ಅಂಗಡಿಯಿಂದ ” HOW TO KILL ” ಎನ್ನುವ ಬುಕ್ ಖರೀದಿಸಿ ತಂದು ಓದಿದ್ದ ಹಂತಕಿ..!
ಬೆಂಗಳೂರು: ಮಗಳ ಜೊತೆ ಅತ್ತೆ ಬೇಕು ಅಂದ.!ಕೊನೆಗೆ ಅತ್ತೆಯೆ ಅಳಿಯನ ಚಟ್ಟಕಟ್ಟಿದ್ದಾಳೆ.! ಇದು ರೀಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಹತ್ಯೆ ಪ್ರಕರಣದ ಬಿಗ್ ಟ್ವಿಸ್ಟ್.!?
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬೆಂಗಳೂರು: ಸೂಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಹತ್ಯೆಯಾದ ರೀಯಲ್ ಎಸ್ಟೇಟ್ ಉದ್ಯಮಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಗತಿಗಳು ಬಯಲಾಗುತ್ತಿವೆ. ಮಾರ್ಚ್ 22 ರಂದು ಬೆಂಗಳೂರಿನ ಹೆಸರುಘಟ್ಟ ಬಳಿಯ ಬಿಜಿಎಸ್ ಲೇಔಟ್ ಬಳಿ ಮಾಗಡಿ ಶಾಸಕ ಎಚ್ .ಸಿ.ಬಾಲಕೃಷ್ಣ ಆಪ್ತ ಉದ್ಯಮಿ ಲೋಕನಾಥ್ ಸಿಂಗ್ ನ ಕೊಲೆಯಾಗಿತ್ತು. ಅದರೆ ಈ ಹತ್ಯೆಯ ಹಿಂದೆ ಯಾವುದೇ ವೈರಿಗಳ ಅಥವಾ ರೌಡಿಗಳಲ್ಲ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದ್ದು. ಲೋಕನಾಥ್ ಸಿಂಗ್ ನನ್ನು ಹೆಣ್ಣುಕೊಟ್ಟ ಅತ್ತೆಯೇ ಮಸಣ ಸೇರಿಸಿದ್ದಾಳೆ.! ಇನ್ನೂ ಈ ಹತ್ಯೆಯಲ್ಲಿ ಲೋಕನಾಥ್ ಸಿಂಗ್ನ ಹೆಂಡತಿಕೂಡ ಅಮ್ಮನಿಗೆ ಗಂಡನ ಹತ್ಯೆಮಾಡಲು ಸಾಥ್ ನೀಡಿರುವುದು ಬೆಳಕಿಗೆ ಬಂದಿದೆ.
ಸದ್ಯ ಸೋಲದೇವನಹಳ್ಳಿ ಪೊಲೀಸರು ಅಮ್ಮ ಮಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು.ಹತ್ಯೆಯದ ಲೋಕನಾಥ್ ಸಿಂಗನ ಸಾಕಷ್ಟು ಕರ್ಮಕಾಂಡಗಳು ಬಯಲಾಗುತ್ತಿವೆ. ಕಳೆದ ಡಿಸೆಂಬರ್ ನಲ್ಲಿ ರಿಯಲ್ ಎಸ್ಟೆಟ್ ಉದ್ಯಮಿ ಕೃಷ್ಣ ಸಿಂಗ್ ಹಾಗೂ ಹೇಮ ದಂಪತಿಯ ಮಗಳು ಎಂಬಿಎ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ಯಶಸ್ವಿನಿಯನ್ನು 37 ವರ್ಷದ ಲೋಕನಾಥ್ ಸಿಂಗ್ ಕುಣಿಗಲ್ ಗೆ ಕರೆದೊಯ್ದು ರಿಜಿಸ್ಟರ್ ಮದುವೆಯಾಗಿದ್ದನಂತೆ.! ಆದರೆ ಮದುವೆ ವಿಚಾರ ಹುಡುಗಿ ಕುಟುಂಬಕ್ಕೆ ಪೋಷಕರಿಗೆ ಇಷ್ಟ ಇಲ್ಲದ ಕಾರಣ, ಕುಣಿಗಲ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿ, ಪತ್ನಿಯನ್ನು ಅವರ ಪೋಷಕರ ಜೊತೆಯೇ ಬಿಟ್ಟಿದ್ದ.
ಕೆಲ ದಿನಗಳ ಬಳಿಕ ಲೋಕನಾಥ್ ಸಿಂಗ್ನ ವ್ಯವಹಾರ, ಅಕ್ರಮ ಸಂಬಂಧಗಳ ಬಗ್ಗೆ ಪತ್ನಿ ಯಶಸ್ವಿನಿಗೆ ತಿಳಿದಿದೆ. ಈ ಬಗ್ಗೆ ಪ್ರಶ್ನೆ ಮಾಡಿದ ಪತ್ನಿ ಜೊತೆ ಜಗಳ ಕೂಡ ಆಗಿದೆ. ಎರಡು ವಾರದ ಹಿಂದೆ ಪತ್ನಿಯ ಕುಟುಂಬಕ್ಕೆ ಮದುವೆಯಾಗಿರೋ ವಿಚಾರ ಗೊತ್ತಾಗಿದೆ. ಈ ವೇಳೆ ಪತ್ನಿ ಕುಟುಂಬಸ್ಥರು ಜೊತೆ ಲೋಕನಾಥ್ ಸಿಂಗ್ ಗೆ ಗಲಾಟೆಯಾಗಿದೆ.ಬಳಿಕ ಲೋಕನಾಥ್ ಪತ್ನಿ ಯಶಸ್ವಿನಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ಮಗಳ ಭವಿಷ್ಯ ಹಾಗೂ ಕುಟುಂಬದ ಮರ್ಯಾದೆಗೆ ಅಂಜಿ ನೊಂದ ಯಶಸ್ವಿನಿ ತಾಯಿ ಹೇಮ, ಇವನಿಗೆ ಒಂದು ಗತಿ ಕಾಣಿಸಬೇಕು ಎಂದು ಅಂದೆ ಮೂಹರ್ತ ಫಿಕ್ಸ್ ಮಾಡಿದ್ದಾರೆ.
ಹೇಮ ಹಾಗೂ ಮಗಳು ಯಶಸ್ವಿನಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡು. ಅದರಂತೆ ಯಶ್ವಿನಿ ನಿನ್ನ ಜೊತೆ ಮಾತನಾಡಬೇಕೆಂದು ಲೋಕನಾಥನನ್ನು ಚಿಕ್ಕಬಾಣವರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಳೆ.ಇವರ ಹಿಂದೆಯೇ ಯಶಸ್ವಿನಿ ತಾಯಿ ಹೇಮ ಸಹ ಆಟೋದಲ್ಲಿ ಕಾರನ್ನು ಫಾಲೋ ಮಾಡಿಕೊಂಡು ಹೋಗಿದ್ದೆ. ಬಳಿಕ ನಿರ್ಜನ ಪ್ರದೇಶದಲ್ಲಿ ನಿದ್ದೆ ಮಾತ್ರೆ ಬೆರಸಿದ್ದ ಊಟವನ್ನು ತಿನ್ನಿಸಿದ್ದಾಳೆ. ಹಾಗೇ ಪತಿಗೆ ಮದ್ಯ ಕುಡಿಸಿದ್ದಾಳೆ. ನಂತರ ಲೋಕನಾಥ್ ಮತ್ತಿನಲ್ಲಿ ತೇಲಾಡಿದ್ದಾನೆ. ಆಗ ಹೇಮ ಲೋಕನಾಥನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.ಅಲ್ಲಿಗೆ ತಾವಂದುಕೊಂಡಂತೆ ಸೋಮನಾಥನ ಕೊಲೆಮಾಡಿ ಮುಗಿಸಿದ್ದಾರೆ.ಬಾರಿ ಬಿಲ್ಡಪ್ ಕೊಡುತ್ತಿದ್ದ ರೀಯಲ್ ಎಸ್ಟೇಟ್ ಉದ್ಯಮಿಯೊಬ್ಬ ಹೆಣ್ಣೊಬ್ಬಳ ಕೈಯಿಂದ ಕತ್ತು ಸೀಳಿಸಿಕೊಂಡು ಉಸಿರು ಚಲ್ಲಿದ್ದಾನೆ.!
ಸೋಲದೇವನಹಳ್ಳಿ ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ಪ್ರಕರಣದಲ್ಲಿ ಪತ್ನಿ ಹಾಗೂ ಅತ್ತೆಯ ಬಂಧನವಾಗಿದೆ.ಹತ್ಯೆಗೆ ಸಂಬಂದಿಸಿದಂತೆ ತಾಯಿ ಮಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಯಾದ ಉದ್ಯಮಿಯ ಕರಾಳ ಮುಖಗಳು ಒಂದೊಂದಾಗಿ ಬಯಲಾಗತೋಡಗಿದೆ. ಹತ್ಯೆಗೆ ಕಾರಣವೇನು ಎಂಬ ವಿಷಯವನ್ನು ಆರೋಪಿಗಳು ಒಂದೊಂದಾಗಿ ಬಾಯಿಬಿಡುತ್ತಿದ್ದಾರೆ. ಹಲವು ಮಹಿಳೆಯರ ಜತೆ ಅನೈತಿಕ ಸಂಬಂಧ ಹೊಂದಿದ್ದ ಉದ್ಯಮಿ ಲೋಕನಾಥ್ ಸಿಂಗ್ ಪತ್ನಿಯ ತಾಯಿಯ ಮೇಲೂ ಕಣ್ಣು ಹಾಕಿದ್ದನಂತೆ.ಹೀಗಾಗಿ ಅಳಿಯನ ನೀಚತನವನ್ನು ಸಹಿಸಿಕೊಳ್ಳಲಾಗದೆ ತಾಯಿ ಮಗಳು ಸೇರಿ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.! ಲೋಕನಾಥ್ ಪತ್ನಿಯ ಜೋತೆಗೆ ಆಕೆ
ಅಪ್ರಾಪ್ತ ವಯಸ್ಸಿನಲ್ಲಿದ್ದಾಗಲೇ ಸಲುಗೆ ಬೆಳೆಸಿದ್ದ ಉದ್ಯಮಿ,ಆಕೆಯ ಖಾಸಗಿ ವಿಡಿಯೊ ಮಾಡಿಟ್ಟುಕೊಂಡು ಯುವತಿಯ ಬ್ಲ್ಯಾಕ್ಮೇಲ್ ಮಾಡಿ ಮದುವೆಯಾಗಿದ್ದನಂತೆ.ನೀನು ನನ್ನನ್ನು ಮದುವೆಯಾಗದಿದ್ದರೆ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಧಮ್ಕಿ ಹಾಕಿದ್ದನಂತೆ.! ಬಳಿಕ ಡಿಸೆಂಬರ್ನಲ್ಲಿ ಹೆದರಿಸಿ ಒತ್ತಾಯವಾಗಿ ಯುವತಿ ಜತೆ ಉದ್ಯಮಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದ.
ಮದುವೆ ಬಳಿಕ ಉದ್ಯಮಿಯ ವಂಚನೆಯ ಜಾಲ ಹೆಂಡತಿಗೆ ಗೊತ್ತಾಗಿದೆ. ಹಲವು ಮಹಿಳೆಯರ ಜತೆ ಉದ್ಯಮಿ ಸಂಬಂಧ ಹೊಂದಿದ್ದನಂತೆ. ಅಲ್ಲದೇ ಪತ್ನಿತ ತಾಯಿಯ ಮೇಲೂ ಆತ ಕಣ್ಣು ಹಾಕಿದ್ದ. ಹೆಂಡತಿಯ ಬಳಿಯೇ ಆಕೆಯ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನಂತೆ. ಹೀಗಾಗಿ ಸಹಿಸಲಾರದೆ ಕೊಲೆ ಮಾಡಿರುವುದಾಗಿ ಕೊಲೆಯಾದ ಲೋಕನಾಥ್ನ ಪತ್ನಿ ಹಾಗೂ ಅತ್ತೆ ತಿಳಿಸಿದ್ದಾರೆ.
ಅಳಿಯನನ್ನು ಮುಗಿಸುವ ಪ್ಲ್ಯಾನ್ ಮಾಡಿದ್ದ ಅತ್ತೆ, ” HOW TO KILL ” ಪುಸ್ತಕ ಖರೀದಿಸಿ ತಂದು ಓದಿದ್ದಾಳೆ. ಬಳಿಕ ಪಾರ್ಟಿ ನೆಪದಲ್ಲಿ ಮಗಳ ಮೂಲಕ ಅಳಿಯನನ್ನು ಕರೆಸಿಕೊಂಡು, ಊಟದಲ್ಲಿ ನಿದ್ರೆ ಮಾತ್ರೆ ಹಾಕಿ, ಅಳಿಯನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.