ನವದೆಹಲಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಅವರ ಗ್ಯಾಂಗ್ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕಳೆದ ಕೆಲವು ದಿನಗಳ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಬಿಷ್ಣೋಯ್ ವಿರುದ್ಧ ಪ್ರಕರಣದ ಬಗ್ಗೆ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದರಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ದಾವೂದ್ ಇಬ್ರಾಹಿಂಗೆ ಹೋಲಿಸಲಾಗಿದೆ. ಗ್ಯಾಂಗ್‌ಸ್ಟರ್ ಟೆರರ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ರಾಷ್ಟ್ರೀಯ ತನಿಖಾ ಸಂಸ್ಥೆ ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್, ಕೆನಡಾ ಮತ್ತು ಭಾರತಕ್ಕೆ ಬೇಕಾಗಿರುವ ಗೋಲ್ಡಿ ಬ್ರಾರ್ ಹಾಗೂ ಹಲವಾರು ಗ್ಯಾಂಗ್ಸ್ಟರ್ಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರಂತೆ…..!!?
ದಾವೂದ್ನ D ಕಂಪನಿಯಂತೆ ಬೆಳೆಯುತ್ತಿದೆಯಂತೆ ಬಿಷ್ಣೋಯ್ ಗ್ಯಾಂಗ್! ಈತನ ಪಡೆಯಲ್ಲಿದ್ದಾರೆ 700 ಶಾರ್ಪ್ ಶೂಟರ್ಸ್!
ದಾವೂದ್ ಇಬ್ರಾಹಿಂ-ಲಾರೆನ್ಸ್ ಬಿಷ್ಣೋಯ್
ನವದೆಹಲಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಅವರ ಗ್ಯಾಂಗ್ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕಳೆದ ಕೆಲವು ದಿನಗಳ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಬಿಷ್ಣೋಯ್ ವಿರುದ್ಧ ಪ್ರಕರಣದ ಬಗ್ಗೆ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದರಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ದಾವೂದ್ ಇಬ್ರಾಹಿಂ ಗ್ಯಾಂಗಿಗೆ
ಹೋಲಿಸಲಾಗಿದೆ. ಗ್ಯಾಂಗ್‌ಸ್ಟರ್ ಟೆರರ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ರಾಷ್ಟ್ರೀಯ ತನಿಖಾ ಸಂಸ್ಥೆ ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್, ಕೆನಡಾ ಮತ್ತು ಭಾರತಕ್ಕೆ ಬೇಕಾಗಿರುವ ಗೋಲ್ಡಿ ಬ್ರಾರ್ ಹಾಗೂ ಹಲವಾರು ಗ್ಯಾಂಗ್ಸ್ಟರ್ಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಹಲವರು ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದೆ.ದಾವೂದ್ ಇಬ್ರಾಹಿಂನ ಹಾದಿಯಲ್ಲೇ ಬಿಷ್ಣೋಯ್
ಲಾರೆನ್ಸ್ ಬಿಷ್ಣೋಯ್, ದಾವೂದ್ ಇಬ್ರಾಹಿಂನ ಹಾದಿಯನ್ನು ಅನುಸರಿಸುತ್ತಿದ್ದಾನೆ ಎಂದು ಎನ್ಐಎ ತನ್ನ ಚಾರ್ಜ್ ಶೀಟ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಟೆರರ್ ಸಿಂಡಿಕೇಟ್ ಉತ್ತರ ಭಾರತದಾದ್ಯಂತ ಹರಡಿದೆ ಎಂದು ಹೇಳಿದೆ. ದಾವೂದ್ ಇಬ್ರಾಹಿಂ 90ರ ದಶಕದಲ್ಲಿ ಸಣ್ಣಪುಟ್ಟ ಅಪರಾಧಗಳನ್ನು ಮಾಡುವ ಮೂಲಕ ತನ್ನ ಜಾಲವನ್ನು ಕಟ್ಟಿಕೊಂಡಿದ್ದ. ನಂತರ ಭಯೋತ್ಪಾದಕರೊಂದಿಗೆ ಮೈತ್ರಿ ಮಾಡಿಕೊಂಡು ಡ್ರಗ್ಸ್ ಸ್ಮಗ್ಲಿಂಗ್, ಟಾರ್ಗೆಟ್ ಕಿಲ್ಲಿಂಗ್, ಸುಲಿಗೆ ದಂಧೆ ಮೂಲಕ ದಾವೂದ್ ಇಬ್ರಾಹಿಂ ಡಿ ಕಂಪನಿಯನ್ನು ಸ್ಥಾಪಿಸಿ ಅಪರಾಧ ಕೃತ್ಯಗಳನ್ನು ಹರಡಿಸಿದ್ದ ಎಂದು ತಿಳಿಸಿದೆ. ಇದೀಗ ದಾವೂದ್ ಇಬ್ರಾಹಿಂ ಮತ್ತು ಡಿ ಕಂಪನಿಯಂತೆಯೇ, ಬಿಷ್ಣೋಯ್ ಗ್ಯಾಂಗ್ ಸಣ್ಣ ಅಪರಾಧಗಳೊಂದಿಗೆ ಪ್ರಾರಂಭವಾಗಿ, ನಂತರ ತನ್ನದೇ ಆದ ಗ್ಯಾಂಗ್ ಅನ್ನು ರಚಿಸಿದಕೊಂಡು ಉತ್ತರ ಭಾರತದಾದ್ಯಂತ ತನ್ನ ಗ್ಯಾಂಗ್ ಹರಡಿಸಿಕೊಂಡಿದ್ದಾನೆ ಎಂದು ಎನ್ಎಐ ತಿಳಿಸಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಲ್ಲಿ 700 ಕ್ಕೂ ಹೆಚ್ಚು ಶೂಟರ್ಗಳುಬಿಷ್ಣೋಯ್ ಗ್ಯಾಂಗ್ಅನ್ನ ಕೆನಡಾ ಪೊಲೀಸ್ ಮತ್ತು ಭಾರತೀಯ ಏಜೆನ್ಸಿಗೆ ಬೇಕಾಗಿರುವ ಸತ್ವಿಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಿಷ್ಣೋಯ್ ಗ್ಯಾಂಗ್‌ನಲ್ಲಿ 700ಕ್ಕೂ ಹೆಚ್ಚು ಶೂಟರ್‌ಗಳಿದ್ದು, ಅವರಲ್ಲಿ 300 ಮಂದಿ ಪಂಜಾಬ್‌ನವರು ಎಂದು ಎನ್‌ಐಎ ತಿಳಿಸಿದೆ.
ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣದ ವೇದಿಕೆಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮೂಲಕ ಅಪ್‌ಲೋಡ್ ಮಾಡಲಾಗಿದೆ. ಕೋರ್ಟ್ಗೆ ತೆರಳುವ ಮಾರ್ಗದಲ್ಲಿ ಬಿಷ್ಣೋಯ್ ಫೋಟೋ ಹಾಕಿದ್ದು, ಈ ಮೂಲಕ ಗ್ಯಾಂಗ್‌ನ ಪ್ರಚಾರ ನಡೆದಿದೆ. 2020-21ರವರೆಗೆ ಸುಲಿಗೆಯಿಂದ ಬಿಷ್ಣೋಯ್ ಗ್ಯಾಂಗ್ ಕೋಟ್ಯಂತರ ರೂಪಾಯಿ ಗಳಿಸಿದ್ದು, ಆ ಹಣವನ್ನು ಹವಾಲಾ ಮೂಲಕ ಹೊರ ದೇಶಗಳಿಗೆ ರವಾನಿಸಲಾಗಿದೆ ಎಂದು ಎಎನ್ಐ ತಿಳಿಸಿದೆ.
ಈ ರಾಜ್ಯಗಳಲ್ಲಿ ಬಿಷ್ಣೋಯ್ ಗ್ಯಾಂಗ್ ಆಕ್ಟೀವ್NIA ಪ್ರಕಾರ, ಬಿಷ್ಣೋಯ್ ಗ್ಯಾಂಗ್ ಒಂದು ಕಾಲದಲ್ಲಿ ಪಂಜಾಬ್‌ಗೆ ಮಾತ್ರ ಸೀಮಿತವಾಗಿತ್ತು. ಆದರೆ ಅವನು ತನ್ನ ಕುತಂತ್ರ ಬುದ್ದಿ ಮತ್ತು ಅವನ ಆತ್ಮೀಯ ಸ್ನೇಹಿತ ಗೋಲ್ಡಿ ಬ್ರಾರ್ ಜೊತೆ ಸೇರಿ ತನ್ನ ಗ್ಯಾಂಗ್ ಅನ್ನ ಹರಿಯಾಣ, ದೆಹಲಿ ಮತ್ತು ರಾಜಸ್ಥಾನದ ಗ್ಯಾಂಗ್‌ಗಳೊಂದಿಗೆ ಮೈತ್ರಿ ಮಾಡಿಕೊಂಡು ದೊಡ್ಡ ಗ್ಯಾಂಗ್ ಅನ್ನು ರಚಿಸಿದ್ದಾನೆ.
ಬಿಷ್ಣೋಯ್ ಗ್ಯಾಂಗ್ ಈಗ ಉತ್ತರ ಭಾರತದಾದ್ಯಂತ, ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ ಮತ್ತು ಜಾರ್ಖಂಡ್‌ನಲ್ಲಿ ಹರಡಿಕೊಂಡಿದೆ. ಈ ಗ್ಯಾಂಗ್ ಯುವಕರನ್ನು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರೀತಿಯ ಆಮಿಷ ನೀಡಿ ಗ್ಯಾಂಗ್‌ಗಳಿಗೆ ಸೇರಿಸಿಕೊಳ್ಳಲಾಗುತ್ತಿದೆ.
ಯುವಕರನ್ನು ವಿದೇಶಕ್ಕೆ ಕಳುಹಿಸುವ ಆಮಿಷ
ಕೆನಡಾ ಅಥವಾ ತಮ್ಮ ಇಷ್ಟದ ದೇಶಕ್ಕೆ ಶಿಫ್ಟ್ ಮಾಡುವುದಾಗಿ ಆಮಿಷವೊಡ್ಡಿ ಯುವಕರನ್ನ ಗ್ಯಾಂಗ್‌ಗೆ ಸೇರಿಸಿಕೊಳ್ಳುತ್ತಿದ್ದಾರೆ. NIA ಪ್ರಕಾರ, ಪಾಕಿಸ್ತಾನದಲ್ಲಿ ಕುಳಿತಿರುವ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂದಾ, ಪಂಜಾಬ್‌ನಲ್ಲಿ ಟಾರ್ಗೆಟ್ ಮರ್ಡರ್ ಮತ್ತು ಅಪರಾಧ ಚಟುವಟಿಕೆಗಳನ್ನು ನಡೆಸಲು ಬಿಷ್ಣೋಯ್ ಗ್ಯಾಂಗ್‌ನ ಶೂಟರ್ಗಳನ್ನೇ ಬಳಸುತ್ತಾನೆ. ಯುಎಪಿಎ ಅಡಿಯಲ್ಲಿ ಎನ್‌ಐಎ ಕೆಲವು ದಿನಗಳ ಹಿಂದೆ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಸೇರಿದಂತೆ 16 ದರೋಡೆಕೋರರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು.