ಮಾದಕ ವಸ್ತು ಗಾಂಜಾ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ, ದಿನಾಂಕ: 29-12-2023 ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವುಲೆಯ ಇಂದಿರಗಾಂಧಿ ಬಡಾವಣೆಯಲ್ಲಿ ಯಾರೋ ಅಪರಿಚಿತರು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಶ್ರೀ ಮಿಥುನ್ ಕುಮಾರ್ ಜಿಕೆ, ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಸುರೇಶ್ ಎಂ ಡಿ.ವೈ.ಎಸ್.ಪಿ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ಮತ್ತು ಶ್ರೀಮತಿ ಚಂದ್ರಕಲಾ ಪೊಲೀಸ್ ನೀರಿಕ್ಷಕರು ವಿನೋಬನಗರ ಪೊಲೀಸ್ ಠಾಣೆರವರ ನೇತೃತ್ವದ
ಶ್ರೀ ಸುನಿಲ್ ಬಿ.ಸಿ ಪಿ.ಎಸ್.ಐ. ಶ್ರೀ ರಮೇಶ್ ಎ. ಎಎಸ್‌ಐ ಮತ್ತು ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸಲ್ಮಾನ್ ಖಾನ್, 22 ವರ್ಷ, ಚೆನ್ನಗಿರಿ, ದಾವಣಗೆರೆ ಜಿಲ್ಲೆ ಈತನನ್ನು ವಶಕ್ಕೆ ಪಡೆದು, ಆರೋಪಿತನಿಂದ 1) ಅಂದಾಜು ಮೌಲ್ಯ 1,00,000/- ರೂ ಗಳ 2 ಕೆ.ಜಿ. 53 ಗ್ರಾಂ ತೂಕದ ಒಣ ಗಾಂಜಾ, ತೂಕ ಮಾಡುವ ಯಂತ್ರ, ಮೊಬೈಲ್ ಫೋನ್ ಮತ್ತು ರೂ 500/- ನಗದು ಹಣವನ್ನು ಅಮಾನತುಪಡಿಸಿಕೊಂಡು, ಆರೋಪಿತನ ವಿರುದ್ಧ ವಿನೋಬನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0271/2023 ಕಲಂ 20(ಬಿ), 8(ಸಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.