ತಮಿಳು ಸಿನಿಮಾರಂಗದ ಸ್ಟಾರ್ ನಟರ ನಡುವೆ ನೆಲೆನಿಂತು ಸ್ಟಾರ್ ನಟನಾದ ಕ್ಯಾಪ್ಟನ್ ವಿಜಯಕಾಂತ್ ಇನ್ನಿಲ್ಲ ; ಇವರ ಸಿನಿ ಪಯಣ ಹೇಗಿತ್ತು…….

‘ಕ್ಯಾಪ್ಟನ್’ ಎಂದೇ ಜನಪ್ರಿಯರಾಗಿರುವ ನಟ ವಿಜಯಕಾಂತ್, 1979 ರಲ್ಲಿ ಇನಿಕ್ಕುಂ ಇಳಮೈ ಚಿತ್ರದಲ್ಲಿ ಖಳನಾಯಕನಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸ್ಟಾರ್ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಸಮಕಾಲೀನರು, ಇಬ್ಬರೂ ತಮಿಳು ಚಲನಚಿತ್ರೋದ್ಯಮವನ್ನು ಅಲಂಕರಿಸಿ ಅಳುತ್ತಿದ್ದ ಸಮಯದಲ್ಲಿ ವಿಜಯಕಾಂತ್ ಕೂಡ ಚಿತ್ರರಂಗದಲ್ಲಿ ತಮ್ಮ ನೆಲೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.
ಅವರ ಮೊದಲ ಚಿತ್ರದ ನಂತರದಲ್ಲಿ ಸತತ ಸೋಲುಗಳ ನಂತರ ವಿಜಯಕಾಂತ್ ಅವರ ವೃತ್ತಿಜೀವನವು ” ದೂರತು ಇದಿ ಮುಜಕ್ಕಂ ಚಿತ್ರದೊಂದಿಗೆ ಅದೃಷ್ಟ ಕೂಡ ಖುಲಾಯಿಸಿತು,ಈ ಚಿತ್ರ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ ರೀಮೇಕ್ ಆಯಿತು. ಅವರ ಕೊನೆಯ ಕೆಲವು ಚಿತ್ರಗಳು ಜನರಿಂದ ಅಪಹಾಸ್ಯಕ್ಕೂ ಒಳಗಾಗಿತ್ತು,

ವಿಜಯಕಾಂತ್ ಕಾಲಿವುಡ್‌ನಲ್ಲಿ ಕೆಲವು ದಾಖಲೆಗಳನ್ನು ಹೊಂದಿದ್ದಾರೆ – ಒಂದೇ ವರ್ಷದಲ್ಲಿ ವಿಜಯಕಾಂತ್ ಅವರ ಹದಿನೆಂಟು ಚಲನಚಿತ್ರಗಳು ಬೆಳ್ಳಿತೆರೆಯ ಮೇಲೆ ಬಿಡುಗಡೆ ಮಾಡಿದ ಏಕೈಕ ನಟ ಅವರು, ಈ ದಾಖಲೆಯನ್ನು ಯಾರು ಕೂಡ ಇದುವರೆಗೂ ಮುರಿಯಲು ಸಾಧ್ಯವಾಗಿಲ್ಲ ಅನ್ನುವುದು ವಿಷೇಶ. ಇದು 1984 ರಲ್ಲಿ ಅವರು ಸಾಧಿಸಿದ ಸಾಧನೆ. ಇದೇ ವರ್ಷ ಅವರು ವೈದೇಹಿ ಕಾತಿರುಂತಲ್‌ ಚಿತ್ರದಲ್ಲಿ ನಟಿಸಿದರು, ಇದು ದಕ್ಷಿಣ ಭಾರತದಲ್ಲೆ ಬ್ಲಾಕ್‌ಬಸ್ಟರ್ ಚಿತ್ರವಾಗಿತ್ತು.


ಅವರು ಮೊದಲ ತಮಿಳು 3D ಚಿತ್ರ – ಅಣ್ಣೈ ಭೂಮಿ 3D ಮೂವಿಯಲ್ಲು ಸಹ ನಟಿಸಿದ್ದಾರೆ ವಿಜಯಕಾಂತ್,

‘ಕ್ಯಾಪ್ಟನ್’ ಎನ್ನುವ ಬಿರುದು ವಿಜಯಕಾಂತ್ ಅವರಿಗೆ ಸಿನಿ ವೃತ್ತಿಜೀವನದಲ್ಲಿ ಇವರು ಅಭಿನಯಿಸಿದ ಯಶಸ್ವಿ ಚಿತ್ರ “ಕ್ಯಾಪ್ಟನ್ ಪ್ರಭಾಕರನ್” ಚಿತ್ರದಿಂದ ಬಂದಿದೆ. ಇದು ಅವರ 100 ನೇ ಚಿತ್ರವಾಗಿದ್ದು ಈ ಚಿತ್ರದಲ್ಲಿ ವೀರಭದ್ರನ್ ಎಂಬ ದರೋಡೆಕೋರನನ್ನು ಬೇಟೆಯಾಡುವ ಅರಣ್ಯ ಅಧಿಕಾರಿಯಾಗಿ ವಿಜಯಕಾಂತ್ ನಟಿಸಿದ್ದರು. ಈ ಕಥೆಯು ಶ್ರೀಗಂಧದ ಚೋರ ವೀರಪ್ಪನ್‌ನ ಜೀವನದಿಂದ ಹೆಚ್ಚು ಸ್ಫೂರ್ತಿ ಪಡೆದಿದ್ದು ಚಿತ್ರವು ಬ್ಲಾಕ್ ಬಸ್ಟರ್ ಆಯಿತು.ಈ ಚಿತ್ರದಿಂದ ವಿಜಯಕಾಂತ್ ಅವರ ಇಮೇಜ್ ಇನ್ನಷ್ಟು ಎತ್ತರಕ್ಕೇರಿತು


ಈ ಚಿತ್ರ ಬಿಡುಗಡೆಗೆ ಮುನ್ನವೇ ವಿಜಯಕಾಂತ್ ಅವರು ಪುಲನ್ ವಿಸರನೈ ಚಿತ್ರದಲ್ಲಿ ನಟಿಸಿದ್ದರು, ಇದು ಕೂಡ ಅವರ ಯಶಸ್ವಿ ಚಿತ್ರವಾಗಿದ್ದು ತಮಿಳು ಚಿತ್ರರಂಗದಲ್ಲಿ ಇಲ್ಲಿಯವರೆಗೆ ಅತ್ಯುತ್ತಮ ಕ್ರೈಮ್ ಥ್ರಿಲ್ಲರ್ ಚಿತ್ರವೆಂದು ಪರಿಗಣಿಸಲ್ಪಟ್ಟಿದೆ. ಸಾಕಷ್ಟು ಚಿತ್ರಗಳಲ್ಲಿ ವಿಜಯಕಾಂತ್ ಖಾಕಿತೊಟ್ಟು ಪೋಲಿಸ್ ಅಧಿಕಾರಿಗಳ ಪಾತ್ರದಲ್ಲಿ ಮಿಂಚಿದ್ದಾರೆ, ಇನ್ನೂ ಮಣಿರತ್ನಂ ನಿರ್ಮಿಸಿದ ಮತ್ತು ಪ್ರಾಮಾಣಿಕ ಪೋಲೀಸ್ ಅಧಿಕಾರಿ ಮತ್ತು ಭ್ರಷ್ಟ ರಾಜಕಾರಣಿಯ ಕಥೆಯನ್ನು ಸಾರುವ ಸತ್ರಿಯನ್ ಚಿತ್ರದ ಅವರ ಅಭಿನಯ ಅವರು ಸಿನಿರಸಿಕರ ಮನಸ್ಸಿನಲ್ಲಿ ಸದಾ ಉಳಿಯುವಂತೆ ಮಾಡಿದೆ. ಮತ್ತೊಂದು ವಿಜಯಕಾಂತ್ ಅಭಿನಯದ ಸೂಪರ್ ಕಾಪ್ ಚಿತ್ರವು ಸೂಪರ್ ಹಿಟ್ ಆಯಿತು ಅದೇ “ಸೇತುಪತಿ IPS.”

ವಿಜಯಕಾಂತ್ ಅವರು ತಮ್ಮ ಸಾಮಾನ್ಯ ಆಕ್ಷನ್ ಚಿತ್ರಗಳಿಗಿಂತ ವಿಭಿನ್ನವಾದ ಪಾತ್ರವನ್ನು ಮಾಡಲು ಮುಂದಾದರು ” ಚಿನ್ನ ಗೌಂಡರ್ ” ದಕ್ಷಿಣ ಭಾರತದ ಮತ್ತೊಂದು ಯಶಸ್ವಿ ಚಿತ್ರ ಸೂಪರ್ ಡ್ಯೂಪರ್ ಅಯಿತು ಎಲ್ಲಾ ಚಿತ್ರಮಂದಿರಗಳಲ್ಲಿ 100 ದಿನಗಳನ್ನು ಪೂರೈಸಿತು.

ವಿಜಯಕಾಂತ್ ಅವರ ವೃತ್ತಿಜೀವನದ ಗ್ರಾಫ್ ‘90 ರ ದಶಕದಲ್ಲಿ ಮತ್ತು ಹೊಸ ಸಹಸ್ರಮಾನದೊಳಗೆ ಅನೇಕ ಹಿಟ್‌ ಚಿತ್ರಗಳನ್ನು ಕೊಟ್ಟರು ವಿಜಯಕಾಂತ್ “ವನಾಥೈ ಪೋಲಾ, ವಲ್ಲಾರಾಸು” ಮತ್ತು ಸಿಮ್ಮಮಾಸಾನಂನಂತಹ ಚಲನಚಿತ್ರಗಳು ಉತ್ತಮ ಯಶಸ್ಸು ಕಂಡವು,ನಂತರದಲ್ಲಿ ರಮಣಾ ಚಿತ್ರದ ಯಶಸ್ಸಿನ ನಂತರ ಅವರು ಒಂದರ ನಂತರ ಒಂದರಂತೆ ಯಶಸ್ಸು ಕಂಡರು ದುಡ್ಡು ಮಾಡಿದರು.

ಆ ಸಮಯದಲ್ಲಿ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡು ಚಿತ್ರಮಂದಿರಕ್ಕೆ ತೆರಳುತಿದ್ದರು ಮತ್ತು ಕಾಲಿವುಡ್‌ನಲ್ಲಿ ಚಲನಚಿತ್ರ ನಿರ್ಮಾಣದ ಶೈಲಿಯು ತ್ವರಿತ ಬದಲಾವಣೆಗಳನ್ನು ಕಂಡಂತ ಸಮಯ ಮತ್ತು ವಯಸ್ಸು ವಿಜಯಕಾಂತ್ ಅವರನ್ನು ಕುಗ್ಗುವಂತೆ ಮಾಡಿತ್ತು ನಂತರ ರಾಜಕೀಯಕ್ಕೆ ದುಮುಕಿದರು, ವಿಜಯಕಾಂತ್ ತಮ್ಮ ರಾಜಕೀಯದಲ್ಲೂ ಕುಸಿತವನ್ನು ಅನುಭವಿಸಿದ್ದರು,

ಯಾವುದೇ ಉದ್ಯಮದ ಮಾರ್ಗದರ್ಶಕರಿಲ್ಲದೆ ಮತ್ತು ಕಮಲ್ ಮತ್ತು ರಜಿನಿಯಂತಹ ಇಬ್ಬರು ದಿಗ್ಗಜರು ಪರದೆಯ ಮೇಲೆ ಪ್ರಾಬಲ್ಯ ಸಾಧಿಸಿದ ಅವಧಿಯಲ್ಲಿ ವಿಜಯಕಾಂತ್ ಅವರ ಚಲನಚಿತ್ರದ ಪಯಣ ಗಮನಾರ್ಹವಾದುದು. ಅವರ ಅತ್ಯುತ್ತಮ ಚಲನಚಿತ್ರಗಳನ್ನು ನೋಡಿದವರಿಗೆ ಮಾತ್ರ ಗೊತ್ತು ಅವರು ಎಂತಹ ನಟ ಎಂದು.

ಅವರು ಅಭಿನಯಿಸಿದ ಅದೆಷ್ಟೋ ಚಿತ್ರಗಳು ಶತದಿನೋತ್ಸವ ಅಚರಿಸಿವೆ ಅದರಲ್ಲೂ ಕ್ಯಾಪ್ಟನ್ ಪ್ರಭಾಕರ್ ಮತ್ತು ಚಿನ್ನಗೌಂಡರ್ ಚಿತ್ರಗಳು ತಮಿಳು ಚಿತ್ರರಂಗದಲ್ಲೆ ಅತಿ ಯಶಸ್ವಿ ಚಿತ್ರಗಳಾಗಿ ದಾಖಲೆ‌ ನಿರ್ಮಿಸಿದ್ದವು.ಚಿನ್ನಗೌಂಡರ್ ಚಿತ್ರವನ್ನು ಕನ್ನಡ ಸ್ಟಾರ್ ನಟ ರವಿಚಂದ್ರನ್ ಕನ್ನಡಕ್ಕೆ ರಿಮೇಕ್ ಮಾಡಿ ( ಚಿಕ್ಕಯಾಜಮಾನ್ರು) ಯಶಸ್ಸು ಕಂಡಿದ್ದರು.

ವಿಜಯಕಾಂತ್ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಸಾವಿನೆಡೆಗೆ ಹೆಜ್ಜೆಹಾಕಿದ್ದಾರೆ. ಅವರ ಅಭಿನಯದ ಚಿತ್ರಗಳು ಮಾತ್ರ ಇನ್ನೂ ಜೀವಂತವಾಗಿದೆ ಎನ್ನುವುದು ಮಾತ್ರ ಸತ್ಯ. ಕ್ಯಾಪ್ಟನ್ RIP

Leave a Reply

Your email address will not be published. Required fields are marked *

Optimized by Optimole
error: Content is protected !!