿದ್ದರು. 2021–22ರ ಆವೃತ್ತಿಯಲ್ಲಿ 6 ಪಂದ್ಯಗಳ 9 ಇನಿಂಗ್ಸ್‌ಗಳಲ್ಲಿ 982 ರನ್‌ ಗಳಿಸಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ್ದ, ಖಾನ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಬೇಕು ಎಂಬ ಒತ್ತಡವಿತ್ತು. ಜೋತೆಗೆ ಅವರ ಶ್ರೇಷ್ಠ ಆಟಕ್ಕೆ ಕೊನೆಗೂ ಭಾರತ ತಂಡದಲ್ಲಿ ಆವಕಾಶ ಒಲಿದು ಬಂದಿತ್ತು

ಮಡದಿಯ ಆನಂದ ಭಾಷ್ಪದ ಕಣ್ಣಿರು ಒರೆಸಿತ್ತಿರುವ ಸರ್ಫರಾಜ್

ಸರ್ಫರಾಜ್ ಅರ್ಧಶತಕ ಗಳಿಸಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾವನ ಜೋತೆಗೆ ಕುಳಿತಿದ್ದ ಸರ್ಫರಾಜ್ ಪತ್ನಿ ರೋಮಾನಾ ಜಹೂರ್ ರಿಯಾಕ್ಷನ್ ಹೇಗಿತ್ತು ನೀವೆ‌ ನೋಡಿ… ವೈರಲ್ ಅದ ವಿಡಿಯೋ...

4 ಗಂಟೆಗಳ ಕಾಲ ಮೌನಕ್ಕೆ ಶರಣಾದ ಸರ್ಫರಾಜ್!

ಭಾರತ ಇಂಗ್ಲೆಂಡ್ ತಂಡದ ನಡುವಿನ ಪಂದ್ಯದಲ್ಲಿ ಸರ್ಫರಾಜ್ ಜಡೇಜಾ ಮಾಡಿದ ಎಡವಟ್ಟಿನಿಂದ ರನ್ ಔಟ್ ಆಗಿದ್ದರು ಈ ಕುರಿತಂತೆ ಮಾತನಾಡಿದ ಸರ್ಫರಾಜ್ ಕ್ರಿಕೆಟ್‌ನಲ್ಲಿ ಸಂವಹನದ ಕೊರತೆ ಆಗುವುದು ಸಹಜ ಕೆಲವೊಮ್ಮೆ ನೀವು ರನ್ ಔಟ್ ಆಗುತ್ತೀರಿ ಮತ್ತು ಕೆಲವೊಮ್ಮೆ ನೀವು ರನ್ ಗಳಿಸುತ್ತೀರಿ. ಇನ್ನು, ನಾನು ಬ್ಯಾಟಿಂಗ್​ ಮಾಡುವಾಗ ಹೆಚ್ಚು ಮಾತನಾಡುತ್ತೇನೆ.
ಚೊಚ್ಚಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅದ್ಭುತ ಅರ್ಧಶತಕ ಸಿಡಿಸಿದ್ದ ಸರ್ಫರಾಜ್ ಖಾನ್, ಮೊದಲ ದಿನದಾಟದ ಅಂತ್ಯದ ನಂತರ, ತನ್ನ ತಂದೆಯ ಮುಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಬೇಕೆಂಬ ಕನಸು ಈಗ ಈಡೇರಿದೆ ಎಂದು ಹೇಳಿದ್ದಾರೆ. ತನ್ನ ತಂದೆಯ ಕನಸು ನಾನು ಭಾರತಕ್ಕಾಗಿ ಆಡಬೇಕಾಗಿತ್ತು ಆದರೆ ಇದೀಗ ಆ ಕನಸು ಈಡೇರಿದೆ.


ಸರ್ಫರಾಜ್ ತಮ್ಮ ಚೊಚ್ಚಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡುವ ಹಾದಿಯಲ್ಲಿದ್ದರು ಆದರೆ ಅಜೇಯ ಶತಕ ಗಳಿಸಿದ ರವೀಂದ್ರ ಜಡೇಜಾ ಅವರೊಂದಿಗಿನ ತಪ್ಪು ತಿಳುವಳಿಕೆಯಿಂದಾಗಿ ಸರ್ಫರಾಜ್ ರನ್ ಔಟ್ ಆದರು. ಟೆಸ್ಟ್‌ನ ಮೊದಲ ದಿನದ ಅಂತ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸರ್ಫರಾಜ್ ಖಾನ್ ನಾನು ಸುಮಾರು ನಾಲ್ಕು ಗಂಟೆಗಳ ಕಾಲ ಪ್ಯಾಡ್‌ನೊಂದಿಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿದ್ದೆ.
ಕ್ರಿಕೆಟ್ ಬದುಕಿನಲ್ಲಿ ಆವಕಾಶಕ್ಕಾಗಿ ಇಷ್ಟು ದಿನ ತಾಳ್ಮೆಯಿಂದ ಕಾದಿದ್ದೇನೆ ಇನ್ನೂ ಸ್ವಲ್ಪ ದಿನ ತಾಳ್ಮೆಯಿಂದ ಇರಲು ತೊಂದರೆ ಇಲ್ಲ ಎಂದು ಯೋಚಿಸುತ್ತಿದ್ದೆ. ಕ್ರೀಸ್‌ಗೆ ಬಂದ ನಂತರ, ಮೊದಲ ಕೆಲವು ಎಸೆತಗಳಲ್ಲಿ ನಾನು ನರ್ವಸ್ ಆಗಿದ್ದೆ. ಆದರೆ ನಾನು ತುಂಬಾ ಅಭ್ಯಾಸ ಮಾಡಿದ್ದೇನೆ ಮತ್ತು ಕಷ್ಟಪಟ್ಟಿದ್ದೇನೆ ನನ್ನ ತಂದೆಯ ಮುಂದೆ ಭಾರತಕ್ಕಾಗಿ ಆಡುವುದಕ್ಕಿಂತ ರನ್ ಮತ್ತು ಪ್ರದರ್ಶನ ಮುಖ್ಯವಲ್ಲ ಎಂದು ಸರ್ಫರಾಜ್ ಹೇಳಿದರು


ಸರ್ಫರಾಜ್ ಖಾನ್ ಪ್ರಕಾರ, ‘ಭಾರತಕ್ಕಾಗಿ ಆಡುವುದು ನನ್ನ ತಂದೆಯ ಕನಸಾಗಿತ್ತು ಆದರೆ ದುರದೃಷ್ಟವಶಾತ್ ಕೆಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಭಾರತಕ್ಕಾಗಿ ಆಡುವ ದೊರೆತಿದೆ ಇದು ನನ್ನ ಜೀವನದ ಮರೆಯಲಾಗದ ಕ್ಷಣ. ನನ್ನ ತಂದೆಯ ಮುಂದೆ ಭಾರತಕ್ಕಾಗಿ ಆಡಿದ ಖುಷಿಯಷ್ಟೆ ನನಗಿತ್ತು ರನ್‌ಗಳು ಮತ್ತು ಪ್ರದರ್ಶನ ನನ್ನ ಮನಸ್ಸಿನಲ್ಲಿ ಇರಲಿಲ್ಲ.
ಜೊತೆಗೆ ನಾನು ಅವರ ಮುಂದೆ ನಾನು ಅಂತರರಾಷ್ಟ್ರೀಯ ಮಟ್ಟದ ಶ್ರೇಷ್ಠ ಹಿರಿಯ ಕ್ರಿಕೆಟಿಗ ದಂತಕಥೆ ಅನಿಲ್ ಕುಂಬ್ಳೆ ಅವರಿಂದ ಟೆಸ್ಟ್ ಕ್ಯಾಪ್ ತೆಗೆದುಕೊಂಡಾಗ ಅವರು ತುಂಬಾ ಭಾವುಕನಾಗಿದ್ದರು ಮತ್ತು ನನ್ನ ಹೆಂಡತಿಯೂ ಸಹ ಎಂದು ಹೇಳಿದ್ದಾರೆ. ಆರಂಭದಲ್ಲಿ ನರ್ವಸ್ ಆಗಿದ್ದ ಸರ್ಫರಾಜ್, ಬಳಿಕ ವೇಗವಾಗಿ ರನ್​ ಗಳಿಸಿದರು. ಅಲ್ಲದೇ ಇದೇ ವೇಳೆ ತಮ್ಮ ರನೌಟ್ ಬಗ್ಗೆ ಮಾತನಾಡಿದ ಸರ್ಫರಾಜ್​ಅದು ಸಂವಹನದ ಕೊರತೆ’ ಎಂದು ಹೇಳಿದರು.


ಇದು ಆಟದ ಭಾಗವಾಗಿದೆ. ಕ್ರಿಕೆಟ್‌ನಲ್ಲಿ ಸಂವಹನದ ಕೊರತೆ ಆಗುವುದು ಸಹಜ ಕೆಲವೊಮ್ಮೆ ನೀವು ರನ್ ಔಟ್ ಆಗುತ್ತೀರಿ ಮತ್ತು ಕೆಲವೊಮ್ಮೆ ನೀವು ರನ್ ಗಳಿಸುತ್ತೀರಿ. ಇನ್ನು ನಾನು ಬ್ಯಾಟಿಂಗ್​ ಮಾಡುವಾಗ ಹೆಚ್ಚು ಮಾತನಾಡುತ್ತೇನೆ. ಅದಕ್ಕಾಗಿ ಜಡೇಜಾ ಅವರ ಬಳಿ ಹೋಗಿ ಬ್ಯಾಟಿಂಗ್​ ಮಾಡುವಾಗ ನನ್ನ ಬಳಿ ಮಾತನಾಡುತ್ತಿರಿ ಎಂದು ಹೇಳಿದ್ದೆ. ಅವರೂ ಸಹ ನನ್ನ ಬ್ಯಾಟಿಂಗ್​ ಮಾಡುವ ಸಂಧರ್ಭದಲ್ಲಿ ನನಗೆ ಸ್ಫೂರ್ತಿಯಾಗಿದ್ದರು ನಾನು ನರ್ವಸ್ ಅದಾಗ ಬಳಿ ಬಂದು ಸಾಕಷ್ಟು ಧೈರ್ಯ ತುಂಬಿದ್ದರು ಎಂದು ಹೇಳಿದ್ದಾರೆ.

ಇತ್ತ ಈ ರನೌಟ್ ವಿವಾದ ಬಳಿಕ ರವೀಂದ್ರ ಜಡೇಜಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಸರ್ಫರಾಜ್‌ಗೆ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಸರ್ಫರಾಜ್ ಅವರ ಇನ್ನಿಂಗ್ಸ್ ಅನ್ನು ಶ್ಲಾಘಿಸಿದ್ದಾರೆ. ಮೊದಲ ಬಾರಿಗೆ ಮೈದಾನಕ್ಕೆ ಬಂದು ನನ್ನ ತಂದೆಯ ಮುಂದೆ ಕ್ಯಾಪ್ ತೆಗೆದುಕೊಂಡಿದ್ದು ಸ್ಮರಣೀಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.
ಅವರು ನನ್ನ ಕ್ರಿಕೆಟ್ ತರಬೇತಿ ಆರಂಭಿಸಿದಾಗ ನನಗೆ ಆರು ವರ್ಷ. ಅವರ ಮುಂದೆ ಭಾರತ ತಂಡದಲ್ಲಿ ಆಡುವುದು ನನ್ನ ಕನಸಾಗಿತ್ತು. ಆ ಕನಸು ಇಂದು ನೆರವೇರಿದೆ. ಇದು ತುಂಬಾ ಸಂತಸದ ಸಂಗತಿ ಎನ್ನಬಹುದು ಎಂದು ಸರ್ಫರಾಜ್​ ಮುಕ್ತವಾಗಿ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!