BREAKING NEWS : ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿಪಂಜರ ಪತ್ತೆ ಈ ಪ್ರಕರಣಕ್ಕೆ ಹೊಸ ತಿರುವು :ಕೊನೆಗೂ ಸಿಕ್ಕಿದೆ ಡೆತ್ ನೋಟ್!! ಅದರಲ್ಲಿದೆ ಸ್ಪೋಟಕ ಮಾಹಿತಿ?
BIG BREAKING NEWS
news.ashwasurya.in
ಚಿತ್ರದುರ್ಗ : ಪಾಳು ಬಿದ್ದ ಮನೆಯಲ್ಲಿ ಸಿಕ್ಕ ಐವರ ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ಪಾಳು ಬಿದ್ದ ಮನೆಯಲ್ಲಿ ಡೆತ್ ನೋಟ್ ಒಂದು ಪತ್ತೆಯಾಗಿದ್ದು ಕೂತುಹಲ ಕೆರಳಿಸಿದೆ.!ಈ ಡೇತ್ ನೋಟ್ ಸಿಕ್ಕ ಹಿನ್ನಲೆಯಲ್ಲಿ ಪೋಲಿಸರಿಗೆ ಹೆಚ್ಚಿನ ತನಿಖೆ ಮಾಡಲು ಸಹಾಯವಾಗಿದೆ.
ಅ ಡೆತ್ ನೋಟ್ ನಲ್ಲಿ ಏನಿದೆ..?
ಮೃತ ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ವಿರುದ್ಧ ದರೋಡೆ ಪ್ರಕರಣವೊಂದು ದಾಖಲಾಗಿತ್ತು. 2013ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ನರೇಂದ್ರ ರೆಡ್ಡಿ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.ಅ ಸಂಧರ್ಭದಲ್ಲಿ ಅದ್ಯಾವಕಾರಣಕ್ಕೊ ಎನೊ ನರೇಂದ್ರ ಅವರು ತಮ್ಮ ಗೆಳೆಯರ ಜೊತೆಗೂಡಿ ದರೋಡೆ ಪ್ರಕರಣ ಒಂದರಲ್ಲಿ ಭಾಗಿಯಾಗಿದ್ದರಂತೆ!?,
ಇದು ಹೌದ ಎನ್ನುವ ಅನುಮಾನ ಕೂಡ ಅವರನ್ನು ಹತ್ತಿರದಿಂದ ಕಂಡ ಸ್ಥಳೀಯ ನಾಗರಿಕರದಾಗಿದೆ. ಅ ಸಂಧರ್ಭದಲ್ಲಿ ಬಿಡದಿ ಬಳಿ ಅವರ ವಾಹನವನ್ನು ತಡೆದು ದರೋಡೆ ಕೇಸ್ ದಾಖಲು ಮಾಡಲಾಗಿತ್ತಂತೆ! ದರೋಡೆ ಕೇಸಲ್ಲಿ ಜೈಲುಶಿಕ್ಷೆ ಕೂಡ ಅನುಭವಿಸಿದ್ದರು ನರೇಂದ್ರ! ಈ ಹಿನ್ನೆಲೆ ಮನನೊಂದ ಇವರು ಮತ್ತು ಇವರ ಕುಟುಂಬದವರು 2019ರಲ್ಲಿ ಡೆತ್ ನೋಟ್ ಒಂದನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಗನ್ನಾಥರೆಡ್ಡಿ ಮನೆಯಲ್ಲಿದ್ದ ಒಂದು ಸಾಕುನಾಯಿ ಸಹ ಇವರ ಜೊತೆಯಲ್ಲೇ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.!
ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಸಮೀಪದ ಜೈಲ್ ರಸ್ತೆಯಲ್ಲಿ ಇರುವ ಮನೆಯಲ್ಲಿ ಐದು ಅಸ್ತಿಪಂಜರಗಳು ಪತ್ತೆಯಾಗಿವೆ. ಲೋಕೋಪಯೋಗಿ ಇಲಾಖೆ ನಿವೃತ್ತ ಇಂಜಿನಿಯರ್ ಜಗನ್ನಾಥ್ ರೆಡ್ಡಿ ಮತ್ತು ಕುಟುಂಬ ಈ ಮನೆಯಲ್ಲಿ ವಾಸವಾಗಿದ್ದರು. ಜಗನ್ನಾಥ ರೆಡ್ಡಿ, ಅವರ ಪತ್ನಿ, ಪುತ್ರಿ, ಪುತ್ರರು ವಾಸವಾಗಿದ್ದರು. ಸ್ಥಳೀಯರೊಬ್ಬರು ನೀಡಿದ ಮಾಹಿತಿ ಆಧರಿಸಿ ಪಾಳು ಬಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿದಾಗ 5 ಅಸ್ಥಿಪಂಜರಗಳು ಪತ್ತೆಯಾಗಿವೆ.
ಇನ್ನಷ್ಟು ತನಿಖೆ ಮುಂದುವರೆದಿದೆ