ಸೌಂದರ್ಯಾ ಪಂಚ ಬಾಷೆಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಹೀಗಾಗಿ 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕಿಯಾಗಿದ್ದರು ಸೌಂದರ್ಯ…….
ಸೌಂದರ್ಯಕ್ಕೆ ನಟಿ ಸೌಂದರ್ಯನೆ ಸಾಟಿ….
ಈಕೆಯ ಹುಟ್ಟು ಸೌಂದರ್ಯವನ್ನು ನೋಡಿಯೇ ಮನೆಯವರು ಸೌಂದರ್ಯ ಅಂತ ಹೆಸರು ಇಟ್ಟಿರಬಹುದೇನೊ..? ಅಂದ್ಹಾಗೆ ಇವರ ಹುಟ್ಟಿದ ಹೆಸರು ಸೌಮ್ಯಾ ಸತ್ಯನಾರಾಯಣ. ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದ ಹಾಗೆ ಇವರ ಹೆಸರು ಸೌಂದರ್ಯಾ ಅಂತ ಬದಲಾಗಿಹೋಯಿತು. ಅತೀ ಕಡಿಮೆ ಸಮಯದಲ್ಲಿ ಅತೀ ದೊಡ್ಡ ಹೆಸರು ಸಂಪಾದಿಸಿದಂತ ಹೆಸರಾಂತ ನಾಯಕಿ ಅಂದರೆ ಅದು ಸೌಂದರ್ಯಾ ಮಾತ್ರ..!
ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಾಯಕಿಯಾಗಿ ನಟಿಸಿದ ಸೌಂದರ್ಯಾ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಆದರು ದುರಾದೃಷ್ಟವಶಾತ್ 2004, ಏಪ್ರಿಲ್ 17ರಂದು ತಮ್ಮ 27ನೇ ವಯಸ್ಸಿನಲ್ಲಿ ಬಿಜೆಪಿಯ ಪರ ಪ್ರಚಾರಮಾಡಲು ವಿಮಾನದಲ್ಲಿ ಹೊದಂತ ಸಮಯದಲ್ಲಿ ದುರಾದೃಷ್ಟವಶಾತ್ ವಿಮಾನ ದುರಂತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದರು. ಈ ಸಾವನ್ನು ಇಂದಿಗೂ ಸಿನಿಮಾ ಪ್ರೇಮಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ವಿಧಿಯಾ ಆಟದ…
ನಟಿ ಸೌಂದರ್ಯಾ ನಮ್ಮನ್ನು ಅಗಲಿ ಎರಡು ದಶಕಗಳಳೆ ಉರುಳಿದೆ. ಆದರೂ ಸೌಂದರ್ಯಾ ಬಗ್ಗೆ ಒಂದಲ್ಲ ಒಂದು ಸಂಗತಿಗಳನ್ನು ನಿತ್ಯ ಹೊರಬರುತ್ತಲೇ ಇರುತ್ತವೆ.
ಬಹುಭಾಷಾ ನಟಿ ಸೌಂದರ್ಯಾ ಬಿಜೆಪಿ ಪರಪ್ರಚಾರ ಮಾಡುತ್ತಿದ್ದರು. ಈ ವೇಳೆ ಪ್ರಚಾರಕ್ಕೆ ವಿಮಾನದ ಮೂಲಕ ತೆಲಂಗಾಣದ ಕರೀಂನಗರಕ್ಕೆ ತಲುಪಬೇಕಿತ್ತು. ವಿಮಾನ ಏರುವುದಕ್ಕೂ ಮುನ್ನ ಸೌಂದರ್ಯ ತನ್ನ ಅತ್ತಿಗೆ ಬಳಿ ಎರಡು ವಸ್ತುಗಳಿಗೆ ಬೇಡಿಕೆ ಇಟ್ಟಿದ್ದರಂತೆ..? ಅದೇನು ಅನ್ನೋದರ ಡಿಟೈಲ್ಸ್ ಇಲ್ಲಿದೆ.
ಬಿಜೆಪಿ ಪರವಾಗಿ ಸೌಂದರ್ಯಾ ಪ್ರಚಾರಕ್ಕೆ ಮುಂದಾಗಿದ್ದರು
ಸೌಂದರ್ಯಾ ಪಂಚ ಬಾಷೆಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಹೀಗಾಗಿ 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕಿಯಾಗಿದ್ದರು ಸೌಂದರ್ಯ. ಮೊದಲೇ ನಿಗದಿಯಾಗಿದ್ದಂತೆ ತೆಲಂಗಾಣದ ಕರೀಂನಗರದಲ್ಲಿ ಅಂದು ಚುನಾವಣಾ ಪ್ರಚಾರ ಮಾಡಬೇಕಿತ್ತು.
ಸೌಂದರ್ಯಾಗೆ ಸಿನಿಮಾ ಜೊತೆ ಜೊತೆಗೆ ರಾಜಕೀಯದಲ್ಲೂ ಬೆಳೆಯ ಬೆಕೆನ್ನುವ ಒಲವು ಬೆಳೆಸಿಕೊಂಡಿದ್ದರು. ಹೀಗಾಗಿಯೇ ಬಿಜೆಪಿ ಪರ ಪ್ರಚಾರ ಮಾಡುವುದಕ್ಕೆ ಮುಂದಾಗಿದ್ದರು. ಸೌಂದರ್ಯಾ ಅಣ್ಣ ಅಮರ್‌ನಾಥ್ ಕೂಡ ಇವರ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅಂದು ವಿಧಿಯಾಟವೆ ಬೇರೆಯದಾಗಿತ್ತು. ಸಾವಿನ ಕೆಲವು ಕ್ಷಣಗಳ ಮುಂಚೆ ವಿಮಾನ ಏರುವುದಕ್ಕೂ ಮುನ್ನ ಸೌಂದರ್ಯಾ ತನ್ನ ಅತ್ತಿಗೆ ಬಳಿ ಎರಡು ವಸ್ತುಗಳಿಗೆ ಬೇಡಿಕೆಯನ್ನು ಇಟ್ಟಿದ್ದರಂತೆ..?
ಅಪಘಾತಕ್ಕೀಡಾಗುವ ಮುನ್ನ ಇಟ್ಟ ಬೇಡಿಕೆ ಯಾದರೂ ಏನು?
ಸೌಂದರ್ಯಾ ಹಾರ್ಡ್ ವರ್ಕರ್, ಕೆಲಸದಲ್ಲಿ ಶಿಸ್ತು. ಇದನ್ನು ಅವರ ಅಭಿನಯಿಸಿದ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಹಾಗೂ ಜೊತೆಗೆ ಅಭಿನಯಿಸಿದ ನಾಯಕ ನಟರು ಸಹಕಲಾವಿದರೆ ಅದೆಷ್ಟೋ ಬಾರಿ ಹೇಳಿದ್ದಾರೆ. ಚುನಾವಣಾ ಪ್ರಚಾರ ಮಾಡುವಾಗಲೂ ಇದೇ ಶಿಸ್ತನ್ನು ಕಾಪಾಡಿಕೊಂಡಿದ್ದರು. ಬಿಜೆಪಿ ಪಕ್ಷ ಸೌಂದರ್ಯಾ ಜೊತೆ ಎರಡು ತಿಂಗಳು ಪ್ರಚಾರಕ್ಕೆಂದು ಒಡಂಬಡಿಕೆ ಮಾಡಿಕೊಂಡಿತ್ತು. ಹೀಗಾಗಿ ಸೌಂದರ್ಯಾ ಪ್ರಚಾರಕ್ಕೆಂದು ವಿಮಾನ ಏರಬೇಕು ಅನ್ನುವಾಗ, ಅವರಿಗೆ ಎರಡು ವಿಷಯಗಳನ್ನು ಗಮನಕ್ಕೆ ಬಂದಿತ್ತು.
ಹೀಗಾಗಿ ಅತ್ತಿಗೆಯನ್ನು ಕರೆದು, ತನ್ನ ಬಳಿ ಕಾಟನ್ ಸೀರೆಗಳು ಇಲ್ಲ ಅದನ್ನು ಖರೀದಿ ಮಾಡುವಂತೆ ಹೇಳಿದ್ದರು. ಅಲ್ಲದೆ ಕುಂಕುಮ ಇಲ್ಲದೆ ಇರುವುದು ಗಮನಕ್ಕೆ ಬಂದಿತ್ತು. ಇವೆರಡನ್ನು ರೆಡಿ ಇಡುವಂತೆ ಹೇಳಿದ್ದರಂತೆ..!! ಇದನ್ನು ಇವರ ಅತ್ತಿಗೆ ನೆನಪಿಸಿಕೊಂಡು ಆಗಾಗ ದುಃಖಿಸುತ್ತಾರೆ. ಅಂದು ಸೌಂದರ್ಯ ವಿಮಾನ ಏರಿದ್ದಷ್ಟೇ ಸೌಂದರ್ಯಾ ಮತ್ತೆ ವಾಪಸ್ ಬರಲೇ ಇಲ್ಲ.
ಸೌಂದರ್ಯರ ಸಾವು ವಿಮಾನ ಪತನದಿಂದಲೆ ಅಂತ ವಿಧಿ ಬರೆದಿದ್ದನೇನೊ ..!
ಸೌಂದರ್ಯಾ ಹಾಗೂ ಅಣ್ಣ ಅಮರ್‌ನಾಥ್ ಇಬ್ಬರೂ ಬೆಂಗಳೂರಿನಿಂದ ಸೆಸ್ಸಾ 180 ಅನ್ನೋ ಲಘು ವಿಮಾನದಲ್ಲಿ ಕರೀಂನಗರಕ್ಕೆ ತೆರಳುತ್ತಿದ್ದರು. ಬೆಳಗ್ಗೆ ಸರಿಸುಮಾರು 11.05ಕ್ಕೆ ವಿಮಾನ ಟೇಕ್ಆಫ್ ಆಗಿದ್ದಷ್ಟೇ. ಕ್ಷಣಾರ್ಧದಲ್ಲಿ ವಿಮಾನ ಬೆಂಕಿಗೆ ಆಹುತಿ ಆಯ್ತು.
ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿಯೂ ನಟಿಸಿದ್ದ ನಟಿ ಕೊನೆಯ ಆಸೆಗಳೂ ಕೂಡ ಹಾಗೇ ಉಳಿದೇ ಬಿಟ್ಟವು. ಸದಾ ನಗು ನಗುತ್ತಾ, ಚುರುಕು ಸ್ವಭಾವದವರಾಗಿದ್ದ ಸೌಂದರ್ಯಾ ದುರಂತ ಅಂತ್ಯ ಕಂಡಿದ್ದನ್ನು ಇನ್ನೂ ಅಭಿಮಾನಿಗಳು ಅರಗಿಸಿಕೊಳ್ಳಲು ಆಗುತ್ತಿಲ್ಲ .
ಸುಧೀರ್ ವಿಧಾತ, ಶಿವಮೊಗ್ಗ