ಭಾರತೀಯ ಕ್ರಿಕೆಟ್ ತಂಡ 1983ರ ವಿಶ್ವಕಪ್ ಗೆದ್ದು ಇಂದಿಗೆ ನಾಲ್ಕು ದಶಕ

1983ರ ವಿಶ್ವಕಪ್ ಗೆದ್ದು ಬಿಗಿದ ಭಾರತದ ಕಪಿಲ್ ಡೆವಿಲ್ಸ್ ಗೆ ಇಂದಿಗೆ ನಾಲ್ಕು ದಶಕ ಲಾರ್ಡ್ಸ್‌ನಲ್ಲಿ ಕ್ರಿಕೆಟ್ ದೈತ್ಯರನ್ನು ಸೋಲಿಸಿ ವಿಶ್ವಕಪ್ ಗೆದ್ದ ಕಪಿಲ್ ಪಡೆ….

ಭಾರತೀಯ ಕ್ರಿಕೆಟ್ ತಂಡ 1983ರ ವಿಶ್ವಕಪ್ ಗೆದ್ದು ಇಂದಿಗೆ ನಾಲ್ಕು ದಶಕ

ಕಪಿಲ್ ದೇವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ತನ್ನ ಮೊದಲ ವಿಶ್ವಕಪ್ ಟ್ರೋಫಿ ಗೆದ್ದು ಇಂದಿಗೆ ಜೂನ್ 25ಕ್ಕೆ 40 ವರ್ಷಗಳು ತುಂಬಿದೆ.
1983ರ ವಿಶ್ವಕಪ್ ಗೆದ್ದು ಇಂದಿಗೆ 4 ದಶಕ: ಲಾರ್ಡ್ಸ್‌ನಲ್ಲಿ ಕ್ರಿಕೆಟ್ ದೈತ್ಯರನ್ನು ಸೋಲಿಸಿದ ಕಪಿಲ್ ದೇವ್ ಪಡೆ

1983 ಜೂನ್ 25 ಇಂಗ್ಲೆಂಡ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ದೈತ್ಯರೆನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಫೈನಲ್‌ ಪಂದ್ಯದಲ್ಲಿ ಭಾರತದ ಕಪಿಲ್ ಡೆವಿಲ್ಸ್ ತಂಡ ತಮ್ಮ ಮೊದಲ ಹಾಗೂ ವಿಶ್ವದ ಮೂರನೇ ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು ಎತ್ತಿಹಿಡಿಯಿತು ಇತಿಹಾಸ ನಿರ್ಮಿಸಿತ್ತು

ಟಾಸ್ ಗೆದ್ದ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಮೈದಾನಕ್ಕೆ ಇಳಿದಿತ್ತು ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮೊದಲೇ ಎರಡು ಬಾರಿ ವಿಶ್ವಕಪ್ ಗೆದ್ದ ವಿಶ್ವದ ದೈತ್ಯ ಕ್ರಿಕೆಟಿಗರ ತಂಡ ವೆಸ್ಟ್ ಇಂಡೀಸ್. ಭಾರತ ತಂಡ ಎಲ್ಲವನ್ನೂ ಯೋಚಿಸಿ ಮೊದಲ ವಿಶ್ವಕಪ್ ಗೆಲ್ಲುವ ವಿಶ್ವಾಸದೊಂದಿಗೆ ಆರಂಭಿಕರಾದ ಸುನಿಲ್ ಗವಾಸ್ಕರ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಅವರು ಬ್ಯಾಟಿಂಗ್ ಕ್ರಿಸ್ ಗೆ ಬಂದಿದ್ದರು. ಉತ್ತಮ ಆರಂಭ ನೀಡುವ ಮೂಲಕ ರನ್ ಕಲೆಹಾಕಿ ಅಡಿಪಾಯ ಹಾಕಿದರು.

ಆದರೆ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೆಲವೇ ರನ್‌ಗಳ ಅಂತರದಲ್ಲಿ ಔಟಾಗುವ ಮೂಲಕ ಭಾರತ ತಂಡವನ್ನು ಲಕ್ಷಾಂತರ ಅಭಿಮಾನಿಗಳನ್ನು ಆತಂಕಕ್ಕೆ ನೂಕಿದ್ದರು. ಎರಡು ವಿಕೆಟ್ ಒಟ್ಟೊಟ್ಟಿಗೆ ಕಳೆದುಕೊಂಡು ಹಿನ್ನಡೆ ಅನುಭವಿಸುವ ಒತ್ತಡದಲ್ಲಿ ಭಾರತ 2 ವಿಕೆಟ್‌ಗೆ 59 ರನ್ ಗಳಿಸಿ ಸಂಕಷ್ಟದಲ್ಲಿತ್ತು.
ಭಾರತ ತಂಡದ ನಾಯಕ ಕಪಿಲ್ ದೇವ್ 15 ರನ್ ಗಳಿಸಿದರು. ಆಲ್‌ರೌಂಡರ್ ಮೊಹಿಂದರ್ ಅಮರನಾಥ್ ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ದೊಡ್ಡ ಪಾತ್ರವನ್ನು ನಿರ್ವಹಿಸಿದರು.ಅಲ್ ರೌಂಡರ್ ಅಮರನಾಥ್ ಬ್ಯಾಟಿಂಗ್‌ನಲ್ಲಿ 26 ರನ್ ಗಳಿಸಿದರೆ,ಅದ್ಭುತ ಬೌಲಿಂಗ್‌ ಮಾಡಿ ಮೂರು ವಿಕೆಟ್ ಕಬಳಿಸುವ ಮೂಲಕ ಭಾರತದ ಐತಿಹಾಸಿಕ ಗೆಲುವಿಗೆ ನೆರವಾದರು.
ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ ಭಾರತ ತಂಡ 60 ಓವರ್‌ಗಳ ಪಂದ್ಯದಲ್ಲಿ 54.4 ಓವರ್‌ಗಳಲ್ಲಿ 183 ರನ್ ಗಳಿಸಿ ಆಲೌಟ್ ಆಯಿತು.

ವೆಸ್ಟ್ ಇಂಡೀಸ್ ಪರ ಆಂಡಿ ರಾಬರ್ಟ್ಸ್ ಮತ್ತು ಮಾಲ್ಕಮ್ ಮಾರ್ಷಲ್ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು.
ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಗೆ ಇಳಿದ ವೆಸ್ಟ್ ಇಂಡೀಸ್ ತಂಡವೂ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾದ ಗಾರ್ಡನ್ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇನ್ಸ್ ಅವರು ಅತ್ಯುತ್ತಮ ಜೊತೆ ಆಟ ಆಡಿದರು. ಭಾರತ ತಂಡ ಒತ್ತಡದಲ್ಲಿದ್ದ ಸಮಯದಲ್ಲಿ ಮೊಹಿಂದರ್ ಅಮರನಾಥ್ ಬೌಲಿಂಗ್ ಇಳಿದು ಡೆಸ್ಮಂಡ್ ಹೇನ್ಸ್ ಅವರನ್ನು ಔಟ್ ಮಾಡುವ ಮೂಲಕ ನೆಲಕಚ್ಚಿ ಆಡುತ್ತಿದ್ದ ಜೊತೆಯಾಟವನ್ನು ಮುರಿದರು. ಅನಂತರ ಭಾರತೀಯ ಬೌಲರ್‌ಗಳು ಒತ್ತಡ ಹೇರಲು ಸಫಲರಾದರು.
ಇನಿಂಗ್ಸಿನ ಉದ್ದಕ್ಕೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಮೊಹಿಂದರ್ ಅಮರನಾಥ್ ಕೇವಲ 12 ರನ್‌ಗಳಿಗೆ ವೆಸ್ಟ್ ಇಂಡೀಸ್ ತಂಡದ ಬಲಿಷ್ಠ ಆಟಗಾರರನ್ನು ಬಲಿ ಪಡೆದಿದ್ದರು ತಮ್ಮ ಚಾಣಾಕ್ಷ ಬೌಲಿಂಗ್ ನಿಂದ 3 ವಿಕೆಟ್‌ಗಳನ್ನು ಪಡೆದರು. ಮದನ್ ಲಾಲ್ ಮತ್ತು ಅಮರನಾಥ್ ನೇತೃತ್ವದ ಭಾರತೀಯ ಬೌಲರ್‌ಗಳು ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು ಮತ್ತು ನಿಯಮಿತವಾಗಿ ವಿಕೆಟ್ ಪಡೆದರು.
ಈ ವೇಳೆ ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪ್ರಖ್ಯಾತಿ ಪಡೆದಿದ್ದ ವಿವಿಯನ್ ರಿಚರ್ಡ್ಸ್ ಅವರನ್ನು ಔಟ್ ಮಾಡಲು ಭಾರತ ತಂಡದ ನಾಯಕ ಕಪಿಲ್ ದೇವ್ ಅವರು ಹಿಮ್ಮುಕವಾಗಿ ಸಾಕಷ್ಟು ದೂರ ಓಡಿ ಅದ್ಭುತ ಕ್ಯಾಚ್ ಹಿಡಿದುಕೊಂಡ ಕ್ಷಣವೇ ಪಂದ್ಯದ ಗತಿಯೆ ಬದಲಾಯಿತು. ಈ ಅದ್ಭುತ ಕ್ಯಾಚ್ ಭಾರತ ತಂಡವನ್ನು ಗೆಲುವಿನ ಸಮೀಪಕ್ಕೆ ತಂದು ನಿಲ್ಲಿಸಿತ್ತು ಅ ನಂತರದಲ್ಲಿ ವೆಸ್ಟ್ ಇಂಡೀಸ್ ತಂಡದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಉರುಳಿತು.
ಅಂತಿಮವಾಗಿ ವೆಸ್ಟ್ ಇಂಡೀಸ್ ವೆಸ್ಟ್ ಇಂಡೀಸ್ ಭಾರತೀಯರ ಎದುರು 52 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತದ ತಂಡ 43 ರನ್‌ಗಳ ಭರ್ಜರಿ ಜಯಗಳಿಸಿ ಮೊದಲ ವಿಶ್ವಕಪ್ ಅನ್ನು ತನ್ನ ಮಡಿಲಿಗೆ ಹಾಕಿಕೊಂಡು ವಿಶ್ವಗೆದ್ದ ವಿಶ್ವದ ಎರಡನೇ ತಂಡವಾಗಿ ಹೊರಹೊಮ್ಮಿತು. ಫೈನಲ್ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಮೊಹಿಂದರ್ ಅಮರನಾಥ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
1983ರ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ಗೆಲುವು ಒಂದು ಐತಿಹಾಸಿಕ ಸಾಧನೆ ಆಯಿತು ಮತ್ತು ಭಾರತೀಯ ಕ್ರಿಕೆಟ್‌ಗೆ ದೊಡ್ಡ ತಿರುವು ಕೊಟ್ಟ ದಿನವಾಯಿತು. ಇದು ದೇಶದಲ್ಲಿ ಕ್ರಿಕೆಟ್ ಅನ್ನು ಪ್ರೀತಿಸುವವರ ಸಂಖ್ಯೆಯನ್ನು ಹೆಚ್ಚಿಸಿತು.
ಕಪಿಲ್ ದೇವ್ ನಾಯಕತ್ವದ ತಂಡ ಭಾರತ ದೇಶಕ್ಕೆ ತನ್ನ ಮೊದಲ ವಿಶ್ವಕಪ್ ಟ್ರೋಫಿ ಜಯಿಸಿ ಕೊಟ್ಟ ದಿನವೇ ಭಾರತದಲ್ಲಿ ಕ್ರಿಕೆಟ್ ಕ್ರಾಂತಿಗೆ ಅಡಿಪಾಯ ಹಾಕಿದಂತಾಯಿತು. 1983ರ ವಿಶ್ವಕಪ್ ಗೆಲುವಿನ ನಂತರದಲ್ಲಿ ಹೊಸ ಪೀಳಿಗೆಯ ಆಟಗಾರರು ಮತ್ತು ಅಭಿಮಾನಿಗಳಿಗೆ ಸ್ಫೂರ್ತಿ ನೀಡಿತು ಎಂದರೆ ತಪ್ಪಾಗಲಾರದು.
ಅಂದಿನಿಂದ ಆರಂಭವಾದ ಭಾರತೀಯರ ಯಶಸ್ಸಿನ ಕ್ರಿಕೆಟ್ ಪಯಣ ಇಂದಿನವರೆಗೂ ವಿಶ್ವದ ನಂಬರ್ ಒನ್ ತಂಡವನ್ನಾಗಿ ರೂಪಿಸಿದೆ. ಭಾರತದ ಕ್ರಿಕೆಟ್ ಬೋರ್ಡ್ ( BCCI ) ವಿಶ್ವದ ನಂಬರ್ ಒನ್ ಸಂಸ್ಥೆಯಾಗಿ ಬೆಳೆದು ನಿಂತಿದೆ ವಿಶ್ವಕ್ಕೆ ಅಗ್ರಮಾನ್ಯ ಆಟಗಾರರನ್ನು ಕೊಟ್ಟ ಹಿರಿಮೆ ಭಾರತೀಯ ಕ್ರಿಕೆಟ್ ಗೆ ಇದೆ. ಇದಕ್ಕೆಲ್ಲ ಕಾರಣ 1983ರ ವಿಶ್ವಕಪ್ ಗೆದ್ದ ಕಪಿಲ್ ಡೆವಿಲ್ಸ್ ತಂಡ…

 - ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!