Headlines

ಆಟೋದಲ್ಲಿತ್ತು ಕೋಟಿ ಕೋಟಿ ಹಣ.! ಚಾಲಕ ಸೇರಿ ಇಬ್ಬರ ಬಂಧನ.!

ಆಟೋದಲ್ಲಿತ್ತು ಕೋಟಿ ಕೋಟಿ ಹಣ.! ಚಾಲಕ ಸೇರಿ ಇಬ್ಬರ ಬಂಧನ.!

ಅಶ್ವಸೂರ್ಯ/ಕೆರಳ: ಕೋಚ್ಚಿಯ ವೆಲ್ಲಿಂಗ್ಟನ್ ದ್ವೀಪದಲ್ಲಿ ಕಣ್ಣಂಗಾಡ್ ಸೇತುವೆಯ ಬಳಿ ನಿಂತಿದ್ದ ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 2.7 ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ಪೊಲೀಸರು ತಪಾಸಣೆ ನಡೆಸಿದಾಗ ಇಷ್ಟು ದೊಡ್ಡ ಮೊತ್ತದ ಹಣ ಪತ್ತೆಯಾಗಿದ್ದು,ಪೊಲೀಸರೆ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.! ತಕ್ಷಣವೇ ಆಟೋರಿಕ್ಷಾ ಚಾಲಕ ರಾಜಗೋಪಾಲ್ ಮತ್ತು ಬಿಹಾರ ಮೂಲದ ಸಬಿಶ್ ಅಹ್ಮದ್ ಎಂಬಾತನನ್ನು ಬಂಧಿಸಿದ್ದಾರೆ. ಈ ಹಣ ಕಪ್ಪು (ಹವಾಲ) ಹಣವೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಎರ್ನಾಕುಲಂ ಬ್ರೋಡ್‌ವೇಯಲ್ಲಿರುವ ಸಂಸ್ಥೆಯೊಂದರ ಮಾಲೀಕರು ಈ ಹಣವನ್ನು ನೀಡಿದ್ದಾರೆ ಎಂಬ ಸುಳಿವು ಸಿಕ್ಕಿದೆ. ವೆಲ್ಲಿಂಗ್ಟನ್ ಕಡೆಗೆ ಬರುವಂತೆ ಸೂಚನೆ ನೀಡಿದ ಬಳಿಕ ಆರೋಪಿಗಳು ಹಣದೊಂದಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ಹಣದ ಮೂಲ ಮತ್ತು ಉದ್ದೇಶದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಣದ ಮೂಲ ಮತ್ತು ಸಾಗಾಟದ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಎರ್ನಾಕುಲಂನಿಂದ ವೆಲ್ಲಿಂಗ್ಟನ್‌ಗೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಅದು ಆಟೋದಲ್ಲಿ ಸಾಗಿಸುತ್ತಿದ್ದುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಯು ಮುಂದುವರೆದಿದ್ದು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!