2023ರ ವಿಶ್ವಕಪ್ ಕ್ರಿಕೆಟ್ ಸಮರ‌ ವೇಳಾಪಟ್ಟಿ ಬಿಡುಗಡೆ. ಅಕ್ಟೋಬರ್15ರಂದು ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಪಂದ್ಯಾವಳಿ

2023ರ ವಿಶ್ವಕಪ್ ಕ್ರಿಕೆಟ್ ಸಮರ ಅಕ್ಟೋಬರ್15ರಂದು ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಹೈದರಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೈವೋಲ್ಟೆಜ್ ಮ್ಯಾಚ್….!!

World Cup Cricket 2023: ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಕ್ಟೋಬರ್ 15ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯಾವಳಿ ನೆಡೆಯಲಿದೆ ಮತ್ತೆ ವಿಶ್ವ ಕ್ರಿಕೆಟ್ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುವ ಪಂದ್ಯವಾಗಿರಲಿದೆ ಈ ಪಂದ್ಯ
ವಿಶ್ವವೇ ಎದುರುನೊಡುತ್ತಿರುವ ವಿಶ್ವಕಪ್ ಕ್ರಿಕೆಟ್ ನ ಪಂದ್ಯಾವಳಿಗಳಿ ಇದೆ ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಭಾರತದ ನೆಲದಲ್ಲಿ ಪಂದ್ಯಾಟಗಳು ನಡೆಯಲಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೇ ಭಾರತದ ಹೆಸರಾಂತ ಕ್ರೀಡಾಂಗಣಗಳಲ್ಲಿ ಸಿದ್ಧತೆಗಳು ಆರಂಭವಾಗಿದ್ದು ಅಂತಿಮ ವೇಳಾಪಟ್ಟಿಯು ಬಿಡುಗಡೆಗೆ ಯಾಗಿದೆ

2023ರ ಏಕದಿನ ವಿಶ್ವಕಪ್ ನಾಕೌಟ್‌ಗೂ ಮುನ್ನ ಭಾರತ ತಂಡ ಇತರ ಒಂಬತ್ತು ದೇಶಗಳ ವಿರುದ್ಧ ಆಡಲಿದೆ. ಸದ್ಯ ಬಿಡುಗಡೆಯಾಗಿರುವ ವೇಳಾಪಟ್ಟಿಯ ಪ್ರಕಾರ, ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಬಾಬರ್ ಅಜಂ ನಾಯಕನಾಗಿರುವ ಪಾಕಿಸ್ತಾನ ತಂಡವನ್ನು ಎದುರಿಸುವಾಗ ಕ್ರೀಡಾಂಗಣವು ತುಂಬಿ ತುಳುಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಅಂದು ಭಾರತ-ಪಾಕಿಸ್ತಾನದ ಪಂದ್ಯಾವಳಿಯ ವೇಳೆ ಅಸಂಖ್ಯಾತ ಅಭಿಮಾನಿಗಳ ಹೃದಯ ಬಡಿತವನ್ನು ಕೆಲಕ್ಷಣಗಳು ನಿಲ್ಲಿಸಲಿದೆ. ಏಕೆಂದರೆ ಒಂದು ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು. ಪ್ರೇಕ್ಷಕರು ಈ ಕ್ರೀಡಾಂಗಣದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಹುರಿದುಂಬಿಸಲು ಕಾಯುತ್ತಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

“2023ರ 50 ಓವರ್‌ಗಳ ವಿಶ್ವಕಪ್‌ ಕ್ರಿಕೆಟ್‌ ನ ಪಂದ್ಯಾವಳಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಾಡಲಿವೆ. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಸ್ವಲ್ಪ ಸಮಯದವರೆಗೆ ಎರಡು ದೇಶದ ಅಭಿಮಾನಿಗಳ ಕ್ರಿಕೆಟ್ ಹುಚ್ಚು ಕಿಚ್ಚು ಆಟಗಾರರ ಮೇಲಿನ ಪ್ರೀತಿ ಮುಗಿಲು ಮುಟ್ಟಿದರೆ. ಪಂದ್ಯದ ಪ್ರತಿ ಎಸೆತಕ್ಕೆ ಪ್ರೇಕ್ಷಕರ ಹೃದಯ ಬಡಿತಗಳು ಏರುಪೇರಾಗಲಿದೆ. 1.25 ಲಕ್ಷ ಜನರು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜಮಾಯಿಸಲಿದ್ದಾರೆ.

ಇದೊಂದು ಒಂದು ಕುತೂಹಲಕಾರಿ ಪಂದ್ಯ ವಿಶ್ವ ಕ್ರಿಕೆಟ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡದ ಪಂದ್ಯ ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ” ಹೈವೋಲ್ಟೆಜ್ ಪಂದ್ಯಾ ಎಂದು ವಿಶ್ವದ ಅಗ್ರಮಾನ್ಯ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ

ಅಕ್ಟೋಬರ್ 8ರಂದು ಚೆನ್ನೈನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿರುವ ಭಾರತ ತಂಡವು ತಮ್ಮ ವಿಶ್ವಕಪ್ ಅಭಿಯಾನವನ್ನು ಕಷ್ಟಕರವಾದ ಪಂದ್ಯದೊಂದಿಗೆ ಪ್ರಾರಂಭಿಸಲಿದೆ. ಆಸ್ಟ್ರೇಲಿಯಾ ವಿರುದ್ಧ ಈವರೆಗಿನ 12 ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಕೇವಲ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಭಾರತವು ಐದು ಬಾರಿಯ ಚಾಂಪಿಯನ್‌ಗಳ ವಿರುದ್ಧ ಮತ್ತೊಂದು ಗೆಲುವು ಪಡೆಯಲು ಅತ್ಯುತ್ತಮ ತಂಡವಾಗಿ ಆಡಬೇಕಿದೆ
ಭಾರತದ ಮೊದಲ ಪಂದ್ಯವು ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದ್ದು ಅಕ್ಟೋಬರ್-ನವೆಂಬರ್‌ನಲ್ಲಿ ಚೆನ್ನೈನಲ್ಲಿ ಮಳೆಯಾಗುವ ಸಾಧ್ಯತೆ ಇದೆಯಂತೆ ಹಾಗಾಗಿ ಚೆನ್ನೈನ ಪಂದ್ಯಗಳ ಮೇಲೆ ಮಳೆಯು ಪರಿಣಾಮ ಬೀರಬಹುದು ಎಂದು ಹವಾಮಾನ ವರದಿ ಎಚ್ಚರಿಸಿದೆಯಂತೆ
ಇನ್ನೂ ದೆಹಲಿಯಲ್ಲಿ ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಭಾರತದ ಎರಡನೇ ಪಂದ್ಯದ ಕುರಿತು ಹೇಳಬೇಕೆಂದರೆ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅವರಂತಹ ಬೌಲರ್‌ಗಳು ಭಾರತಕ್ಕೆ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು
ಹಿರಿಯ ಕ್ರಿಕೆಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಆದರೂ ಭಾರತ ತಂಡ ಅಂತಿಮವಾಗಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
ಭಾರತ ಅಕ್ಟೋಬರ್ 11ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಂದ್ಯವನ್ನು ಆಡಲಿದೆ. ಅಫ್ಘಾನಿಸ್ತಾನದ ಬೌಲಿಂಗ್ ಬಲಿಷ್ಠವಾಗಿದ್ದು ಎದುರಾಳಿಗೆ ಹೆದರಿಕೆ ನೀಡುವ ತಂಡವಾಗಿದೆ. ಅವರು ಅಷ್ಟು ಸುಲಭವಾಗಿ ರನ್ ಹೊಡೆಯಲು ಬಿಡುವುದಿಲ್ಲ ನೂರ್ ಅಹ್ಮದ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಮತ್ತು ಮೊಹಮ್ಮದ್ ನಬಿ ಬೌಲಿಂಗ್ ಪರಿಣಾಮಕಾರಿಯಾಗಿರಲಿದೆ. ಈ ಎಲ್ಲದರ ಹೊರತಾಗಿಯೂ ಭಾರತ ಈ ಪಂದ್ಯವನ್ನು ಗೆಲ್ಲುತ್ತದೆ ಎಂದರೆ ತಪ್ಪಾಗಲಾರದು.
ಒಟ್ಟಿನಲ್ಲಿ ಈ ಬಾರಿಯ ವಿಶ್ವಕಪ್ ನ ಪ್ರತಿಯೊಂದು ಪಂದ್ಯವೂ ಹೈವೋಲ್ಟೆಜ್ ಪಂದ್ಯವಾಗಿರುತ್ತದೆ. ಈ ಸಾಲಿನಲ್ಲಿ ಭಾರತ ತಂಡ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ ವಿಶ್ವಕಪ್ ಗೆಲ್ಲಬಹುದಾದ ತಂಡಗಳಲ್ಲಿ ಒಂದಾಗಿದೆ.
ಒಟ್ಟಿನಲ್ಲಿ ಈ ಬಾರಿ ಭಾರತ ತಂಡ ವಿಶ್ವಕಪ್ ಹೆದ್ದು ಬಿಗಲಿ ಎಂದು ನಾವೆಲ್ಲರೂ ಹಾರೈಸೋಣ….


-ಶಿಕ್ಷಣದ ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!