ನಿರುದ್ಯೋಗಿ ಪದವೀಧರರ ಖಾತೆಗೆ ಮೂರುಸಾವಿರ ರೂಪಾಯಿ ಜಮಾ ಮಾಡಲು ಕ್ಷಣ ಗಣನೆ : 5ನೇ ಗ್ಯಾರಂಟಿ ‘ಯುವ ನಿಧಿ’ಗೆ ಮುಖ್ಯಮಂತ್ರಿಗಳಿಂದ ಇಂದು ಚಾಲನೆ

ನಿರುದ್ಯೋಗಿ ಪದವೀಧರರ ಖಾತೆಗೆ ಮೂರುಸಾವಿರ ರೂಪಾಯಿ ಜಮಾ ಮಾಡಲು ಕ್ಷಣ ಗಣನೆ : 5ನೇ ಗ್ಯಾರಂಟಿ ‘ಯುವ ನಿಧಿ’ಗೆ ಮುಖ್ಯಮಂತ್ರಿಗಳಿಂದ ಇಂದು ಚಾಲನೆ

News.Ashwasurya.in

ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿಗೆ ಯುವನಿಧಿ ಯೋಜನೆಗೆ ಇಂದು ಶಿವಮೊಗ್ಗ ನಗರದ ಫ್ರೀಡಂ ಪಾರ್ಕಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.
ಯುವನಿಧಿ ಜಾರಿಯೊಂದಿಗೆ ಕಾಂಗ್ರೆಸ್ ಪಕ್ಷದ ಐದನೇ ಗ್ಯಾರಂಟಿಯು ಜಾರಿಯಾಗಲಿದೆ. ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು.ಈಗಾಗಲೇ 61,000ಕ್ಕೂ ಅಧಿಕ ಫಲಾನುಭವುಗಳ ನೋಂದಣಿಯಾಗಿದ್ದು, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂ., ನಿರುದ್ಯೋಗಿ ಡಿಪ್ಲೋಮಾ ಪದವೀಧರರಿಗೆ ಮಾಸಿಕ 1500 ರೂಪಾಯಿಗಳನ್ನು ಅವರ ಖಾತೆಗೆ ಸಂದಾಯ ಮಾಡಲಾಗುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಾನುಭವಿಗಳ ಖಾತೆಗೆ ಹಣ ಹಾಕುವ ಮುಖಾಂತರ ಯುವನಿಧಿಗೆ ಚಾಲನೆ ನೀಡಲಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!