ಪಂದ್ಯವನ್ನು ಆರಂಭಿಸಲು ಚಾಲನೆ ಕೊಟ್ಟ ಕ್ಷಣ
KSCA ಕ್ರೀಡಾಂಗಣ ಶಿವಮೊಗ್ಗ
ಕೂಚ್ ಬೆಹಾರ್ ಟ್ರೋಫಿ U-19 ಫೈನಲ್ ಪಂದ್ಯ ಶಿವಮೊಗ್ಗ ನಗರದ KSCA ಕ್ರೀಡಾಂಗಣದಲ್ಲಿ ಇಂದು ಆರಂಭವಾಗಿದೆ
ಶಿವಮೊಗ್ಗ: ಕರ್ನಾಟಕ ಮತ್ತು ಮುಂಬೈ ನಡುವಣ ಕೂಚ್ ಬೆಹಾರ್ ಟ್ರೋಫಿ ಫೈನಲ್ ಪಂದ್ಯ ಇಂದು ( ಜ.12ರಿಂದ 15ರವರೆಗೆ ) ಆರಂಭವಾಗಿದೆ ಶಿವಮೊಗ್ಗ ನಗರದ ಕೆಎಸ್‌ಸಿಎ ನವುಲೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ರಿಡಾಂಗಣದಲ್ಲಿ ಆಟಗಾರರನ್ನು ಹುರಿದುಂಬಿಸಬೇಕಿದೆ
ಕರ್ನಾಟಕ ತಂಡ
ಇದು ನಾಲ್ಕು ದಿನಗಳ ಪಂದ್ಯವಾಗಿದ್ದು ‘ಪ್ರತಿದಿನ ಬೆಳಿಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದ್ದು ಸಂಜೆ 4.30ಕ್ಕೆ ದಿನದಾಟ ಕೊನೆಗೊಳ್ಳಲಿದೆ. ಪ್ರತಿದಿನ ಸರಾಸರಿ 90 ಓವರ್‌ಗಳ ಆಟ ನಡೆಯಲಿದೆ. ಈ ಪಂದ್ಯ ಶಿವಮೊಗ್ಗದಲ್ಲಿ ನಡೆಯುತ್ತಿರುವುದು ಅತ್ಯಂತ ಗೌರವ ತರುವ ವಿಷಯ’ ಎಂದು ಕೆಎಸ್‌ಸಿಎ ಶಿವಮೊಗ್ಗ ವಲಯದ ಸಂಚಾಲಕ ಎಚ್.ಎಸ್.ಸದಾನಂದ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮುಂಬಯಿ ತಂಡ
‘19 ವರ್ಷದೊಳಗಿನವರ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. 1945ರಿಂದಲೂ ಇದನ್ನು ಆಯೋಜಿಸುತ್ತಾ ಬರಲಾಗಿದೆ’ ಎಂದರು.
‘ಬಿಸಿಸಿಐ ಇದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದು, ಉದಯೋನ್ಮುಖ ಆಟಗಾರರಿಗೆ ಇದೊಂದು ವೇದಿಕೆ ಕಲ್ಪಿಸುವಲ್ಲಿ ಈ ಪಂದ್ಯಾವಳಿ ಪ್ರಮುಖ ಪಾತ್ರ ವಹಿಸುತ್ತದೆ. ಪಂದ್ಯದ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ’ ಎಂದು ತಿಳಿಸಿದರು.
ಭಾರತ ತಂಡದ ಹೆಸರಾಂತ ಮಾಜಿ ಆಟಗಾರ ಹಾಲಿ ಭಾರತ ಕ್ರಿಕೆಟ್ ತಂಡದ ತರಬೇತುದಾರರಾಗಿರುವ ರಾಹುಲ್ ದ್ರಾವಿಡ್ ಅವರ ಹಿರಿಯ ಮಗ ಸಮಿತ್ ದ್ರಾವಿಡ್ ಕರ್ನಾಟಕ ತಂಡದ ಪ್ರಮುಖ ಆಟಗಾರ
ಇಂತಹ ಪಂದ್ಯಾವಳಿಗಳು ಶಿವಮೊಗ್ಗ ನಗರದ ksca ಕ್ರೀಡಾಂಗಣದಲ್ಲಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳನ್ನು ನೋಡುವ ಅದೃಷ್ಟ ಮಲೆನಾಡಿನ ಕ್ರಿಕೆಟ್ ಪ್ರೇಮಿಗಳದಾಗಬಹುದು
ಕಳೆದ ಬುಧವಾರ ನೆಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ರಾಜೇಂದ್ರ ಕುಮಾರ್, ಕೆ.ಎಸ್. ಸುಬ್ರಹ್ಮಣ್ಯ, ಐಡಿಯಲ್ ಗೋಪಿ ಉಪಸ್ಥಿತರಿದ್ದರು.
ಕರ್ನಾಟಕ ತಂಡ: ಧೀರಜ್ ಜೆ ಗೌಡ (c), ಧುರ್ವ್ ಪ್ರಭಾಕರ್ (vc), ಕಾರ್ತಿಕ್ SU, ಶಿವಂ ಸಿಂಗ್, ಹರ್ಷಿಲ್ ಧರ್ಮಾನಿ (wk), ಸಮಿತ್ ದ್ರಾವಿಡ್, ಯುವರಾಜ್ ಅರೋರಾ (WK), ಹಾರ್ದಿಕ್ ರಾಜ್, ಆರವ್ ಮಹೇಶ್, ಆದಿತ್ಯ ನಾಯರ್, ಧನುಷ್ ಗೌಡ, ಶಿಖರ್ ಶೆಟ್ಟಿ, ಸಮರ್ಥ ನಾಗರಾಜ್, ಕಾರ್ತಿಕೇಯ ಕೆ.ಪಿ, ನಿಶ್ಚಿತ್ ಪೈ.
ಕೋಚ್: ಶ್ರೀ ಕೆ ಬಿ ಪವನ್,
ಬೌಲಿಂಗ್ ಕೋಚ್: ಶ್ರೀ ಎಸ್ ಎಲ್ ಅಕ್ಷಯ್,
ಮ್ಯಾನೇಜರ್: ಶ್ರೀ ಸತೀಶ್ ಎಸ್ ಎ,
ತರಬೇತುದಾರ: ಶ್ರೀ ಜಾಬಿ ಮ್ಯಾಥ್ಯೂ
“ಮುಂಬಯಿ”ತಂಡ : ಮನನ್ ಭಟ್ (ಕ್ಯಾಪ್ಟನ್), ಆಯುಷ್ ಮ್ಹಾತ್ರೆ, ನೂತನ್ ಗೋಯೆಲ್, ತನಿಶ್ ಮೆಹರ್, ಅವೈಸ್ ಖಾನ್, ಆದಿತ್ಯ ರಾವತ್, ಆಯುಷ್ ವರ್ತಕ್, ಪ್ರತೀಕ್ ಯಾದವ್,(WK) ಅಭಿಜ್ಞಾನ್ ಕುಂಡು (WK) ಆಗಸ್ತ್ಯ ಬಂಗೆರಾ, ಯಾಸೀನ್ ಶೇಖ್,ಫರ್ದೀನ್ ಶೇಖ್ ,ವರುಣ್ ರಾಗ್ಜಿ, ಆಕಾಶ್ ಪವಾರ್, ರೋಹನ್ ಘಾಗ್, ಹೃಷಿಕೇಶ ಗೋರ್
ಕೋಚ್: ಶ್ರೀ ದಿನೇಶ್ ಲಾಡಾ
ಫೀಲ್ಡಿಂಗ್ ಕೋಚ್: ಶ್ರೀ ಸುನೀಲ್ ಲಿಂಗಯಾಯತ್
ಮ್ಯಾನೇಜರ್: ಶ್ರೀ ಉಮೇಶ್ ರಾನ್
ತರಬೇತುದಾರ: ಶ್ರೀ ಅಶ್ಡಿನ್ ರೆಡಿಮಿನಿ
ಮ್ಯಾಚ್ ರೆಫರಿ:
ಶ್ರೀ ಶ್ರೀಕುಮಾರ್ ನಾಯರ್
ಸ್ಕೋರ್‌ಗಳು:
ಶ್ರೀ ಬಿ ಎಸ್ ಜಯಕುಮಾರ್ (ಆನ್‌ಲೈನ್) ಶ್ರೀ ಮೊಹಮ್ಮದ್ ಯೂಸುಫ್ (ಕೈಪಿಡಿ)
ಅಂಪಾಯರ್‌ಗಳು:
ಶ್ರೀ ಅಭಿಜಿತ್ ದೇಶಮುಖ ಶ್ರೀ ರವಿಕಾಂತ್ ರೆಡ್ಡಿ
ವೀಡಿಯೊ ವಿಶ್ಲೇಷಕ:
ಶ್ರೀ ಶರತ್ ನರಸಿಂಹನ್ (ಹಿರಿಯ) ಶ್ರೀ ರೋಹಿತ್ ಮೇಸ್ತ (ಜೂನಿಯರ್)
ಸ್ಕೋರ್‌ಗಳು:
ಶ್ರೀ ಬಿ ಎಸ್ ಜಯಕುಮಾರ್ (ಆನ್‌ಲೈನ್)
ಶ್ರೀ ಮೊಹಮ್ಮದ್ ಯೂಸುಫ್ (ಕೈಪಿಡಿ)