Fire Accident in Shivamogga: ಹುಂಡೈ ಶೋರೂಮ್‌ನಲ್ಲಿ ಭೀಕರ ಅಗ್ನಿ ಅವಘಡ,ಕೋಟ್ಯಾಂತರ ರೂಪಾಯಿ ಮೊತ್ತದ ಕಾರುಗಳು ಸುಟ್ಟು ಕರಕಲು

Fire Accident in Shivamogga: ಹುಂಡೈ ಶೋರೂಮ್‌ನಲ್ಲಿ ಭೀಕರ ಅಗ್ನಿ ಅವಘಡ,ಕೋಟ್ಯಾಂತರ ರೂಪಾಯಿ ಮೊತ್ತದ ಕಾರುಗಳು ಸುಟ್ಟು ಕರಕಲು

news.ashwasurya.in

ಶಿವಮೊಗ್ಗ: ಹುಂಡೈ ಶೋರೂಮ್‌ನಲ್ಲಿ ಶುಕ್ರವಾರ ಹತ್ತು ಗಂಟೆ‌ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ಬೆಂಕಿಯ ದಳ್ಳುರಿ ಮುಗಿಲು ಮುಟ್ಟಿತ್ತು ಈ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಶಂಕರಮಠ ರಸ್ತೆಯಲ್ಲಿರುವ ಶಿವಮೊಗ್ಗದ ಹುಂಡೈ ಶೋರೂಮ್‌ನಲ್ಲಿ ಈ ಅಗ್ನಿ ಅವಘಡ ಉಂಟಾಗಿದ್ದು,

ಬೇಸ್ಮೆಂಟ್‌ಗೆ ತಗುಲಿದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟ ಘಟನೆ ನಡೆದಿದೆ. ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದರು. ಇದಕ್ಕಾಗಿ ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು
30ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಭದ್ರಾವತಿ, ತರೀಕೆರೆ, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಮಿಸಿದ ಅಗ್ನಿಶಾಮಕ ದಳದ ವಾಹನಗಳು ಮತ್ತು ‌ಸಿಬ್ಬಂದಿ ಬೆಂಕಿ ನಂದಿಸಲು ಸಹಕರಿಸಿದರು. ಈ ವೇಳೆ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಶೋರೂಮ್ ಸಿಬ್ಬಂದಿಗಳು ಕೂಡ ಕೈ ಜೋಡಿಸಿದರು.


ಶಿವಮೊಗ್ಗ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಅವರು ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲೆ ಇದ್ದು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದರು. ಆರಂಭದಲ್ಲಿ ಅಗ್ನಿ ಅವಘಡ ಕಾರ್ಯಾಚರಣೆಗೆ ಕೇವಲ ಮೂರ್ನಾಲ್ಕು ವಾಹನ ಬಳಕೆ ಮಾಡಿದ್ದಕ್ಕೆ ಹುಂಡೈ ಶೋರೂಮ್ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ ಸಿಟಿ ದೊಡ್ಡದಾಗಿ ಬೆಳೆದಿದ್ದರೂ ಕೂಡ ತಕ್ಕ ಅಗ್ನಿಶಾಮಕ ವಾಹನಗಳ ಬಳಕೆ ಆಗುತ್ತಿಲ್ಲ ಎಂದು ಕಿಡಿಕಾರಿದರು.
ಇನ್ನು ನೀರಿನ ಕೊರತೆಯಿಂದಾಗಿ ಬೆಂಕಿ ನಂದಿಸುವ ಕಾರ್ಯ ತಡವಾಯಿತು ಎಂದು ಶೋರೂಮ್ ಸಿಬ್ಬಂದಿ ಆರೋಪಿಸಿದರು. ಈ ವೇಳೆ ಸವಾಲಿನ ನಡುವೆಯೇ ಬೆಂಕಿಯನ್ನು ನಿಯಂತ್ರಿಸಲಾಯಿತು ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ತಿಳಿಸಿದರು. ಅಲ್ಲದೇ, ಅಗ್ನಿಶಾಮಕ ದಳದ ಸಿಬ್ಬಂದಿ ಜೀವದ ಹಂಗು ತೊರೆದು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಸದ್ಯ ಶೋ ರೂಂ ನಲ್ಲಿ ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ ಎಂಬುದು ತಿಳಿದಿಲ್ಲ, ಮಾಲೀಕರ ಹೇಳಿಕೆ ಹಾಗೂ ತನಿಖೆಯಿಂದಷ್ಟೇ ವಾಸ್ತವ ಇನ್ನಷ್ಟೇ ತಿಳಿದು ಬರಲಿದೆ. ಘಟನೆಯಲ್ಲಿ ಶೋರೂಮ್‌ನಲ್ಲಿರುವ ವಿವಿಧ ವಸ್ತುಗಳು ಸುಟ್ಟು ಭಸ್ಮವಾಗಿವೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದರು.

Leave a Reply

Your email address will not be published. Required fields are marked *

Optimized by Optimole
error: Content is protected !!