ಮಾಸ್ತಿಕಟ್ಟೆ ಮತ್ತು ಕುಂದಾಪುರ ಬಾಳೆಬರೆ ಘಾಟ್ನಲ್ಲಿ ತಡರಾತ್ರಿ ಟ್ಯಾಂಕರ್ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ.! ಮಾನವೀಯತೆ ಮೆರೆದ ಆರ್ ಎಂ ಮಂಜುನಾಥ್ ಗೌಡ ಮತ್ತು ಸ್ಥಳೀಯ ವೈದ್ಯರು.
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಮಂಗಳವಾರ 25ರ ತಡರಾತ್ರಿ ಮಾಸ್ತಿಕಟ್ಟೆ ಕುಂದಾಪುರ ಬಾಳೆಬರೆ ಘಾಟಿ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬಸ್ಸಿನಲ್ಲಿದ್ದ ಸಾಕಷ್ಟು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಾಸ್ತಿಕಟ್ಟೆ ಆಸ್ಪತ್ರೆಯ ಜನಸ್ನೇಹಿ ಡಾಕ್ಟರ್ಗಳಾದ ಮಾಸ್ತಿಕಟ್ಟೆಯ ಡಾ ಪ್ರದೀಪ್ ಡಿಮ್ಯಾಲೋ, ಡಾ ಪ್ರವೀಣ್ ಡಿಮ್ಯಾಲೋ ಅವರು ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರಿಗೆ ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ನೀಡಿ ಮಾನವಿಯತೆ ಮೆರೆದಿದ್ದಾರೆ.
ಹೆಚ್ಚಿನ ಚಿಕಿತ್ಸೆಯ ಆವಶ್ಯಕತೆ ಇದ್ದಂತಹ ಗಾಯಾಳುಗಳನ್ನು ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ್ ಗೌಡ ಅವರು ಅವರ ಕೊಡಚಾದ್ರಿ ಯುವಕರ ಪಡೆಯ ಸಹಕಾರ ದೊಂದಿಗೆ ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಗೆ ಆಂಬುಲೆನ್ಸ್ ಹಾಗೂ ಇತರೆ ವಾಹನಗಳ ವ್ಯವಸ್ಥೆಯನ್ನು ಮಾಡಿ ಕಳುಹಿಸಿಕೊಟ್ಟಿದ್ದಾರೆ.
ಜೊತೆಗೆ ಎಲ್ಲಾ ರೋಗಿಗಳಿಗೆ ಭೋಜನದ ವ್ಯವಸ್ಥೆ ನೀಡಿ ಮಕ್ಕಳು ಮಹಿಳೆಯರಿಗೆ ಮತ್ತು ರೋಗಿಗಳಿಗೆ ಅವರವರ ಊರುಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ.
ತಡ ರಾತ್ರಿಯಲ್ಲು ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಮತ್ತು ಡಾಕ್ಟರ್ ಚಿಕಿತ್ಸೆ ಬಗ್ಗೆ ಡಾ ಆರ್ ಎಂ ಮಂಜುನಾಥ ಗೌಡ ಅವರ ಸಹಕಾರದ ಬಗ್ಗೆ ರೋಗಿಗಳು ಹಾಗೂ ಸಂಬಂಧಿಕರು ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜೆಸಿ ಆಸ್ಪತ್ರೆ ತೀರ್ಥಹಳ್ಳಿ ರಕ್ಷಾ ಸಮಿತಿ ಸದಸ್ಯರಾದ ಕುರುವಳ್ಳಿ ನಾಗರಾಜ್ ವಾಸುದೇವ ಕಾಮತ್ ಕಾರ್ತಿಕ್ ಗೌಡ ಅನುಷ್ ಶೆಟ್ಟಿ ಪ್ರಜ್ವಲ್ ಪೂಜಾರಿ ಆಲ್ವಿನ್ ಡೆಮಲ್ಲು ಮತ್ತು ಕೊಡಚಾದ್ರಿ ಸಂಘಟನೆಯ ಕಾರ್ಯಕರ್ತರು ಉಪಸ್ಥಿತಿ ಇದ್ದರು