ಚಂದ್ರಯಾನ -3: ಜುಲೈ 13ರಂದು ಮಧ್ಯಾಹ್ನ 2:43ಕ್ಕೆ ಚಂದ್ರಯಾನ-3 ಉಡಾವಣೆ: ಇಸ್ರೋ ಘೋಷಣೆ

ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆಗೆ ಇಸ್ರೋ ದಿನಾಂಕ ಘೋಷಿಸಿದೆ. ಜುಲೈ 13 ರಂದು ಮಧ್ಯಾಹ್ನ 2:43ಕ್ಕೆ ಭಾರತದ ಚಂದ್ರಯಾನ-3 ನಭಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ.

ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿಕೆ

ಇಸ್ರೋ ಮತ್ತೊಂದು ವಿಕ್ರಮಕ್ಕೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ಚಂದ್ರಯಾನ ಸರಣಿಯ ಮೂರನೇ ನೌಕೆಯನ್ನು ನಭಕ್ಕೆ ಹಾರಿಸಲಿದೆ.
ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿಕೆ
ನವದೆಹಲಿ:ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಜುಲೈ 13ರಂದು ಮಧ್ಯಾಹ್ನ 2:43ರ ಸಮಯಕ್ಕೆ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಘೋಷಿಸಿದೆ. ಇದು ಲ್ಯಾಂಡರ್ ಮತ್ತು ರೋವರ್ ಮಾದರಿಯನ್ನು ಹೊಂದಿದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಯುವ ಮತ್ತು ರೋವರ್​ ಸಂಚರಿಸುವ ಸಾಮರ್ಥ್ಯ ಪ್ರದರ್ಶಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಬಹುನಿರೀಕ್ಷಿತ ಚಂದ್ರಯಾನ-3 ನೌಕೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಮೂಲಕ ಉಡಾವಣೆ ಮಾಡಲಾಗುವುದು. ಇದಕ್ಕಾಗಿ ಜುಲೈ 13ರಂದು ಮುಹೂರ್ತ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಅತ್ಯಂತ ಸೂಕ್ಷ್ಮ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆಯನ್ನು ಇಳಿಸಲಾಗುವುದು. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು ಚಂದ್ರನ ಕಕ್ಷೆಯಲ್ಲಿ 100 ಕಿ.ಮೀವರೆಗೆ ಸಾಗಿಸುವ ಶಕ್ತಿ ಇದಕ್ಕಿದೆ. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥವನ್ನು ಅಧ್ಯಯನ ನಡೆಸುವ ಲೂನಾರ್‌ ರಿಗೊಲಿತ್, ಅಲ್ಲಿಯ ಭೂಕಂಪನ ಅಧ್ಯಯನ ಮಾಡುವ ಲೂನಾರ್‌ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನವನ್ನು ನಡೆಸಲಾಗುವುದು ಎಂದು ಇಸ್ರೋ ಹೇಳಿದೆ
ಪ್ರೊಪಲ್ಷನ್ ಮಾಡ್ಯೂಲ್ ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು 100 ಕಿ.ಮೀ ಚಂದ್ರನ ಕಕ್ಷೆಯವರೆಗೆ ಸಾಗಿಸುತ್ತದೆ. ಇದು ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಪೋಲಾರಿಮೆಟ್ರಿಕ್ ಅಳತೆಗಳನ್ನು ಅಧ್ಯಯನ ಮಾಡಲು ವಾಸಯೋಗ್ಯ ಗ್ರಹ ಭೂಮಿಯ ಪೇಲೋಡ್‌ನ ಸ್ಪೆಕ್ಟ್ರೋ-ಪೋಲಾರಿಮೆಟ್ರಿಯನ್ನು ಹೊಂದಿದೆ
ಈ ಬಗ್ಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಇಸ್ರೋದ ಚಂದ್ರಯಾನದ ಮೂರನೇ ಆವೃತ್ತಿಯಾದ ಚಂದ್ರಯಾನ-3 ಯೋಜಿಸಿದಂತೆ ಜುಲೈ 13 ಮಧ್ಯಾಹ್ನ 2:43ರ ಸಮಯಕ್ಕೆ ಉಡಾವಣೆಯಾಗಲಿದೆ. ಪರೀಕ್ಷಾರ್ಥ ಪ್ರಯೋಗಗಳು ಈಗಾಗಲೇ ನೆಡೆದಿದೆ
ಯು.ಆರ್. ರಾವ್ ಉಪಗ್ರಹ ಕೇಂದ್ರದಿಂದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡಾವಣಾ ಕೇಂದ್ರವನ್ನು ಚಂದ್ರಯಾನ-3 ನೌಕೆ ಈಗಾಗಲೇ ತಲುಪಿದ್ದು ಅಂತಿಮ ಸಿದ್ಧತೆಗಳು ಪೂರ್ಣಗೊಂಡಿದೆ. ಉಡಾವಣೆಗೆ ಎಲ್​ವಿಎಂ-3 ಬಳಸಲಾಗುವುದು. ಅದರ ಜೋಡಣೆ ಪೂರ್ಣಗೊಂಡಿದೆ.
ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ ನೌಕೆಯನ್ನು ಜಿಎಸ್ಎಲ್ ವಿ ಮಾರ್ಕ್ 3 ವಾಹಕದ ಮೂಲಕ ಉಡಾವಣೆಯಾಗಲಿದೆಇದಕ್ಕಾಗಿ 615 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಇಸ್ರೋ ಹೇಳಿದೆ. 
 
ಉಡಾವಣೆಯ ಸಮಯದಲ್ಲಿ ಯಾವುದೇ ತೊಂದರೆಗಳು ಉಂಟಾಗದಂತೆ ಚಂದ್ರಯಾನ-3 ರಲ್ಲಿ ಹಾರ್ಡ್‌ವೇರ್, ರಚನೆ, ಕಂಪ್ಯೂಟರ್‌ಗಳು, ಸಾಫ್ಟ್‌ವೇರ್ ಮತ್ತು ಸಂವೇದಕಗಳಲ್ಲಿ ಮಹತ್ತರ ಬದಲಾವಣೆ ಕಾರ್ಯ ನಡೆದಿದೆ. ಹೆಚ್ಚು ಇಂಧನವನ್ನೂ ಅದರಲ್ಲಿ ಅಳವಡಿಸಲಾಗಿದೆ. ನೌಕೆಯ ಲ್ಯಾಂಡಿಂಗ್ ಕಾಲುಗಳನ್ನು ಬಲಪಡಿಸಲಾಗಿದೆ. ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಲು ದೊಡ್ಡ ಸೌರ ಫಲಕಗಳನ್ನು ಜೋಡಿಸಲಾಗಿದೆ. ನೌಕೆಯ ವೇಗವನ್ನು ಅಳೆಯಲು ಅಭಿವೃದ್ಧಿಪಡಿಸಿರುವ ‘ಲೇಸರ್ ಡಾಪ್ಲರ್ ವೆಲೋಸಿಮೀಟರ್’ ಉಪಕರಣವನ್ನೂ ಅದರಲ್ಲಿ ಅಳವಡಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದರು

– ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!