ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಭದ್ರಾವತಿಯ ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಪೋಲಿಸರ ಭರ್ಜರಿ ಬೇಟೆ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶ,ಆರೋಪಿಗಳ ಬಂಧನ

ಭದ್ರಾವತಿಯ ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಪೋಲಿಸರ ದಾಳಿ ಗಾಂಜಾ ವಶ ಆರೋಪಿಗಳ ಬಂಧನ

ಭದ್ರಾವತಿಯ ಹೊಸಮನೆ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳ ಸಮೇತ ಗಾಂಜಾ ವಶ

 ಮಾದಕ ವಸ್ತು ಗಾಂಜಾ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದು,  ಈ ಹಿನ್ನೆಲೆಯಲ್ಲಿ, ದಿನಾಂಕ  28-12-2023 ರಂದು ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಕಣಕಟ್ಟೆ ಗೋಂದಿ ಚಾನಲ್, ಏರಿಯಾ ಮೇಲೆ ಯಾರೋ ಆಸಾಮಿಗಳು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಶ್ರೀ ಮಿಥುನ್ ಕುಮಾರ್ ಜಿಕೆ, ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ 
ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ನಾಗರಾಜ್ ಪೊಲೀಸ್ ಉಪಾಧೀಕ್ಷಕರು ಭದ್ರಾವತಿ ಉಪ ವಿಭಾಗ ಮತ್ತು ಶ್ರೀ ಶೈಲ ಕುಮಾರ್, ಪೊಲೀಸ್ ವೃತ್ತ ನಿರೀಕ್ಷಕರು , ಭದ್ರಾವತಿ ನಗರ ವೃತ್ತ ರವರ ನೇತೃತ್ವದ ಶ್ರೀ ಕೃಷ್ಣ ಕುಮಾರ್ ಮಾನೆ ಪೊಲೀಸ್ ಉಪನಿರೀಕ್ಷಕರು ಹೊಸಮನೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ  1)ಸಮೀವುಲ್ಲಾ, 37 ವರ್ಷ ಸೀಗೆಬಾಗಿ ಭದ್ರಾವತಿ ಮತ್ತು 2) ದಾದಾಪಿರ್, 28 ವರ್ಷ, ಚನ್ನಗಿರಿ ದಾವಣಗೆರೆ ಇವರನ್ನು  ವಶಕ್ಕೆ ಪಡೆದು  ಆರೋಪಿತರಿಂದ ಅಂದಾಜು ಮೌಲ್ಯ  54,000/- ರೂಗಳ 1 ಕೆಜಿ 618 ಗ್ರಾಂ ತೂಕದ ಒಣ ಗಾಂಜಾ, ರೂ 1500/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 30,000/- ರೂ ಗಳ ದ್ವಿಚಕ್ರ ವಾಹನವನ್ನು ಅಮಾನತುಪಡಿಸಿಕೊಂಡು, ಆರೋಪಿತರ ವಿರುದ್ಧ ಹೊಸಮನೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ  0201/2023 ಕಲಂ 20(ಬಿ) (ii) (ಬಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಲಿಸರ ಭರ್ಜರಿ ಬೇಟೆ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶ ಆರೋಪಿಗಳ ಬಂಧನ

ಮಾದಕ ವಸ್ತು ಗಾಂಜಾ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ, ದಿನಾಂಕ 28-12-2023 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿಕೊಪ್ಪ ಗ್ರಾಮದ ವಾಸಿ ನಜರತ್ ನು ತನ್ನ ಮನೆಯ ಹಿಂಬದಿ ಜಾಗದಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆದಿರುತ್ತಾರೆಂದು, ಬಂದ ಖಚಿತ ಮಾಹಿತಿಯ ಮೇರೆಗೆ, ಶ್ರೀ ಮಿಥುನ್ ಕುಮಾರ್ ಜಿಕೆ, ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಬಾಲರಾಜ್ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ-ಎ, ಉಪ ವಿಭಾಗ, ಮತ್ತು ಶ್ರೀ ಮಂಜುನಾಥ್, ಪೊಲೀಸ್ ನಿರೀಕ್ಷಕರು ತುಂಗಾನಗರ ಪೊಲೀಸ್ ಠಾಣೆರವರ ನೇತೃತ್ವದ, ಶ್ರೀ ಮಂಜುನಾಥ್, ಪೋಲಿಸ್ ಉಪನಿರೀಕ್ಷಕರು ತುಂಗಾ ನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಸ್ಥಳಕ್ಕೆ

ಹೋಗಿ ದಾಳಿ ನಡೆಸಿದಾಗ ನಜರತ್ @ ನಜ್ರು, ಈತನು ಗಾಂಜಾ ಗಿಡವನ್ನು ಬೆಳೆದಿರುವುದು ಕಂಡುಬಂದಿದ್ದು, ನಂತರ ಸ್ಥಳದಲ್ಲಿದ್ದ ಅಂದಾಜು ಮೌಲ್ಯ 1,20,00/- ರೂ ಗಳ 12 ಕೆಜಿ 350 ಗ್ರಾಂ ತೂಕದ ಹಸಿ ಗಾಂಜಾ ಗಿಡವನ್ನು ಅಮಾನತುಪಡಿಸಿಕೊಂಡು, ಆರೋಪಿ ನಜರತ್ @ ನಜ್ರು, ಮಳಲಿಕೊಪ್ಪ ಗ್ರಾಮ ಶಿವಮೊಗ್ಗ ಈತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0516/2023 ಕಲಂ 8(ಬಿ), 20 (ಎ)(i), 25 NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

Leave a Reply

Your email address will not be published. Required fields are marked *

Optimized by Optimole
error: Content is protected !!