ಸ್ಥಳ ಮಹಜರಿಗೆ ಕಬ್ಬಿನಾಲೆಗೆ ನಕ್ಸಲ್ ಶ್ರೀಮತಿಯನ್ನು ಕರೆತಂದ ಶೃಂಗೇರಿಯ ಪೊಲೀಸರು!

ಪೋಲಿಸರ ಬಂಧನದಲ್ಲಿರುವ ನಕ್ಸಲ್ ಶ್ರೀಮತಿ

ಸ್ಥಳ ಮಹಜರಿಗೆ ಕಬ್ಬಿನಾಲೆಗೆ ನಕ್ಸಲ್ ಶ್ರೀಮತಿಯನ್ನು ಕರೆತಂದ ಶೃಂಗೇರಿಯ ಪೊಲೀಸರು!

news.ashwasurya.in

FLASH BACK : ನವೆಂಬರ್ 7, 2023 ರಂದು ನಕ್ಸಲರ ತಂಡದ ಸದಸ್ಯರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದ ನಂತರ ಶೃಂಗೇರಿ ತಾಲೂಕಿನ ಬೆಳಗೋಡುಕೊಡಿಗೆಯ ಶ್ರೀಮತಿ ಮತ್ತು ತಮಿಳುನಾಡಿನ ಮತ್ತೊಬ್ಬ ನಕ್ಸಲ್ ಚಂದ್ರು ಅವರನ್ನು ಕೇರಳದ ವೈನಾಡಿನಲ್ಲಿ ಪೊಲೀಸರು ಬಂಧಿಸಿದ್ದರು.
ನಂತರದಲ್ಲ 2011ರ ಡಿಸೆಂಬರ್‌ನಲ್ಲಿ ಉಡುಪಿ ಜಿಲ್ಲೆ ಹೆಬ್ರಿಯ ಕಬ್ಬಿನಾಲೆ ಬಳಿ ನಡೆದಿದ್ದ ಸದಾಶಿವ ಗೌಡ ಎಂಬುವವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ಮಾಡಲು ನಕ್ಸಲ್ ಮಹಿಳೆ ಶ್ರೀಮತಿ ಅಲಿಯಾಸ್ ಉಣ್ಣಿಮಯ ಅವರನ್ನು ಬಾಡಿ ವಾರೆಂಟ್ ಪಡೆದು ಕಬ್ಬಿನಾಲೆಗೆ ಕಾರ್ಕಳ ಪೊಲೀಸರು ಕರೆತಂದರು.
ನವೆಂಬರ್ 7, 2023 ರಂದು ನಕ್ಸಲ್ ತಂಡದ ಸದಸ್ಯರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದ ನಂತರ ಶೃಂಗೇರಿ ತಾಲೂಕಿನ ಬೆಳಗೋಡುಕೊಡಿಗೆಯ ಶ್ರೀಮತಿ ಮತ್ತು ತಮಿಳುನಾಡಿನ ಮತ್ತೊಬ್ಬ ನಕ್ಸಲ್ ಚಂದ್ರು ಅವರನ್ನು ಕೇರಳದ ವೈನಾಡಿನಲ್ಲಿ ಪೊಲೀಸರು ಬಂಧಿಸಿದ್ದರು. ಗುರುವಾರ ಶ್ರೀಮತಿ ಅವರನ್ನು ಕಾರ್ಕಳದ ನ್ಯಾಯಾಲಯಕ್ಕೆ ಕರೆತಂದಾಗ ಅವರು, ಮಾವೋವಾದ ಪರವಾಗಿ ಘೋಷಣೆ ಕೂಗಿದ್ದರು. 28 ವರ್ಷದ ಶ್ರೀಮತಿ ಕೇರಳದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಫೆಬ್ರವರಿ 13 ರಂದು ರಾತ್ರಿ ಪೊಲೀಸರು ಬಿಗಿ ಭದ್ರತೆಯ ನಡುವೆ ಕಾರ್ಕಳಕ್ಕೆ ಕರೆತಂದರು. ಫೆ.14ರಂದು ಆಕೆಯನ್ನು ಕಾರ್ಕಳದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕಾರ್ಕಳ ನ್ಯಾಯಾಲಯ ಆಕೆಯನ್ನು ಫೆಬ್ರವರಿ 17ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.

2011ರ ಡಿ.19ರಂದು ನಾಪತ್ತೆಯಾಗಿದ್ದ ತಿಂಗಳಮಕ್ಕಿಯ ಬಿದಿರು ಬುಟ್ಟಿ ನೇಯುವ ಸದಾಶಿವಗೌಡ ಅವರ ಮೃತದೇಹ 2011ರ ಡಿ.28ರಂದು ಪತ್ತೆಯಾಗಿತ್ತು. ಸದಾಶಿವಗೌಡ ಪೊಲೀಸ್‌ ಮಾಹಿತಿದಾರನೆಂದು ಶಂಕಿಸಲಾಗಿದ್ದು ಆತನನ್ನು ಗುರಿಯಾಗಿಸಲಾಗಿದೆ. ಸದಾಶಿವ ಗೌಡ ಅವರ ಮೃತದೇಹದ ಪಕ್ಕದಲ್ಲಿ ‘ಪೊಲೀಸ್ ಮಾಹಿತಿದಾರರಿಗೆ ತಕ್ಕ ಶಿಕ್ಷೆಯಾಗಲಿದೆ- ಮಾವೋವಾದಿಗಳು ಎಂಬ ಪೋಸ್ಟರ್ ಇತ್ತು. 50 ವರ್ಷ ವಯಸ್ಸಿನ ಸದಾಶಿವ ಗೌಡ ಅವರ ಮೃತದೇಹ ಮರದ ಕೆಳಗೆ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೈಗಳನ್ನು ಕಾಂಡಕ್ಕೆ ಕಟ್ಟಲಾಗಿತ್ತು.
ಸದಾಶಿವ ಗೌಡ ಅವರನ್ನು ಶ್ರೀಮತಿ ಒಳಗೊಂಡ ನಕ್ಸಲ್ ತಂಡ ಅಪಹರಿಸಿ ಹತ್ಯೆಗೈದಿರುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿತ್ತು. ಶ್ರೀಮತಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪುಟ್ಟೇಗೌಡ ಮತ್ತು ಗಿರಿಜಾ ಅವರ ಪುತ್ರಿ ಶ್ರೀಮತಿಗೆ ಒಬ್ಬ ಸಹೋದರಿ ಮತ್ತು ಇಬ್ಬರು ಸಹೋದರರು ಇದ್ದಾರೆ. 2009ರಲ್ಲಿ ತಣಿಕೋಡು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಗೆ ಹಾನಿ ಮಾಡಿದ ಆರೋಪ ಹಾಗೂ ಶೃಂಗೇರಿಯ ಮಾಥೊಳ್ಳಿಯಲ್ಲಿ ಪೊಲೀಸರ ಮೇಲೆ ಮಾರಕಾಸ್ತ್ರಗಳನ್ನು ಎಸೆದು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವಂತೆ ಜನರಿಗೆ ಕರೆ ನೀಡಿದ ಆರೋಪವೂ ಅವರ ಮೇಲಿದೆ.
ಆ‌ ಸಂಧರ್ಭದಲ್ಲಿ ಘಟನೆಯಲ್ಲಿ ಇಬ್ಬರೂ ಪೊಲೀಸರು ಗಾಯಗೊಂಡಿದ್ದರು. ಕೇಲವು ವರ್ಷಗಳ ಹಿಂದೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಗಳು ಹೆಚ್ಚಿದ್ದವು. 2008ರ ಮೇ 15ರಂದು ನಾಡ್ಪಾಲುವಿನಲ್ಲಿ ಶಿಕ್ಷಕ ಭೋಜ ಶೆಟ್ಟಿ ಹಾಗೂ ಆತನ ಸಂಬಂಧಿ ರಾಜೇಶ್ ಶೆಟ್ಟಿಯನ್ನು ನಕ್ಸಲೀಯರು ಕೊಂದಿದ್ದರು. 2008ರ ಡಿಸೆಂಬರ್ 7ರಂದು ಭೂಮಾಲೀಕ ಹಾಗೂ ಬಿಜೆಪಿ ಮುಖಂಡ ಕೇಶವ ಯಡಿಯಾಲ ಎಂಬಾತನನ್ನು ಕೊಂದಿದ್ದರು. 2009ರಲ್ಲಿ ಗ್ರಾಮ ಪಂಚಾಯಿತಿ ಅಭ್ಯರ್ಥಿ ಹಾಗೂ ಸಿಬ್ಬಂದಿಯನ್ನು ನಕ್ಸಲೀಯರು ಅಪಹರಿಸಿದ್ದರು.
ಸಾಕಷ್ಟು ಪ್ರಕರಣದಲ್ಲಿ ಬೇಕಾಗಿದ್ದ ಶ್ರೀಮತಿಯನ್ನು ಉಡುಪಿ , ಕಾರ್ಕಳ ಮತ್ತು ಶೃಂಗೇರಿ ಪೋಲಿಸರು ತಮ್ಮ ‌ವ್ಯಾಪ್ತಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಡಿ ವಾರಟ್ ಪಡೆದು ಆಕೆಯನ್ನು ಸುಪರ್ದಿಗೆ ಪಡೆದು ಪ್ರಕರಣಗಳಿಗೆ ಸಂಬಂದಿಸಿದಂತೆ ಸ್ಥಳ ಮಹಜರು ಮಾಡುತ್ತಿದ್ದಾರೆ.

ಕೇರಳದಲ್ಲಿ ಬಂಧನವಾಗಿದ್ದ ಶೃಂಗೇರಿಯ ನಕ್ಸಲ್ ಶ್ರೀಮತಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಪಡೆದ ಪೋಲಿಸರು

ಚಿಕ್ಕಮಗಳೂರು:ಕೇರಳದಲ್ಲಿ ಸೆರೆ ಸಿಕ್ಕ ಶೃಂಗೇರಿ ಮೂಲದ ನಕ್ಸಲ್ ಶ್ರೀಮತಿಯ‌ ಮೇಲೆ ಈ ಹಿಂದೆಯೇ ಸಾಕಷ್ಟು ಪ್ರಕರಣಗಳು ದಾಖಲಾಗಿದೆ. ಕರಪತ್ರ ಹಂಚಿಕೆ, ಸರ್ಕಾರಿ ಆಸ್ತಿ ನಷ್ಟ, ವಿದ್ವಂಸಕ ಕೃತ್ಯಕ್ಕೆ ಕ್ಕೆ ಸಂಚು ರೂಪಿಸಿದ ಆರೋಪದಲ್ಲಿದ್ದ ಕೇರಳದಲ್ಲಿ ಬಂಧನಕ್ಕೊಳಗಾಗಿದ್ದ ಚಿಕ್ಕಮಗಳೂರಿನ ನಕ್ಸಲ್ ಶ್ರೀಮತಿಗೆ ಎನ್.ಆರ್.ಪುರ ನ್ಯಾಯಾಲಯದಿಂದ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶ್ರೀಮತಿ ಮೇಲೆ ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿ ನಷ್ಟ, ವಿದ್ವಂಸಕ ಕೃತ್ಯದ ಸಂಚು, ಆಯುಧಗಳನ್ನ ಬಳಕೆ, ಟೆಂಟ್ ಹಾಕಿದ್ದು, ಗನ್‌ ತೋರಿಸಿ ಬೆದರಿಸಿ ಸುಲಿಗೆ ಪೊಲೀಸರಿಗೆ ಸಹಕಾರ ಮಾಡದಂತೆ ಬೆದರಿಕೆ ಸೇರಿದಂತೆ ಸುಮಾರು 9ಕ್ಕೂ ಹೆಚ್ಚು ಪ್ರಕರಣಗಳು ಶ್ರೀಮತಿ ಮೇಲಿತ್ತು ಎನ್ನಲಾಗಿದೆ.
ಅದರಂತೆ ಶ್ರೀಮತಿ ಅವರನ್ನು ಕೇರಳದಲ್ಲಿ ಬಂಧಿಸಿ ಕಾರ್ಕಳ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು ಇದೀಗ ಕಾರ್ಕಳ ಪೊಲೀಸರಿಂದ ಶೃಂಗೇರಿ ಪೊಲೀಸರು ವಶಕ್ಕೆ ಪಡೆದು ಎನ್.ಆರ್.ಪುರ ಕೋರ್ಟಿಗೆ ಹಾಜರುಪಡಿಸಿದ್ದರು ಈ ವೇಳೆ ಶ್ರೀಮತಿಯನ್ನು ಇನ್ನಷ್ಟು ವಿಚಾರಣೆಯ ಸಲುವಾಗಿ 14 ದಿನ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆಯಂತೆ.

BREAKING NEWS : ಕೇರಳದ ಪೋಲಿಸರು ನಕ್ಸಲರ ಬೇಟೆಗೆ ನಿಂತಿದ್ದಾರ.! ಮತ್ತೊಬ್ಬ ಮೋಸ್ಟ್ ವಾಂಟೆಡ್ ಮೂಡಿಗೆರೆ ಮೂಲದ ಅಂಗಡಿ ಗ್ರಾಮದ ʻನಕ್ಸಲ್ ಸುರೇಶ್ ಕೇರಳ ಪೋಲಿಸರ ವಶಕ್ಕೆ.

ಕಣ್ಣೂರು : ಪ್ರಮುಖ ನಕ್ಸಲ್‌ ಮುಖಂಡ ಸುರೇಶ್‌ ನನ್ನು ಕೇರಳದ ಕಣ್ಣೂರಿನಲ್ಲಿ ಕೇರಳದ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.


ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ಸುರೇಶ್ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಈ ವೇಳೆ ಪೊಲೀಸರಿಗೆ ಪಕ್ಕಾ ಮಾಹಿತಿ ಲಭಿಸಿದೆ ಮಾಹಿತಿ‌ ಸಿಕ್ಕ ಕ್ಷಣವೇ ಕಾರ್ಯಚರಣೆಗೆ ಇಳಿದ‌ ಕೇರಳ ಪೋಲಿಸರ ತಂಡ ಸರ್ಕಾರಿ ಆಸ್ಪತ್ರೆಯನ್ನು ಮುತ್ತಿಗೆ ಹಾಕಿ ನಕ್ಸಲ್ ಸುರೇಶ್‌ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸುರೇಶ್ ಮೂಲತಹ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ನಿವಾಸಿ ಎನ್ನಲಾಗಿದ್ದು ಈತ‌ ಮೋಸ್ಟ್‌  ವಾಂಟೆಡ್‌ ನಕ್ಸಲ್‌ ಆಗಿದ್ದಾನೆ ಇತನ ಮೇಲೆ ಕಾಡಾನೆಯೊಂದು ಇತ್ತೀಚೆಗೆ ದಾಳಿ ನಡೆಸಿದೆ ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಈ ವೇಳೆ ಮಾಹಿತಿ ಸಿಕ್ಕ ಕೇರಳ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!