ಹುಬ್ಬಳ್ಳಿ: ಮಹಜರಿಗೆ ಕರೆತಂದ ರೌಡಿಯಿಂದ ಸಬ್ಇನ್ಸಪೆಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ.ಕೂದಲೆಳೆ ಅಂತರದಲ್ಲಿ ಬದುಕುಳಿದ ಸಬ್ಇನ್ಸಪೆಕ್ಟರ್!!
news.ashwasurya.in
ಹುಬ್ಬಳ್ಳಿಯ ನಟೋರಿಯಸ್ ರೌಡಿ ಸತೀಶ್ ಗುನ್ನಾ ಎಂಬಾತನೇ ಸಬ್ಇನ್ಸಪೆಕ್ಟರ್
ವಿನೋದ್ ದೊಡ್ಡಲಿಂಗಪ್ಪನವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ನಟೋರಿಯಸ್ ರೌಡಿ ಸತೀಶ್ ಗುನ್ನಾ ಪ್ರಕರಣ ಒಂದಕ್ಕೆ ಸಂಭಂದಿಸಿದಂತೆ ಸ್ಥಳ ಮಹಜರು ಮಾಡುವ ಸಂಧರ್ಭದಲ್ಲಿ ಕಲ್ಲಿನಿಂದ ಪಿಎಸ್‌ಐ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ PSI ದೊಡ್ಡಲಿಂಗಪ್ಪನವರ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರೆದಿದೆ.
ರೌಡಿಶೀಟರ್ ಸಬ್ಇನ್ಸಪೆಕ್ಟರ್ ಮೇಲೆ
ಹಲ್ಲೆಗೆ ಯತ್ನಿಸಿದಾಗ ಪೋಲಿಸರು ತಮ್ಮ ರಿವಲ್ವಾರಿಗೆ ಕೆಲಸಕೊಟ್ಟಿದ್ದಾರೆ ಆತನ ಕಾಲಿಗೆ ಗುಂಡು ತೂರಿಸಿದ್ದಾರೆ. ಈ ಘಟನೆ ಹುಬ್ಬಳ್ಳಿ ನಗರದಲ್ಲಿ ಶನಿವಾರ ನಡೆದಿದೆ.
ಪ್ರಕರಣ ಹಿನ್ನಲೆ :
ಕಳೆದ ಶನಿವಾರ ಸಂಜೆ ನಟೋರಿಯಸ್ ರೌಡಿ ಸತೀಶ್ ಗುನ್ನಾನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದರು. ಕೋರ್ಟ್ ವಾರೆಂಟ್ ಹಿನ್ನೆಲೆಯಲ್ಲಿ ರೌಡಿ ಸತೀಶ್ ಅನ್ನು ಬಂಧಿಸಲು ಪೊಲೀಸರು ತೆರಳಿದ್ದರು. ರೌಡಿ ಸತೀಶ್ ಗುನ್ನಾ ಸ್ಟೇಷನ್ ರಸ್ತೆಯಲ್ಲಿ ಗೇಟವೇ ಬಾರ್‌ನಲ್ಲಿ ಕುಡಿಯುತ್ತ ಕೂತಿದ್ದ, ಪೊಲೀಸರು ಬಂಧಿಸಲು ತೆರಳುತ್ತಿದ್ದಂತೆ ಮೊದಲೆ ನಶೆಯ ಗುಂಗಿನಲ್ಲಿದ್ದ ಸತೀಶ್ ಗುನ್ನಾ ತಲ್ವಾರ್ ಹಿಡಿದು ಪೊಲೀಸರ ಮೇಲೆ ದಾಳಿ ಮಾಡಿದ್ದನೆ. ಆ ಸಂಧರ್ಭದಲ್ಲಿ ಪೋಲಿಸರು ಸಿನಿಮಾ ರೀತಿಯಲ್ಲಿ ರೌಡಿ ಸತೀಶ್ ಗುನ್ನಾನನ್ನು ಬಂಧಿಸಿದ್ದಾರೆ.
ರೌಡಿ ಸತೀಶ್ ಗುನ್ನಾನನ್ನು ಬಂಧಿಸಿದ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆಯಂತೆ.
ಸಂಜೆ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯ ಗೇಟ್ ವೇ ಬಾರ್‌ನಲ್ಲಿ ರೌಡಿ ಸತೀಶ್ ಗುನ್ನಾನನ್ನ ಪೊಲೀಸರು ಬಂಧಿಸಿದ್ದರು. ಬಂಧನದ ಬಳಿಕ ರಾತ್ರಿ ಪೊಲೀಸರು ಮಹಜರುಗೆ ತೆರಳಿದ್ದರು. ಆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಸಬ್ ಇನ್ಸಪೆಕ್ಟರ್ ವಿನೋದ್ ಅವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ತಕ್ಷಣವೇ ಸತೀಶ್ ಗುನ್ನಾ ಮೇಲೆ ಸಬ್ ಇನ್ಸಪೆಕ್ಟರ್ ರಫೀಕ್ ತಹಶಿಲ್ದಾರ್ ಕೈಯಲ್ಲಿದ್ದ ರಿವಲ್ವಾರ್ ನಿಂದ ಆತನ ಕಾಲಿಗೆ ಗುಂಡು ತೂರಿಸಿದ್ದಾರೆ. ರೌಡಿಶೀಟರ್ ಸತೀಶ್ ಅಲ್ಲೆ ಕುಸಿದಿದ್ದಾನೆ.ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋಲಿಸರ ಗುಂಡಿನ ಸದ್ದು ಮೊರೆಯುತ್ತಿದ್ದಂತೆ ಪಾತಕಲೋಕದ
ನಟೋರಿಯಸ್ ಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಂತಾಗಿದೆ.
ಹುಬ್ಬಳ್ಳಿ-ಧಾರವಾಡ ಕಮಿಷನರ್ ಆದೇಶದ ಮೇರೆಗೆ ಕಳೆದ ಹದಿನೈದು ದಿನಗಳಿಂದ ಅವಳಿ ನಗರದಲ್ಲಿ ಪೋಲೀರು ರೌಡಿಗಳ ವಿರುದ್ಧ ಸಮರಸಾರಿದ್ದಾರೆ ರಾತ್ರಿ ಹಗಲೆನ್ನದೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಕಮಿಷನರ್ ರೇಣುಕಾ ಸುಕುಮಾರ್ ಅವರು ಆಸ್ಪತ್ರೆಗೆ ಭೇಟಿ ಸಬ್ಇನ್ಸಪೆಕ್ಟರ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ಆರೋಪಿ ಮೇಲೆ ಐದು ಪ್ರಕರಣಗಳಿವೆ. ಸತೀಶ್ ಗುನ್ನಾ ನಟೋರಿಯಸ್ ರೌಡಿಯಾಗಿದ್ದು ಇತನ ಹೆಸರು ರೌಡಿಶೀಟ್ ನಲ್ಲಿ ದಾಖಲಾಗಿದೆ. ಆರೋಪಿ ಬಂಧನಕ್ಕೆ ಕೋರ್ಟ್ ವಾರೆಂಟ್ ಇತ್ತು. ಎರಡು ವರ್ಷಗಳಿಂದ ಆರೋಪಿ ಸತೀಶ್ ಗುನ್ನಾ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ನಟೋರಿಯಸ್ ರೌಡಿಗಳ ಮೇಲೆ ಬಿಗಿ ಹಿಡಿತ ಇಡಲು ವಾರೆಂಟ್ ಕಾರ್ಯಗತ ಮಾಡಲು ಪೊಲೀಸರು ಪಕ್ಕಾ ಮಾಹಿತಿ ಅಧಾರದ ಮೇಲೆ ಆತನನ್ನು ಪತ್ತೆಹಚ್ಚಿ ಬಂಧಿಸಿ ಠಾಣೆಗೆ ಕರೆತಂದಿದ್ದರು.
ರಾತ್ರಿ 9 ಗಂಟೆ ಸುಮಾರಿಗೆ ಸ್ಥಳ ಮಹಜರು ಮಾಡೋಕೆ ಪೊಲೀಸರು ಆತನನ್ನು ಕರೆದುಕೊಂಡು ತೆರಳಿದ್ದರು. ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ನೇತೃತ್ವದ ತಂಡ ತೆರಳಿತ್ತು ಆ ಸಂಧರ್ಭದಲ್ಲಿ ಪಿಎಸ್ಐ ವಿನೋದ್ ಅವರ ಮೇಲೆ ಸತೀಶ್ ಗುನ್ನಾ ಕಲ್ಲಿನಿಂದ ದಾಳಿ ಮಾಡಿದ್ದಾನೆ. ಹೀಗಾಗಿ ಇನ್ಸಪೆಕ್ಟರ್ ರಫೀಕ್ ತಹಶೀಲ್ದಾರ್ ಮೂರು ಸುತ್ತು ಗುಂಡು ಹಾರಿಸಿದ್ದರು. ಗಾಳಿಯಲ್ಲಿ ಎರಡು ಹಾರಿಸಿ, ಒಂದು ಗುಂಡು ರೌಡಿ ಸತೀಶ್ ಕಾಲಿಗೆ ತೂರಿಸಿದ್ದರು.
ಸುಧೀರ್ ವಿಧಾತ ,ಶಿವಮೊಗ್ಗ