ಮಡದಿಯನ್ನು ಮರ್ಡರ್ಮಾಡಿ ಎಸ್ಕೇಪ್ ಆಗಿದ್ದ ಪತಿ ಮಹಾಶಯ ಪುಣೆಯಲ್ಲಿ ಅಂದರ್.
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಪುಣೆ: ಮಡದಿಯನ್ನು ಮರ್ಡರ್ಮಾಡಿ ಸೂಟ್ ಕೇಸ್ನಲ್ಲಿ ತುಂಬಿ ಎಸ್ಕೆಪ್ ಆಗಿದ್ದ ಆರೋಪಿ ರಾಕೇಶ್ನನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ನೀಡಿದ ಮಾಹಿತಿ ಮೇರೆಗೆ ಪುಣೆ ಪೊಲೀಸರ ತಂಡ ವಶಕ್ಕೆ ಪಡೆದಿದ್ದಾರೆ.
ಹುಳಿಮಾವು ಠಾಣೆ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯ ವಾಲ್ ಮಾರ್ಕ್ ಅಪಾರ್ಟೆಂಟ್ ಮುಂಭಾಗ ಈ ಘಟನೆ ಬೆಳಿಕಿಗೆ ಬಂದಿತ್ತು. ನಿನ್ನೆ ಮಧ್ಯಾಹ್ನ ಪತ್ನಿ ಗೌರಿಯನ್ನ ಹತ್ಯೆ ಮಾಡಿ ನಂತರ ದೇಹವನ್ನ ತುಂಡರಿಸಿ ಸೂಟ್ಕೇಸ್ನಲ್ಲಿ ತುಂಬಿ ಎಸ್ಕೆಪ್ ಆಗಿದ್ದ ಗಂಡ. ಅಕ್ಕಪಕ್ಕದವರಿಗೆ ವಾಸನೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಟ್ ಕೇಸ್ ತೆರೆದು ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ.ಮೃತ ಮಹಿಳೆಯ ಹೆಸರು ಗೌರಿ ಎಂದು ತಿಳಿದಿದ್ದು ಆಕೆಯ ಕತ್ತನ್ನ ಅರ್ಧ ಕೊಯ್ದು ಹತ್ಯೆಮಾಡಿದ ಹಂತಕ ನಂತರ ಸೂಟ್ ಕೇಸ್ಗೆ ತುಂಬಿರುವುದು ತಿಳಿದುಬಂದಿದೆ.
ಕೊಲೆ ಮಾಡಿ ನಿನ್ನೆ ರಾತ್ರಿ 12.30ಕ್ಕೆ ರಸ್ತೆಯಲ್ಲಿ ಒಬ್ಬನೆ ನಡೆದುಕೊಂಡು ಹೋಗಿ ಅಪಾರ್ಟ್ ಮೆಂಟ್ ಒಂದರ ಬಳಿ ನಿಲ್ಲಿಸಿದ್ದ ಕಾರು ತೆಗೆದುಕೊಂಡು ಮೃತ ಮಹಿಳರಯ ಗಂಡ ರಾಕೇಶ್ ಅಲ್ಲಿಂದ ಎಸ್ಕೆಪ್ ಆಗಿದ್ದಾನೆ. ರಾಕೇಶ್ಗೆ ಕೆಳಗಿನ ಮನೆಯವರು ಕಾಲ್ ಮಾಡಿದಾಗ ನನ್ನ ಹೆಂಡತಿಯನ್ನು ಕೊಲೆ ಮಾಡಿ ಸೂಟ್ ಕೇಸಿನೊಳಗೆ ತುಂಬಿರೋದಾಗಿ ಹೇಳಿದ್ದನಂತೆ.!
ಕೆಳಗಿನ ಮನೆಯ ಬಾಡಿಗೆದಾರರು ಕೂಡಲೆ ಮನೆ ಮಾಲೀಕರಿಗೆ ಕರೆ ಮಾಡಿದ್ದಾರೆ. ಮನೆ ಮಾಲೀಕ ಮನೆ ಬಳಿ ಬಂದು ನೋಡಿ ಸಂಜೆ 5.30 ಕ್ಕೆ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಹಂತಕವ ರಾಕೇಶ್ ಹೆಂಡತಿಯನ್ನು ಕೊಲೆಮಾಡಿ ಕತ್ತು ಮತ್ತು ಹೊಟ್ಟೆ ಕೊಯ್ದು ಆಕೆಯ ದೇಹ ಮಡಚಿ ಸೂಟ್ ಕೇಸ್ನೊಳಗೆ ತುಂಬಿದ್ದಾನೆ.
ಒಂದು ತಿಂಗಳ ಹಿಂದೆ ದೊಡ್ಡ ಕಮ್ಮನಹಳ್ಳಿಯಲ್ಲಿರುವ ಮನೆಗೆ ಬಾಡಿಗೆಗೆ ಬಂದಿದ್ದ ರಾಕೇಶ್ ದಂಪತಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಕೊಲೆಗೆ ಈವರೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಪುಣೆ ಪೊಲೀಸರ ವಶದಲ್ಲಿರೋ ಆರೋಪಿಯನ್ನು ಕರೆತರಲು ಹುಳಿಮಾವು ಪೊಲೀಸರು ಪುಣೆಗೆ ತೆರಳಿದ್ದಾರೆ. ಹಂತಕ ರಾಕೇಶ್ನನ್ನು ಕರೆತಂದು ವಿಚಾರಣೆ ಮಾಡಿದ ಬಳಿಕ ಹತ್ಯೆ ಹಿಂದಿನ ಅಸಲಿ ವಿಷಯ ಬಯಲಾಗಲಿದೆ.